drugs-case-ccb-issue-notices-to-three-including-anchor-akul-balaji

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಕೆಯನ್ನು ಚುರುಕುಗೊಳಿಸಿರುವ ಸಿಸಿಬಿ ಪೋಲಿಸ್ ಅಧಿಕಾರಿಗಳು ನಿರೂಪಕ ಅಕುಲ್ ಬಾಲಾಜಿ, ಬಿಗ್ ಬಾಸ್ ಸ್ಪರ್ಧಿ ಸಂತೋಷ್ ಕುಮಾರ್ ಮತ್ತು ಮಾಜಿ ಶಾಸಕ ಆರ್ ವಿ ದೇವರಾಜ್ ಪುತ್ರ ಯುವರಾಜ್ ಇವರಿಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

ಸ್ಯಾಂಡಲ್ ವುಡ್ ನಲ್ಲಿ ಹಬ್ಬಿರುವ ಡ್ರಗ್ಸ್ ಬಳಕೆಯ ಪ್ರಕರಣದ ತನಿಕೆಯನ್ನು ಕೈಗೆತ್ತಿಕೊಂಡಿರುವ ಸಿಸಿಬಿ ಅಧಿಕಾರಿಗಳು ದಿಗಂತ್ ಮತ್ತು ಅಂದ್ರಿತಾ ರೈ ವಿಚಾರಣೆಯ ಬಳಿಕ ಅಕುಲ್ ಬಾಲಾಜಿ, ಸಂತೋಷ್ ಕುಮಾರ್ ಮತ್ತು ಯುವರಾಜ್ ಅವರಿಗೆ ತನಿಕೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಮೂವರಿಗೂ ವಾಟ್ಸ್ಆಫ್ ಮೂಲಕ ನೋಟಿಸ್ ನೀಡಿರುವ ಅಧಿಕಾರಿಗಳು ನಾಳೆ ಬೆಳಿಗ್ಗೆ 10 ಗಂಟೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

ನೋಟಿಸ್ ಗೆ ಪ್ರತಿಕ್ರೀಯಿಸಿರುವ ಅಕುಲ್ ಬಾಲಾಜಿ, “ನಾನು ಹೈದರಾಬಾದ್ ನಲ್ಲಿದ್ದೇನೆ. ಸಿಸಿಬಿ ಅಧಿಕಾರಿಗಳ ನೋಟಿಸ್ ನನಗೆ ತಲುಪಿದ್ದು, ನಾಳೆ ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ. ನಾನು ವಿಮಾನದಲ್ಲಿ ಅಥವಾ ಬೈ ರೋಡ್ ಬಂದು ಹಾಜರಾಗುತ್ತೇನೆ” ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಪ್ರತಿಕ್ರಿಯಿಸಿರುವ ನಟ ಸಂತೋಷ್ ಕುಮಾರ್, ” ನಾನ್ನು ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಬಾಗಿಯಾಗಲು ಮೈಸೂರಿಗೆ ಬಂದಿದ್ದೇನೆ. ನಾಳೆಗೆ ವಿಚಾರಣೆಗೆ ಹಾಜರಾಗುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಸಂಜನಾ ಗಲ್ರಾನಿಗೆ ಇಂದೂ ಸಿಗಲಿಲ್ಲ ಜಾಮೀನು..!

LEAVE A REPLY

Please enter your comment!
Please enter your name here