‘ಮಠ’ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಅವರನ್ನು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ ಎಂಬುವವರಿಗೆ ಹಣ ನೀಡದೆ ವಂಚಿಸಿದ ಆರೋಪದ ಮೇಲೆ ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸ್ ಎಂಬುವವರಿಂದ ಸಾಲದ ರೂಪದಲ್ಲಿ ನಿರ್ದೇಶಕ ಗುರುಪ್ರಸಾದ್ 30 ಲಕ್ಷ ರೂಪಾಯಿಗಳನ್ನು 2016 ರಲ್ಲಿ ಪಡೆದುಕೊಂಡಿದ್ದರಂತೆ. ಇದಕ್ಕೆ ಪ್ರತಿಯಾಗಿ ಚೆಕ್ ಪಡೆದುಕೊಂಡಿದ್ದರಂತೆ. ಸಾಲವನ್ನು ಹಿಂತಿರುಗಿ ಕೇಳಿದಾಗ ಕೆಟ್ಟ ರೀತಿಯಲ್ಲಿ ವರ್ತಿಸಿದ್ದರಂತೆ. ಈ ಕುರಿತು ಶ್ರೀನಿವಾಸ್ ಅವರು ಕಳೆದ ಆಗಸ್ಟ್ ನಲ್ಲಿ ಕೇಸ್ ದಾಖಲಿಸಿದ್ದರು.
ಇದನ್ನೂ ಓದಿರಿ: ಚೆಕ್ ಬೌನ್ಸ್ ಪ್ರಕರಣ: ಮಠ ನಿರ್ದೇಶಕ ಗುರುಪ್ರಸಾದ್ ಗೆ ಜಾಮೀನು
ಹಣ ವಾಪಾಸ್ ನೀಡಿದರೆ ಕೇಸ್ ವಾಪಾಸ್ ತೆಗೆದುಕೊಳ್ಳಲು ಈಗಲೂ ಸಿದ್ಧನಿದ್ದೇನೆ. ಗುರು ಅವರನ್ನು ಇಲ್ಲಿಗೆ ತರುವುದಕ್ಕೆ ನನಗೂ ಇಷ್ಟವಿಲ್ಲ ಎಂದು ಶ್ರೀನಿವಾಸ್ ಹೇಳಿದ್ದಾರೆ.
ಇದನ್ನೂ ಓದಿರಿ: ಕುಖ್ಯಾತ ವಂಚಕ, ಹೈಟೆಕ್ ವೇಶ್ಯಾವಾಟಿಕೆ ಆರೋಪಿ ಸ್ಯಾಂಟ್ರೋ ರವಿ ಅರೆಸ್ಟ್ !