do-not-bring-pm-name-in-every-matter-prathap-simha-reaction-to-siddaramiah

ಮೈಸೂರು: ಸಿದ್ಧರಾಮಯ್ಯನವರು ಪ್ರತಿ ಬಾರಿಯೂ ಮೋದಿಯವರನ್ನು ಮದ್ಯ ಎಳೆದು ತರುತ್ತಾರೆ, ಅವರು ತಮ್ಮ ಮಟ್ಟವನ್ನು ಪ್ರಧಾನಿ ಮಟ್ಟಕ್ಕೆ ಏರಿಸಿಕೊಳ್ಳುವುದು ಬೇಡ ನಾವೆಲ್ಲಾ ಇದ್ದೇವೆ, ಉತ್ತರಿಸುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಹೇಳಿದ್ದಾರೆ.

ಮೈಸುರಿನಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನು ಯಾವ ಪ್ರಶ್ನೆ ಕೇಳಿದರೂ ಮದ್ಯ ಪ್ರಧಾನಿಗಳನ್ನು ಎಳೆದು ತರುತ್ತಾರೆ. ಮಾತೆತ್ತಿದರೆ ಪಿ.ಎಂ. ಕೇರ್ ಪಂಡ್ ಲೆಕ್ಕವನ್ನು ಕೇಳುತ್ತಾರೆ. ನಿಮ್ಮ ಸ್ಥಾನವನ್ನು ಪ್ರಧಾನಿ ಲೆವಲ್ಲಿಗೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಿರೋ ಹೇಗೆ ?  ನಿಮ್ಮ ವ್ಯಾಪ್ತಿ ಕರ್ನಾಟಕದ ಒಳಗೆ ಇರಲಿ. ಎಲ್ಲದಕ್ಕೂ ಪ್ರಧಾನಿಗಳನ್ನು ಎಳೆದು ತರಬೇಡಿ. ನಮ್ಮನ್ನು ಕೇಳಿ, ನಾವು ಉತ್ತರಿಸುತ್ತೇವೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರಿಗೆ ಪ್ರಶ್ನೆ ಕೇಳುವ ಎಲ್ಲ ಹಕ್ಕೂ ಇದೆ. ಆತ್ಮ ನಿರ್ಭರ ಭಾರತ ವರ್ಚುಯಲ್ ರ್ಯಾಲಿಯ ಸಮಾರೋಪ ಸಮಾರಂಭದ ಬಿಎಲ್ ಸಂತೋಷ ಅವರ ಭಾಷಣವನ್ನು ಸಂಪೂರ್ಣ ಕೇಳಿ ಉತ್ತರಿಸಿದ್ದಕ್ಕೆ ವಯಕ್ತಿಕವಾಗಿ ಸಂತೋಷವಾಯಿತು ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿರಿ: ಹೆಚ್ಚುವರಿ ಅಂಬುಲೆನ್ಸ್ ಖರೀದಿಗೆ ಸರಕಾರದ ಚಿಂತನೆ

LEAVE A REPLY

Please enter your comment!
Please enter your name here