dont-get-misguided-by-the-posts-being-circulated-in-social-media-dr-giridhara-kaje

ಬೆಂಗಳೂರು: ಕೊರೊನಾ ಸೋಂಕು ದೇಶದಲ್ಲಿ ವೇಗವಾಗಿ ಹರಡುತ್ತಿದ್ದು, ಸಧ್ಯ ಯಾವುದೇ ಔಷಧಗಳು ಇಲ್ಲದಿರುವುದು ಹಲವರಲ್ಲಿ ಆತಂಕವನ್ನು ಉಂಟುಮಾಡುತ್ತಿದೆ. ಈ ನಡುವೆ ಪುರಾತನ ಆಯುರ್ವೇದದಲ್ಲಿ ಇಂತಹ ಸೋಂಕುಗಳ ತಡೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ತಂತ್ರ ಮತ್ತು ಮನೆಮದ್ದುಗಳ ಬಳಕೆ ಹೆಚ್ಚುತ್ತಿವೆ. ಇದಲ್ಲದೇ ಆಯುರ್ವೇದ ವೈದ್ಯರಾದ ಡಾ. ಗಿರಿಧರ್ ಕಜೆ ಅವರು 10 ಕೊರೊನಾ ರೋಗಿಗಳನ್ನು ಆಯುರ್ವೇದ ಔಷಧಗಳನ್ನು ಬಳಸಿ ಗುಣಪಡಿಸಿದರು ಎನ್ನುವ ವಿಚಾರ ಬಹಳಷ್ಟು ಪ್ರಚಾರವನ್ನು ಪಡೆದಿತ್ತು.

ಆದರೆ ನನ್ನಿಂದ ಸಮರ್ಪಕವಾಗಿ ಎಲ್ಲ ಕೊರೊನಾ ಸೋಂಕಿತರಿಗೆ ಔಷಧ ತಲುಪಿಸಲು ಸಾಧ್ಯವಾಗುವುದಿಲ್ಲ ಎಂದು ಅರಿತ ಅವರು ಸರಕಾರದ ಸಹಕಾರವನ್ನು ಕೇಳಿದರು. ಇದಕ್ಕೆ ಸ್ಪಂದಿಸಿದ ಸರಕಾರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಔಷಧಗಳನ್ನು ವಿತರಿಸುವುದಾಗಿ ಹೇಳಿದೆ. ಆದರೆ ಇದರ ಹೊರತಾಗಿ ಡಾ. ಗಿರಿಧರ್ ಕಜೆ ಅವರೇ ಸ್ವತಃ ಚಿಕಿತ್ಸೆಯ ಸಲುವಾಗಿ ಔಷಧವನ್ನು ತಲುಪಿಸುತ್ತಿದ್ದಾರೆ ಎನ್ನುವ ಪೋಸ್ಟರ್ ಗಳು ಸಾಮಾಜಿಕ ತಾಣಗಳಲ್ಲಿ ಎರಡು ದಿನಗಳಿಂದ ವೈರಲ್ ಆಗಿವೆ.

ಸಾಮಾಜೀಕ ತಾಣದಲ್ಲಿ ಅವರ ಪೋಟೋ ಮತ್ತು ದೂರವಾಣಿ ಸಂಖ್ಯೆಗಳನ್ನು ಹಾಕಲಾಗಿರುವ ಪೋಸ್ಟ್ ಹರಿದಾಡುತ್ತಿದೆ. ಇದಲ್ಲದೆ ಕೇವಲ 150 ರೂಪಾಯಿಗಳಿಗೆ ಚಿಕಿತ್ಸೆ ದೊರೆಯುತ್ತದೆ ಎಂದು ಹೇಳಲಾಗಿದೆ. ಆದರೆ ಇದರ ಸತ್ಯಾಸತ್ಯತೆಯೇ ಬೇರೆ ಇದೆ. ಇಂದು ಡಾ. ಗಿರಿಧರ್ ಕಜೆ ಅವರೇ ಸ್ಪಷ್ಟ ಪಡಿಸಿದಂತೆ ಈ ರೀತಿಯ ಯಾವುದೇ ಚಿಕಿತ್ಸೆಯನ್ನು ಅವರು ನೀಡುತ್ತಿಲ್ಲ. ಇದು ಯಾರೋ ಹರಿಬಿಟ್ಟಿದ್ದು, ಈ ಸಮಯದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಶುದ್ಧ ಸುಳ್ಳು ಇದನ್ನು ಯಾರೂ ನಂಬಬಾರದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here