ನವದೆಹಲಿ (ಸೆ.04): ಡಿಕೆ ಶಿವಕುಮಾರ್ ಅವರನ್ನು ಅಕ್ರಮ ಹಣ ಸಾಗಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಕಾರಣವೊಡ್ಡಿ ನಿನ್ನೆ ನಿರ್ದೇಶನಾಲಯದ ಅಧಿಕಾರಿಗಳು ಬಂದಿಸಿದ್ದರು. ಇಂದು ವಿಚಾರಣೆ ನಡೆಸಿದ ಪಿಎಂಎಲ್ಎ ಕೋರ್ಟ್ ಸೆಪ್ಟೆಂಬರ್ 13 ರ ವರೆಗೂ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

ನಿನ್ನೆ ಬಂದಿಸಲಾಗಿದ್ದ ಡಿಕೆ ಶಿವಕುಮಾರ್ ಅವರನ್ನು ಇಂದು ಮಧ್ಯಾಹ್ನ ದೆಹಲಿಯ ರೋಸ್ ಅವೆನ್ಯೂನಾಯಾಲಯದಲ್ಲಿ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಡಿಕೆ ಶಿವಕುಮಾರ್ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘ್ವಿ, ತಮ್ಮ ಕಕ್ಷಿದಾರರಿಗೆ ಲೋ ಬಿಪಿ,ಶುಗರ್ ಮತ್ತು ಥೈರಾಯಿಡ್ ಸಮಸ್ಯೆಯಿದ್ದು, ಅವರನ್ನು ಆರೋಗ್ಯದ ದೃಷ್ಟಿಯಿಂದ ವಿಶೇಷವಾಗಿ ಪರಿಗಣಿಸಿ ಜಾಮೀನು ನೀಡಬೇಕೆಂದು ಕೇಳಿಕೊಂಡರು.
ಇದಕ್ಕೆ ಪ್ರತಿ ವಾದ ಮಂಡಿಸಿದ ಇಡಿ ಪರ ವಕೀಲ , ತಾವು ಈ ಪ್ರಕರಣವನ್ನು ದಾಖಲೆಗಳ ಆಧಾರದ ಮೇಲೆ ತೆಗೆದುಕೊಂಡಿದ್ದು, ನಮ್ಮ ತನಿಕೆಯನ್ನು ಮುಂದುವರೆಸಲು ಅವರ ಕಸ್ಟಡಿಯ ಅವಶ್ಯಕೆತೆಯಿದ್ದು, ಯಾವುದೇ ಕಾರಣಕ್ಕೂ ಜಾಮೀನನ್ನು ನೀಡಬಾರದು ಎಂದು ಕೇಳಿಕೊಂಡರು.
ಇದನ್ನೂ ಓದಿರಿ: ಡಿ. ಕೆ. ಶಿವಕುಮಾರ್ ರನ್ನು ಮತ್ತೆ 4 ದಿನಗಳ ಕಾಲ ಇ.ಡಿ. ವಶಕ್ಕೆ ನೀಡಿದ ನ್ಯಾಯಾಲಯ

ನ್ಯಾಯಾಲಯವು ಕುಟುಂಬ ಸದಸ್ಯರು ಮತ್ತು ವಕೀಲರನ್ನು ಬೇಟಿಯಾಗುವ ಅವಕಾಶವನ್ನು ನೀಡಿದ್ದು, ಸೆಪ್ಟೆಂಬರ್ 13 ರ ವರೆಗೂ ಜಾರಿ ನಿರ್ದೇಶನಾಲಯದ ವಶದಲ್ಲಿ ಇರಬೇಕಾಗಿದೆ.
SPONSORED CONTENT