dont-politicise-national-security-issue-sharad-pawar-to-rahul-gandhi

ಮುಂಬೈ: ರಾಷ್ಟ್ರೀಯ ಭದ್ರತೆಯ ವಿಷಯವನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಉಚಿತವಲ್ಲ ಎಂದು ಎನ್.ಸಿ.ಪಿ. ಅಧ್ಯಕ್ಷ ಶರದ್ ಪವಾರ್ ರಾಹುಲ್ ಗಾಂಧಿಗೆ ತಿಳಿ ಹೇಳಿದ್ದಾರೆ.

ಜೂ. 14-15 ರಂದು ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಒಂದೇ ಸಮನೆ ಟೀಕೆಯನ್ನು ಮಾಡುತ್ತಿದ್ದರು. ಭಾರತದ ಭೂಮಿಯನ್ನು ಚೀನಾ ಸೈನಿಕರು ಆಕ್ರಮಿಸಿಕೊಂಡಿರುವುದನ್ನು ಮೋದಿಯವರು ಮುಚ್ಚಿಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತಂತೆ ಶರದ್ ಪವಾರ್ ಅವರು 1962 ರಲ್ಲಿ ಚೀನಾ ಸೇನೆಯು ಭಾರತದ 45 ಸಾವಿರ ಚದರ ಕಿ.ಮೀ. ಭೂಮಿಯನ್ನು ಆಕ್ರಮಿಸಿಕೊಂಡರು. ಇದನ್ನು ನಾವೆಂದು ಮರೆಯಬಾರದು.

ಇದನ್ನೂ ಓದಿರಿ:ಚೀನಾಗೆ ಟಕ್ಕರ್ ಕೊಡಲು ಗಡಿಯಲ್ಲಿನ ಭದ್ರತೆ ಹೆಚ್ಚಿಸಿದ ಭಾರತ..!

ಗಲ್ವಾನ್ ಕಣಿವೆಯಲ್ಲಿ ನಡೆದ ಗಟನೆಗೆ ಕೇಂದ್ರ ಸರಕಾರವನ್ನು ಹೊಣೆ ಮಾಡುವುದು ಸಮಂಜಸವಲ್ಲ. ನಮ್ಮ ಸೈನಿಕರು ಎಚ್ಚರಿಕೆಯಿಂದ ಇರುವುದರಿಂದಲೇ ಘರ್ಷಣೆ ಉಂಟಾಗಿದೆ. ಇಲ್ಲದಿದ್ದರೆ ಅವರು ವೀಕ್ಷಣಾ ಗೋಪುರ ನಿರ್ಮಿಸಿರುವುದು ತಿಳಿಯುತ್ತಲೇ ಇರಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಸಲ್ಲ ಎಂದು ಪಾಠ ಮಾಡಿದ್ದಾರೆ.

LEAVE A REPLY

Please enter your comment!
Please enter your name here