drone-attack-suspected-at-jammu-air-force-station

ಜಮ್ಮು-ಕಾಶ್ಮೀರ: ಭಾನುವಾರ ಮುಂಜಾನೆ ಜಮ್ಮು ವಿಮಾನ ನಿಲ್ದಾಣದಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ. ಈ ಸ್ಪೋಟದಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಐದು ನಿಮಿಷದ ಅಂತರದಲ್ಲಿ ಎರಡು ಸ್ಫೋಟ ಉಂಟಾಗಿದೆ ಎಂದು ಮಾಹಿತಿ ದೊರೆತಿದೆ.

ಇವೆರಡೂ ಕಡಿಮೆ ತೀವ್ರತೆಯ ಸ್ಪೋಟವಾಗಿದ್ದರಿಂದ ಹೆಚ್ಚಿನ ಹಾನಿಯಾಗಿಲ್ಲ. ಈ ಸ್ಪೋಟಕ್ಕೆ ಸಂಬಂಧಿಸಿದಂತೆ ಶೋಧಕಾರ್ಯ ನಡೆಸಿ, ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಸೇನಾ ಮೂಲಗಳು ತಿಳಿಸಿವೆ.

ಈ ಕೃತ್ಯಕ್ಕೆ ದ್ರೋನ್ ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಏಕೆಂದರೆ ಡ್ರೋನ್ ಗಳಿಂದ ಮಾತ್ರ ರಾಡಾರ್ ಗಳ ಕಣ್ಣು ತಪ್ಪಿಸಲು ಸಾಧ್ಯ. ವಿಮಾನ ನಿಲ್ದಾಣದ ಭದ್ರತಾ ವಲಯದೊಳಗೆ ಡ್ರೋನ್ ಮೂಲಕ ಸ್ಪೋಟಕ ಕಳಿಸಿರುವ ಕುರಿತು ತನಿಖೆಗಳು ಜಾರಿಯಲ್ಲಿವೆ ಎಂದು ಮಾಹಿತಿ ದೊರೆತಿದೆ.

ಇದನ್ನೂ ಓದಿರಿ: ಪಾನ್ – ಆಧಾರ್ ಜೋಡಣೆ ಬಗ್ಗೆ ಗುಡ್ ನ್ಯೂಸ್, ಮತ್ತೆ 3 ತಿಂಗಳು ಅವಧಿ ವಿಸ್ತರಣೆ

LEAVE A REPLY

Please enter your comment!
Please enter your name here