ಬಿಗ್ ಬಾಸ್ ಮನೆಯಲ್ಲಿ ಅವಘಡ: ದಿವ್ಯಾ ಉರುಡುಗಗೆ ಏನಾಯಿತು ?

0
divya-uruduga-injured-in-bigboos

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಕರೋನಾ ಲಾಕ್ ಡೌನ್ ನಂತರ ಎರಡನೆಯ ಬಾರಿ ಆರಂಭವಾಗಿದ್ದು, ನೋಡುಗರಲ್ಲಿ ರೋಚಕತೆಯನ್ನು ಹೆಚ್ಚಿಸುತ್ತಿದೆ. ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಮತ್ತಷ್ಟು ಆಕರ್ಷಣೆಯನ್ನು ಉಂಟುಮಾಡುವುದರಲ್ಲಿ ಯಶಸ್ಸನ್ನೂ ಗಳಿಸಿದೆ. ಕಳೆದ ಶನಿವಾರ ಬಿಗ್ ಬಾಸ್ ಸದಸ್ಯರಿಗೆ ಸುದೀಪ್ಎಚ್ಚರಿಕೆಯನ್ನು ಸಹ ನೀಡಿದ್ದರು. ಅಲ್ಲದೇ ಆಟದ ಕೊನೆಯು ಸಮೀಪಿಸುತ್ತಿರುವುದರಿಂದ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಟಾಸ್ಕ್ ಮಾಡುವ ಸಮಯದಲ್ಲಿ ಒಂದು ಅವಘಡವೂ ನಡೆದು ಹೋಗಿದೆ.

ಪ್ರತಿವಾರದಂತೆ ಸೋಮವಾರ ನಾಮಿನೇಷನ್ ಪ್ರಕ್ರಿಯೆ ನಡೆಯಬೇಕು, ಆದರೆ ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಅರವಿಂದ್ ಮತ್ತು ರಘು ಅವರಿಂದ ಸೇವ್ ಆದ ಶಮಂತ್ ಇಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ನಾಮಿನೇಟ್ ಆಗಿರುತ್ತಾರೆ ಎಂದು ಹೇಳಿದ್ದರು. ಈ ನಾಮಿನೇಷನ್ ನಿಂದ ಹೊರಬರಲು ಟಾಸ್ಕ್ ಒಂದನ್ನು ನೀಡಿದ್ದರು. ಮನೆಯ ಸದಸ್ಯರನ್ನು ಎರಡು ತಂಡವನ್ನಾಗಿ ವಿಭಜಿಸಿ, ವಿಜಯಪಥ ತಂಡಕ್ಕೆ ಅರವಿಂದ್ ಅವರನ್ನು ಮತ್ತು ನಿಂಗ್ ಐತೆ ತಂಡಕ್ಕೆ ಮಂಜು ಪಾವಗಡ ಅವರನ್ನು ನಾಯಕರನ್ನಾಗಿ ನೇಮಿಸಿದ್ದರು.

ವಿಜಯಪಥ ತಂಡದಲ್ಲಿ ಅರವಿಂದ್, ಶುಭಾ, ಪ್ರಶಾಂತ್, ವೈಷ್ಣವಿ ಮತ್ತು ಪ್ರಿಯಾಂಕಾ ಅವರಿದ್ದರೆ, ನಿಂಗ್ ಐತೆ ತಂಡದಲ್ಲಿ ಮಂಜು, ದಿವ್ಯಾ ಉರುಡುಗ, ಚಕ್ರವರ್ತಿ, ದಿವ್ಯಾ ಸುರೇಶ ಮತ್ತು ಶಮಂತ್ ಅವರನ್ನು ಸೇರಿಸಲಾಗಿತ್ತು. ಈ ಎರಡು ತಂಡಗಳಿಗೆ ಜಾಕೆಟ್ ಧರಿಸಿರುವ ಸದಸ್ಯರಿಗೆ ಎದುರಾಳಿ ತಂಡದವರು ನಕ್ಷತ್ರ ಅಂಟಿಸುವ ಟಾಸ್ಕ್ ನೀಡಿದ್ದರು.

ಇದನ್ನೂ ಓದಿರಿ: ಮಹತ್ವದ ನಿರ್ಧಾರ ಪ್ರಕಟಿಸಿದ ಸೂಪರ್ ಸ್ಟಾರ್ ರಜನಿಕಾಂತ್ !

ವಿಶಿಷ್ಟವಾದ ಟಾಸ್ಕ್ ಆರಂಭವಾಗಿ ಪ್ರಶಾಂತ್ ಜಾಕೆಟನ್ನು ಜಾಕೆಟ್ ಧರಿಸಿದರು. ಎದುರಾಳಿಯ ತಂಡವು ಬೆನ್ನಟ್ಟಿ ಅವರಿಗೆ ಸ್ಟಾರ್ ಅಂಟಿಸುವಲ್ಲಿ ಯಶಸ್ವಿಯಾದರು. ನಂತರ ನಿಂಗ್ ಐತೆ ತಂಡದಿಂದ ದಿವ್ಯಾ ಉರುಡುಗ ಅವರು ಜಾಕೆಟನ್ನು ಧರಿಸಿದರೆ ಎದುರಾಳಿ ತಂಡವು ಬೆನ್ನಟ್ಟಿತು. ಅರವಿಂದ್ ಸ್ಟಾರ್ ಅಂಟಿಸಲು ಬಂದ ವೇಗಕ್ಕೆ ದಿವ್ಯಾ ಉರುಡುಗ ಅವರು ಗೋಡೆಗೆ ಅಂಟಿಸಿದ್ದ ಗಾಜಿನ ಮೇಲೆ ಹೋಗಿ ಬಿದ್ದರು. ಗಾಜಿನ ಮೇಲೆ ಬಿದ್ದ ರಭಸಕ್ಕೆ ಗಾಜು ಒಡೆದು ಕೈಯಲ್ಲಿ ರಕ್ತ ಸೋರಿದೆ.

divya-uruduga-injured-in-bigboos8

ದಿವ್ಯಾ ಉರುಡುಗ ಅವರ ಕೈಗಳಿಗೆ ಗಾಜು ತಾಗಿ ರಕ್ತ ಸೋರಿದೆ. ಅಲ್ಲದೇ ತಲೆಯ ಬಾಗಕ್ಕೂ ಭಲವಾದ ಹೊಡೆತ ಬಿದ್ದಿರುವಂತೆ ಕಂಡುಬರುತ್ತಿದೆ. ಈ ಸ್ಥಿತಿಯಲ್ಲಿರುವ ಅವರನ್ನು ಬಿಗ್ ಬಾಸ್ ತಕ್ಷಣ ಕರೆಸಿ ಚಿಕಿತ್ಸೆಯನ್ನು ನೀಡಿದ್ದಾರೆ. ದಿವ್ಯಾ ಉರುಡುಗ ಅವರು ಈ ಅವಘಡದ ನಂತರ ಮತ್ತೆ ಆಟವನ್ನು ಮುಂದುವರೆಸುತ್ತಾರಾ ಇಲ್ಲವಾ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿದೆ. ಏಕೆಂದರೆ ಕಳೆದಬಾರಿಯೂ ಇದೇ ರೀತಿಯಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡು ಆಟದಿಂದ ಹೊರಗುಳಿದಿದ್ದರು.

ದಿವ್ಯಾ ಉರುಡುಗ ಅವರು ಉತ್ತಮವಾಗಿ ಆಟವಾಡುತ್ತಿದ್ದು, ಅವರು ಈ ಅಪಘಾತದಿಂದ ಬೇಗನೆ ಚೇತರಿಸಿಕೊಂಡು ಮತ್ತೆ ಬಿಗ್ ಬಾಸ್ ಮನೆಗೆ ಮರಳುವಂತಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here