ಕಾಶ್ಮೀರಿ ಪಂಡಿತ ಕೃಷ್ಣ ಭಟ್ ಹಂತಕ ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ ಸಾವು

encounter-in-jammu-kashmir-three-terrorists

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮುಂಜ್ ಮಾರ್ಗ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಲಷ್ಕರ್-ಎ-ತೈಬಾ ಭಯೋತ್ಪಾದಕರು ಹತರಾಗಿದ್ದಾರೆ.

ಮೃತ ಪಟ್ಟ ಉಗ್ರರಲ್ಲಿ ಕಾಶ್ಮೀರಿ ಪಂಡಿತ ಪುರಾಣ ಕೃಷ್ಣ ಭಟ್ ಹಂತಕ ಕೂಡ ಸೇರಿದ್ದಾನೆ. ಭಯೋತ್ಪಾದಕ ಲತೀಫ್ ಲೋನ್ ಕಾಶ್ಮೀರಿ ಪಂಡಿತ ಕೃಷ್ಣ ಭಟ್ ಹತ್ಯೆ ಆರೋಪಿಯಾಗಿದ್ದಾನೆ ಮತ್ತು ನೇಪಾಳದ ಟಿಲ್ ಬಹದ್ದೂರ್ ಥಾಪಾ ಹತ್ಯೆಯಲ್ಲಿ ಉಮರ್ ನಜೀರ್ ಭಾಗಿಯಾಗಿದ್ದಾನೆ ಎಂದು ವರದಿಯಾಗಿದೆ.

ಹತರಾದ ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೀಗ ಇಡೀ ಪ್ರದೇಶವನ್ನು ಭದ್ರತಾಪಡೆ ಸುತ್ತುವರಿದಿದೆ.

ಇದನ್ನೂ ಓದಿರಿ: ಒಂದು ಕೋಟಿ ತೆರಿಗೆ ಕಟ್ಟಿ, ಇಲ್ಲಾಂದ್ರೆ ಸೀಜ್ ಮಾಡ್ತೀವಿ: ತಾಜ್‌ಮಹಲ್‌ ಗೆ ತೆರಿಗೆ ಇಲಾಖೆ ನೋಟೀಸ್!

LEAVE A REPLY

Please enter your comment!
Please enter your name here