ಇಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಆರೋರಾ ಸುದ್ದಿಗೋಷ್ಠಿ ಏರ್ಪಡಿಸಿ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಅಲ್ಲದೇ ಇಂದಿನಿಂದಲೇ ಚುನಾವಣಾ ನೀತಿಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಲೋಕಸಭಾ ಚುನಾವಣೆಯು 7 ಹಂತಗಳಲ್ಲಿ ನಡೆಯಲಿದ್ದು, ಮೇ.23ರಂದು ಫಲಿತಾಂಶ ಹೊರಬೀಳಲಿದೆ. 2019 ರ ಲೋಕಸಭಾ ಚುನಾವಣೆಯು ಎಪ್ರಿಲ್ 11 ರಿಂದ ಪ್ರಾರಂಭವಾಗಿ ಎಪ್ರಿಲ್ 18, ಎಪ್ರಿಲ್ 23, ಎಪ್ರಿಲ್ 29, ಮೇ 6, ಮೇ 12 ಮತ್ತು ಮೇ 19 ರಂದು ನಡೆಯಲಿವೆ. ಇನ್ನು ಕರ್ನಾಟಕದಲ್ಲಿ ಎಪ್ರಿಲ್ 18 ಮತ್ತು ಎಪ್ರಿಲ್ 23 ರಂದು ಎರಡು ಹಂತದಲ್ಲಿ ಚುನಾವಣಾ ನಡೆಯುವ ಸಾಧ್ಯತೆಯಿದ್ದು, ಮೇ. 23 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.