dysp-prithvi-postpone-her-marriage-attend-lockdown-duties

ಮಂಡ್ಯ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ, ಇಂತಹ ಸಮಯದಲ್ಲಿ ಪೋಲಿಸರ ಕರ್ತವ್ಯ ಅತೀ ಮಹತ್ವದ್ದಾಗಿದೆ. ಈ ಲಾಕ್ ಡೌನ್ ಯಶಸ್ಸಿನ ಹಿಂದೆ ಪ್ರತಿಯೊಬ್ಬ ಪೋಲಿಸರ ಶ್ರಮ ಅಡಗಿರುವುದು ಸುಳ್ಳಲ್ಲ. ಈ ನಡುವೆ ಮಂಡ್ಯ ಜಿಲ್ಲೆಯ ಮಳವಳ್ಳಿಯ ಡಿ.ವೈ.ಎಸ್.ಪಿ. ಪ್ರಥ್ವಿ ಎಂಬ ಅಧಿಕಾರಿ ತಮ್ಮ ಮದುವೆಯನ್ನು ಮುಂದೂಡಿ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ.

ಮಳವಳ್ಳಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸದ್ಯ ಕಟ್ಟುನಿಟ್ಟಿನ ಲಾಕ್ ಡೌನ್ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಪ್ರಿಲ್ 05 ರಂದು ನಿಗಧಿಯಾಗಿದ್ದ ತಮ್ಮ ಮದುವೆಯನ್ನು ಮುಂದೂಡಿ ತನ್ನ ಮದುವೆಗಿಂತ ಕರ್ತವ್ಯ ಮುಖ್ಯ ಎಂದು ತೋರಿಸಿದ್ದಾರೆ. ಇವರ ನಡೆಗೆ ಭಾರಿ ಪ್ರಮಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಡಿ. ಸಿಎಂ ಅಶ್ವತ್ಥ ನಾರಾಯಣ, ಸಂಸದೆ ಸುಮಲತಾ ಅಬಂರೀಶ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಡಿ. ಸಿಎಂ ಡಾ|| ಅಶ್ವತ್ಥ ನಾರಾಯಣ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ” ತಮ್ಮ ಮದುವೆಯನ್ನೇ ಮುಂದೂಡಿ ಕರ್ತವ್ಯ ಪ್ರಜ್ಞೆಯನ್ನು ಮೆರೆದ ಮಂಡ್ಯ ಜಿಲ್ಲೆಯ ಮಳವಳ್ಳಿಯ ಪೋಲಿಸ್ ಅಧಿಕಾರಿ DYSP ಪ್ರಥ್ವಿ ಅವರಿಗೆ ನನ್ನ ಸೆಲ್ಯೂಟ್ ಎಂದು ಟ್ವೀಟ್ ಮಾಡಿರುವುದು ಗೌರವ ಮೂಡುವಂತೆ ಮಾಡಿದೆ.

dysp-prithvi-postpone-her-marriage-attend-lock-down-duties
Image Copyright: sakshi.com

ಇದನ್ನೂ ಓದಿರಿ: ಅಮೆರಿಕಾದಲ್ಲಿ ಭಾರತೀಯ ವೈದ್ಯೆಗೆ “ಡ್ರೈವ್ ಆಪ್ಫ್ ಹಾನರ್” ವಿಶೇಷ ಗೌರವ..! 

dysp-prithvi-postpone-her-marriage-attend-lockdown-duties

 

LEAVE A REPLY

Please enter your comment!
Please enter your name here