ವೈದ್ಯಕೀಯ ಚಿಕಿತ್ಸೆಗಾಗಿ ಪ್ರಧಾನಿ ನರೇಂದ್ರ ಮೋದಿ ವೆಚ್ಚ ಎಷ್ಟು ಗೊತ್ತಾ? ಇಲ್ಲಿದೆ ನೋಡಿ RTI ಉತ್ತರ

do-you-know-how-much-prime-minister-narendra-modi-spent-on-medical-treatment-check-out-the-rti-answer-here

ಪ್ರಧಾನಿ ನರೇಂದ್ರ ಮೋದಿ ಒಬ್ಬ ವಿಶ್ವ ನಾಯಕ, ಅವರ ನಡವಳಿಕೆಯ ಕುರಿತು ಸದಾ ಒಂದಿಲ್ಲೊಂದು ವಿಚಾರಗಳ ಕುರಿತು ಚರ್ಚೆ ನಡೆಯುತ್ತಲೇ ಇರುತ್ತದೆ. ವಿರೋಧ ಪಕ್ಷಗಳು ಸದಾ ಅವರ ವಸ್ತ್ರ, ಆಹಾರ ಹೀಗೆ ಅನೇಕ ವಿಚಾರಗಳನ್ನು ಎತ್ತಿ ರಾಜಕೀಯ ಮಾಡುವುದು ನಾವೆಲ್ಲಾ ನೋಡಿದ್ದೇವೆ.

ರಾಜಕೀಯ ವಲಯದ ಚರ್ಚೆಗಳೇ ಹಾಗೆ.. ಚುನಾವಣೆ ಬಂದೊಡನೆ ಒಬ್ಬ ನಾಯಕನನ್ನು ಯಾವುದಾದರೊಂದು ರೀತಿಯಲ್ಲಿ ಕಟ್ಟಿಹಾಕಲು ಅವರ ವಿರೋಧಿಗಳು ಸದಾ ಕಾಯುತ್ತಿರುತ್ತಾರೆ. ಅಂತೆಯೇ ನರೇಂದ್ರ ಮೋದಿಯವರನ್ನು ಮತ್ತು ಅವರ ಅಲೆಯನ್ನು ತಡೆಯಲು ಸದಾ ವಿರೋಧಿ ನಾಯಕರು ಪ್ರಯತ್ನಿಸುತ್ತಲೇ ಇರುತ್ತಾರೆ.

ಹಿಂದೊಮ್ಮೆ ಆರ್ ಟಿ ಐ ಮೂಲಕ ಅವರ ಆಸ್ತಿಯ ಕುರಿತಾಗಿ ಮಾಹಿತಿ ಕೇಳುವ ಮೂಲಕ ಅವರನ್ನು ಕಟ್ಟಿಹಾಕುವ ಪ್ರಯತ್ನವನ್ನು ಮಾಡಲಾಯಿತು. ಈ ಪ್ರಶ್ನೆಗೆ ಬಂದ ಉತ್ತರವನ್ನು ಕಂಡು ಅರ್ಜಿದಾರರು ಸೇರಿದಂತೆ ಹಲವಾರು ದಂಗಾಗಿ ಹೋದರು. ಇಷ್ಟೊಂದು ವರ್ಷಗಳ ಕಾಲ ರಾಜಕೀಯದಲ್ಲಿ ಉಳಿದುಕೊಂಡು, ಪ್ರಮುಖ ಸ್ಥಾನದಲ್ಲಿ ಅಧಿಕಾರವನ್ನು ಪಡೆದೂ ಅವರ ಆಸ್ತಿಯು ಕೆಲವೇ ಕೆಲವು ಲಕ್ಷವೆಂದು ತಿಳಿದಾಗ ಹಲವರು ಅವರನ್ನು ಮೆಚ್ಚಿಕೊಂಡರು.

ಇದನ್ನೂ ಓದಿರಿ: ಪ್ರಧಾನಿಗೆ ಉಡುಗೊರೆ ನೀಡಲು ಬೇಲೂರು ಶಿಲಾಬಾಲಿಕೆ ವಿಗ್ರಹ ತಯಾರಿಸಿದ ಯುವ ಕಲಾವಿದ

ನರೇಂದ್ರ ಮೋದಿಯವರನ್ನು ಕುರಿತು ಅವರ ವಿರೋಧಿಗಳು ಕಟ್ಟಿ ಹಾಕಲು ಮತ್ತೊಂದು ಪ್ರಯತ್ನವನ್ನು ಮಾಡಿದರು. ಅದೇನೆಂದರೆ ಅವರು ಸದಾ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುತ್ತಾರೆ. ಅಲ್ಲದೇ ಅಷ್ಟೊಂದು ಪ್ರಯಾಣವನ್ನು ಮಾಡುವ ಅವರು ದೇಶಕ್ಕೆ ಅದೆಷ್ಟು ಪ್ರಮಾಣದಲ್ಲಿ ನಷ್ಟ ಉಂಟುಮಾಡುತ್ತಿರಬಹುದು ಎಂದು ಪ್ರಶ್ನೆ ಎತ್ತಿದರು. ಇದಕ್ಕೆ ಉತ್ತರವಾಗಿ ಸಿಕ್ಕಿದ್ದು ಮಾತ್ರ ಅಚ್ಚರಿಯೇ ಆಗಿತ್ತು. ಇಲ್ಲಿಯೂ ಅವರ ವಿರೋಧಿಗಳು ಸೋತಿದ್ದರು. ಏಕೆಂದರೆ ಇವರು ಒಂದು ಪ್ರಯಾಣವನ್ನು ಏರ್ಪಡಿಸಿದರೆ ಅದೇ ಪ್ರಯಾಣದಲ್ಲಿ ಅದಕ್ಕೆ ಹೊಂದಿಕೆಯಾಗುವಂತೆ ಮತ್ತೆರಡು ಪ್ರಯಾಣಗಳನ್ನು ಒಟ್ಟೊಟ್ಟಿಗೆ ಮಾಡಿ ಬರುತ್ತಿದ್ದರು.

ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇಷ್ಟೊಂದು ದೇಶಗಳನ್ನು ಸುತ್ತಿದರೂ ಸಮಯವನ್ನು ವ್ಯರ್ಥ ಮಾಡದೇ ರಾತ್ರೋ ರಾತ್ರಿ ತಮ್ಮ ಪ್ರಯಾಣವನ್ನು ಮುಂದುವರೆಸಿ ತಮ್ಮ ಕಾರ್ಯವನ್ನು ಕಡಿಮೆ ಸಮಯ ಮತ್ತು ಕಡಿಮೆ ವೆಚ್ಚದಲ್ಲಿ ಮುಗಿಸಿಕೊಂಡು ಹಿಂದಿರುಗುತ್ತಿದ್ದರು. ಅಲ್ಲದೇ ಇವರು ಅಧಿಕಾರಕ್ಕೆ ಬಂದೊಡನೆ ಪತ್ರಕರ್ತರು ಸೇರಿದಂತೆ ವಿದೇಶ ಪ್ರವಾಸಕ್ಕೆ ಸರಕಾರಿ ವೆಚ್ಚದಲ್ಲಿ ತೆರಳುವ ಅಧಿಕಾರಿಗಳ ದಂಡನ್ನು ಕಡಿಮೆ ಮಾಡಿ ಅಗತ್ಯ ಅಧಿಕಾರಿ ಮತ್ತು ಸಚಿವರುಗಳನ್ನು ಮಾತ್ರ ತಮ್ಮ ಜೊತೆಗೆ ತೆಗೆದುಕೊಂಡು ಹೋಗುವ ವಾಡಿಕೆಯನ್ನು ತಂದರು. ಈ ಎಲ್ಲ ಕ್ರಮಗಳಿಂದಾಗಿ ಕಳೆದ ಯುಪಿಎ ಅವಧಿಯ ವಿದೇಶ ಪ್ರಯಾಣದ ವೆಚ್ಚಕ್ಕಿಂತ ಕಡಿಮೆ ವೆಚ್ಚಕ್ಕೆ ತಂದರು.

ಇದೀಗ ಅವರ ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿದಂತೆ ಆರ್ ಟಿ ಐ ಅರ್ಜಿಯೊಂದು ಬಂದಿತ್ತು. ಪುಣೆ ಮೂಲದ ಆರ್ಟಿಐ ಕಾರ್ಯಕರ್ತ ಪ್ರಫುಲ್ ಸರ್ದಾ ಎಂಬುವವರು ಪ್ರಧಾನಿ ಕಾರ್ಯಾಲಯಕ್ಕೆ ನರೇಂದ್ರ ಮೋದಿಯವರು ಪ್ರಧಾನಿಯಾದಾಗಿನಿಂದ ಅವರ ವೈದ್ಯಕೀಯ ವೆಚ್ಚದ ಕುರಿತು ಮಾಹಿತಿ ನೀಡುವತೆ ಅರ್ಜಿಯೊಂದನ್ನು ಸಲ್ಲಿಸಿದ್ದರು.

ಆರ್ಟಿಐ ಕಾರ್ಯಕರ್ತ ಕೇಳಿದ ಪ್ರಶ್ನೆಗೆ ಪ್ರಧಾನ ಮಂತ್ರಿ ಕಾರ್ಯಾಲಯ, “ಮೇ 2014 ರಲ್ಲಿ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸರ್ಕಾರದ ಖಜಾನೆಯಿಂದ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ” ಎಂದು ಉತ್ತರ ನೀಡಿದೆ. ಸಂಸದರು ಮತ್ತು ಕೇಂದ್ರ ಸಚಿವರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತದೆ, ಆದರೂ ದೇಶದ ಪ್ರಧಾನ ಮಂತ್ರಿಗಳು ಅದನ್ನು ಪಡೆದುಕೊಂಡಿಲ್ಲ ಎಂದು ಮಾಹಿತಿ ಹೊರಹಾಕಿದ್ದಾರೆ.

ಆರ್ಟಿಐ ಉತ್ತರದ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಸ್ವತಃ ಪಾವತಿಸುತ್ತಾರೆ ಮತ್ತು ಸರ್ಕಾರದ ಒಂದು ರೂಪಾಯಿಯನ್ನೂ ಇದುವರೆಗೆ ಖರ್ಚು ಮಾಡಿರುವುದಿಲ್ಲ ಎಂದು ಮಾಹಿತಿ ನೀಡಿದೆ. ಈ ಮೂಲಕ ಪ್ರಧಾನ ಮಂತ್ರಿಯಾದ ತಮಗೆ ನೀಡಲಾಗುವ ಉಚಿತ ವೈದ್ಯಕೀಯ ಸೌಲಭ್ಯವನ್ನು ಬಳಸಿಕೊಳ್ಳದೇ, ತಮ್ಮ ಅಗತ್ಯ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುತ್ತಾರೆ ಎಂಬದು ಬೆಳಕಿಗೆ ಬಂದಿದೆ.

ಇದನ್ನೂ ಓದಿರಿ: ಬ್ರೆಜಿಲ್​ನಲ್ಲಿ ಭುಗಿಲೆದ್ದ ಪ್ರತಿಭಟನೆ: ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಎಲ್ಲರೂ ಗೌರವಿಸಿ-ಮೋದಿ

LEAVE A REPLY

Please enter your comment!
Please enter your name here