ಅಣ್ಣಾವ್ರ ಜನುಮದಿನದಂದು ಗಣ್ಯರಿಂದ ನಟಸಾರ್ವಭೌಮನ ಸ್ಮರಣೆ

ಅದ್ಭುತ ನಟನಾ ಕೌಶಲ್ಯ ಹೊಂದಿದ್ದ ನಟ ಡಾ. ರಾಜ್ ಕುಮಾರ್ ಅವರ 91 ಜನುಮದಿನದ ಈ ಸುಸಂಧರ್ಬದಲ್ಲಿ ಅವರ ಕುರಿತು ಒಂದೆರಡು ವಿಷಯಗಳನ್ನು ತಿಳಿಯುತ್ತ, ಅವರ ಕುರಿತಾದ ಗಣ್ಯರ ಮಾತುಗಳನ್ನು ಆಲಿಸೋಣ.

dr-raj-kumar-on-his-91th-birthday

ಬೆಂಗಳೂರು: ನಮ್ಮ ನೆಚ್ಚಿನ ಅಣ್ಣಾವ್ರ ಜನುಮದಿನವಾದ ಇಂದು ಅವರ ಸಮಾಧಿಗೆ ಇಡಿ ಕುಟುಂಬ ಬೇಟಿ ನೀಡಿ ಪುಷ್ಪಾರ್ಚನೆ ಮಾಡಿದೆ. ಈ ಬಾರಿ ಕೊರೊನಾ ವೈರಸ್ ಹಾವಳಿಯಿರುವುದರಿಂದ ಜನುಮದಿನವನ್ನು ಸರಳವಾಗಿ ಕುಟುಂಬದ ಸದಸ್ಯೆರೆ ಸೇರಿ ಆಚರಿಸಿದ್ದಾರೆ. ಈ ನಡುವೆ ನಟಸಾರ್ವಭೌಮನನ್ನು ಹಲವು ಗಣ್ಯರು ಸ್ಮರಿಸಿದ್ದಾರೆ.

1954 ರಲ್ಲಿ ತೆರೆಕಂಡ ಬೇಡರಕಣ್ಣಪ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡ ರಾಜ್ ಕುಮಾರ್ ಅವರ ಅದ್ಭುತ ನಟನೆ ಜನರಲ್ಲಿ ಅಚ್ಚಳಿಯದೆ ಉಳಿಯಿತು. ಆ ನಂತರದಲ್ಲಿ ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ ಸೇರಿದಂತೆ ಅನೇಕ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು. ಕನ್ನಡ ಚಿತ್ರರಂಗದಲ್ಲಿ ಅದ್ಭುತ ನಾಯಕ ನಟನಾಗಿ ಹೊರಹೊಮ್ಮಿದ್ದಲ್ಲದೆ 200 ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡ ಏಕೈಕ ನಟನಾಗಿ ಉಳಿದಿದ್ದಾರೆ. ಇವರು 1968 ರಲ್ಲಿ ನಟ ಸಾರ್ವಭೌಮ ಎಂಬ ಗೌರವವನ್ನು ಪಡೆದರು. 

ಕೇವಲ ನಟನೆಯಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಂಡಿರದೆ ಹಿನ್ನೆಲೆ ಗಾಯಕರಾಗಿಯೂ ಹಲವಾರು ಚಿತ್ರಗಳಿಗೆ ಧ್ವನಿಯಾಗಿದ್ದಾರೆ. 1971 ರಲ್ಲಿ ತೆರೆಕಂಡ ‘ಕಸ್ತೂರಿ ನಿವಾಸ’, ‘ಬಂಗಾರದ ಮನುಷ್ಯ’ ಅಂತಹ ಚಿತ್ರಗಳು ಇಂದಿಗೂ ತನ್ನ ಜನಪ್ರೀಯತೆಯನ್ನು ಉಳಿಸಿಕೊಂಡಿರುವುದು ಅವರ ನಟನೆಗೆ ಜನರು ಮಾರುಹೊಗಿರುವುದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಇವರ ಕಲಾ ಸೇವೆಯನ್ನು ಗಮನಿಸಿದ ಮೈಸೂರು ವಿಶ್ವವಿದ್ಯಾಲಯವು 1976 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 

ಇಂತಹ ನಟನಾ ಸಾಮರ್ತ್ಯವನ್ನು ಹೊಂದಿದ ಕಲಾವಿದನಿಗೆ ದೇಶದ ಹಲವಾರು ಜನರು ಶರಣಾಗಿದ್ದು, ಅವರ 91ನೇ ಜನುಮದಿನವಾದ ಇಂದು ಡಾ. ರಾಜ್ ಅವರ ನಡುವಿನ ಒಡನಾಟದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮಹಾನ್ ನಟನ ನೆನಪನ್ನು ಹೊರಹಾಕಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಟರಾದ ರಮೇಶ ಅರವಿಂದ್, ಶಿವರಾಜ್ ಕುಮಾರ್, ದರ್ಶನ್, ಪುನಿತ್ ರಾಜಕುಮಾರ್ ಸೇರಿದಂತೆ ಹಲವರ ಟ್ವಿಟರ್ ಲಿಂಕನ್ನು ಈ ಕೆಳಗೆ ಹಂಚಿಕೊಂಡಿದ್ದೇವೆ. 

 

LEAVE A REPLY

Please enter your comment!
Please enter your name here