drdo-successfully-test-fires-enhanced-range-122mm-caliber-rocket

ನವದೆಹಲಿ: ಡಿಆರ್ ಡಿಒ ತರಿಸಿರುವ ‘122 ಎಂಎಂ ಕ್ಯಾಲಿಬರ್ ರಾಕೆಟ್ʼನ ವರ್ಧಿತ ಶ್ರೇಣಿಯ ಆವೃತ್ತಿಗಳನ್ನು ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ಪರೀಕ್ಷಿಸಲಾಗಿದ್ದು, ರಾಕೆಟ್ ತನ್ನ ಗುರಿಯನ್ನು ಯಶಸ್ವಿಯಾಗಿ ಮುಟ್ಟುವ ಮೂಲಕ ಪರೀಕ್ಷೆ ಯಶಸ್ವಿಯಾಗಿದೆ.

ನಾಗ್ಪುರದ ಮೆಸರ್ಸ್ ಎಕನಾಮಿಕ್ ಎಕ್ಸ್ ಪ್ಲೋಸಿವ್ಸ್ ಲಿಮಿಟೆಡ್ʼನ ಉತ್ಪಾದನಾ ಸಹಕಾರದೊಂದಿಗೆ, ಪುಣೆ ಮೂಲದ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (ಎಆರ್ ಡಿಇ) ಮತ್ತು ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ (ಎಚ್ ಇಎಂಆರ್ ಎಲ್) ಜಂಟಿಯಾಗಿ ರಾಕೆಟ್ ವ್ಯವಸ್ಥೆಗಳನ್ನ ಅಭಿವೃದ್ಧಿಪಡಿಸಿವೆ. ಈ ವರ್ಧಿತ ರಾಕೆಟ್ ವ್ಯವಸ್ಥೆಯು ಅಸ್ತಿತ್ವದಲ್ಲಿರುವ 122 ಎಂಎಂ ಗ್ರಾಡ್ ರಾಕೆಟ್ʼಗಳನ್ನು ಬದಲಾಯಿಸಲಿದೆ ಎಂದು ಹೇಳಲಾಗಿದೆ.

ಇದನ್ನೂ  ಓದಿರಿ: ರೈಲಿನಲ್ಲಿ ಸ್ವಗ್ರಾಮಕ್ಕೆ ತೆರಳಿದ ರಾಷ್ಟ್ರಪತಿ ರಾಮನಾಥ ಕೋವಿಂದ್

‘122 ಎಂಎಂ ಕ್ಯಾಲಿಬರ್ ರಾಕೆಟ್ʼನ ಯಶಸ್ವಿ ಪರೀಕ್ಷೆಯ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್ ಡಿಒ ಮತ್ತು ತಯಾರಿಕಾ ಸಂಸ್ಥೆಗಳನ್ನು ಅಭಿನಂದಿಸಿದ್ದಾರೆ. ಇನ್ನು ಡಿಆರ್ ಡಿಒ ಅಧ್ಯಕ್ಷ ಡಾ. ಜಿ ಸತೀಶ್ ರೆಡ್ಡಿ ಯಶಸ್ವಿ ಪ್ರಯೋಗದಲ್ಲಿ ಭಾಗಿಯಾದ ತಂಡಗಳ ಪ್ರಯತ್ನವನ್ನು ಶ್ಲಾಗಿಸಿದ್ದಾರೆ.

ಇದನ್ನೂ  ಓದಿರಿ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಟ್ವಿಟ್ಟರ್ ಖಾತೆ ಲಾಕ್ ಮಾಡಿದ ಟ್ವಿಟ್ಟರ್

LEAVE A REPLY

Please enter your comment!
Please enter your name here