ಮೈಸೂರು: ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಖಾಸಗಿ ವಾಹಿನಿಗೆ ಬೇಟಿನೀಡಿದ್ದ ಡ್ರೋನ್ ಪ್ರತಾಪ್ ಅವರು ಕಳೆದೆರಡು ದಿನಗಳಿಂದ ತಲೆಮರೆಸಿಕೊಂಡಿರುವುದಾಗಿ ಹೇಳಲಾಗುತ್ತಿತ್ತು. ಸದ್ಯ ಅವರನ್ನು ಮೈಸೂರು ಪೊಲೀಸರು ಬಂದಿಸಿದ್ದು, ಬೆಂಗಳೂರಿಗೆ ಕರೆತರಲಾಗಿದೆ.
ಹೈದರಾಬಾದ್ ನಿಂದ ವಾಪಸ್ಸಾಗಿದ್ದ ಪ್ರತಾಪ್ ಅವರು ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿ ಜು.16 ರಂದು ಖಾಸಗಿ ವಾಹಿನಿಯೊಂದಕ್ಕೆ ಬೇಟಿ ನೀಡಿದ್ದರು. ನಂತರ ಮನೆಗೆ ತೆರಳಿ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಶು ವೈದ್ಯ ಮತ್ತು ವಿಧಿ ವಿಜ್ಞಾನ ತಜ್ಞ ಡಾ. ಎಚ್ ಎಸ್ ಪ್ರಯಾಗ್ ಅವರು ತಲಘಟ್ಟಪುರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದಾದ ಬಳಿಕ ಡ್ರೋನ್ ಪ್ರತಾಪ್ ಅವರನ್ನು ಬಂದಿಸಲು ಮೂರು ತಂಡಗಳನ್ನು ರಚಿಸಲಾಗಿತ್ತು. ಮೈಸೂರಿನ ಸಂಬಂದಿಕರ ಮನೆಯಲ್ಲಿ ತಂಗಿದ್ದ ಪ್ರತಾಪ್ ಅವರನ್ನು ಇಂದು ಮೈಸೂರು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಇದನ್ನೂಓದಿರಿ:ಭ್ರಷ್ಟಾಚಾರ ಆರೋಪ: ಲೆಕ್ಕಕೊಟ್ಟು “ಅವ್ಯವಹಾರ ಸಾಬೀತಾದ್ರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ” ಎಂದ ಶ್ರೀರಾಮಲು