ಶ್ರೀ ಶಿವಕುಮಾರ ಸ್ವಾಮಿಗಳು । did-you-know-the-daily-diary-of-the-sri-shivakumar-swamiji

ಶ್ರೀ ಶಿವಕುಮಾರ ಸ್ವಾಮಿಗಳು ಅಧಿಕಾರ ವಹಿಸಿಕೊಂಡ ದಿನದಿಂದಲೂ ಮಠದ ಎಲ್ಲ ಕೆಲಸಗಳನ್ನೂ ಚಾಚು ತಪ್ಪದೇ ನಡೆಸಿಕೊಂಡು ಬಂದಿದ್ದಾರೆ. ಅಲ್ಲದೇ ಇವರ ಶ್ರಮದ ಫಲವಾಗಿ ಇಂದು ಸಿದ್ದಗಂಗಾ ಕ್ಷೇತ್ರವು 128 ಶಿಕ್ಷಣ ಸಂಸ್ಥೆಗಳನ್ನು ಮತ್ತು 15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಆಹಾರವನ್ನು ಕಲ್ಪಿಸುತ್ತಾ ಬಂದಿದೆ.

ಇಂತಹ ಮಹಾನ್ ಚೇತನ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ಪ್ರತಿನಿತ್ಯ ಅನುಸರಿಸುವ ಕಾರ್ಯ ವಿಧಾನಗಳ ಕುರಿತಾಗಿ ಸ್ವಲ್ಪ ತಿಳಿಸುವ ಪ್ರಯತ್ನ ಇದಾಗಿದೆ ಸ್ನೇಹಿತರೆ….

ಇವರು ಪ್ರತಿನಿತ್ಯವೂ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಸ್ನಾನ ಮಾಡಿ, ಪೂಜಾ ಕೋಣೆಯಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರು. ಇದಾದ ಬಳಿಕ ಇಷ್ಟಲಿಂಗ ಪೂಜೆಯನ್ನು ಮಾಡುತ್ತ, ದೂರದಿಂದ ಸ್ವಾಮಿಗಳ ಧರ್ಶನಕ್ಕೆ ಬರುತ್ತಿದ್ದ ಭಕ್ತಾದಿಗಳಿಗೆ ಭಸ್ಮಗಳನ್ನು ನೀಡಿ ಪೂಜೆಯನ್ನು ಮುಗಿಸುತ್ತಿದ್ದರು.

ಶ್ರೀ ಶಿವಕುಮಾರ ಸ್ವಾಮಿಗಳ । did-you-know-the-daily-diary-of-the-sri-shivakumar-swamiji

ಆಹಾರ ಸೇವನೆಯು ಸುಮಾರು ಆರೂವರೆ ಗಂಟೆಯ ಹೊತ್ತಿಗೆ ಸರಿ ಹೋಗುತ್ತಿತ್ತು. ಬೆಳಗಿನ ಆಹಾರವಾಗಿ ಒಂದು ಅಕ್ಕಿಯಿಂದ ಮಾಡಿದ ಇಡ್ಲಿ, ಹೆಸರುಬೇಳೆಯಿಂದ ಮಾಡಿದ ತೊವ್ವೆ, ಸಿಹಿ ಹಾಗೂ ಕಾರದಿಂದ ಕೂಡಿದ ಚಟ್ನಿ ಮತ್ತು ಎರಡು ತುಂಡು ಸೇಬುವನ್ನು ಸೇವಿಸುತ್ತಿದ್ದರು. ಇದಾದ ಬಳಿಕ ಬೇವಿನ ಚಕ್ಕೆಯಿಂದ ತಯಾರಿಸಲಾದ ಕಷಾಯವನ್ನು ತೆಗೆದುಕೊಳ್ಳುತ್ತಿದ್ದರು.

ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಕಿರಿಯ ಪ್ರಾಥಮಿಕ ಮಕ್ಕಳಿಂದ ಪದವಿ ವಿದ್ಯಾರ್ಥಿಗಳೆಲ್ಲರು ಸೇರಿ ನಡೆಸುವ ಪ್ರಾರ್ಥನೆಯಲ್ಲಿ ಬಾಗಿಯಾಗುತ್ತಿದ್ದರು. ಪ್ರಾರ್ಥನೆಯ ನಂತರ ಕಛೇರಿಯಲ್ಲಿ ದಿನಪತ್ರಿಕೆಯನ್ನು ಓದಿ, ಮಠದ ಆಡಳಿತ ಕಡತಗಳನ್ನು ಪರಿಶೀಲಿಸುತ್ತಿದ್ದರು. ಇದಲ್ಲದೆ ಗಣ್ಯರ ಬೇಟಿ, ಕುಶಲೋಪರಿ ಹೀಗೆ ಸಾಗುತ್ತಿತ್ತು.

ಶ್ರೀ ಶಿವಕುಮಾರ ಸ್ವಾಮಿಗಳ । did-you-know-the-daily-diary-of-the-sri-shivakumar-swamiji

 

ನಂತರದಲ್ಲಿ ಪ್ರಸಾದ ವಿತರಣೆಗಾಗಿ ಮತ್ತು ಭಕ್ತರ ಕಷ್ಟ,ಸುಖಕ್ಕೆ ಸ್ಪಂದಿಸುತ್ತ ಸುಮಾರು ಮೂರುಗಂಟೆಗಳು  ಆಗುತ್ತಿದ್ದವು. ಇದಾದ ಬಳಿಕ ಮಠಕ್ಕೆ ತೆರಳಿ ಸ್ನಾನ ಮತ್ತು ಪೂಜೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಒಂದು ಮುದ್ದೆ ಮತ್ತು ತೊಗರಿ ಸಾಂಬಾರ್ ಊಟವನ್ನು ಮಾಡುತ್ತಿದ್ದರು. ನಾಲ್ಕು ಗಂಟೆಯ ನಂತರ ಮತ್ತೆ ಭಕ್ತರ ಬೇಟಿ, ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪರಿ ಹೀಗೆ ರಾತ್ರಿ 9 ಗಂಟೆಯ ವರೆಗೆ ಸಾಗುತ್ತಿತ್ತು.

ರಾತ್ರಿ ಮಲಗುವ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಇಟ್ಟುಕೊಂಡಿದ್ದರು. ಸುಮಾರು ಹತ್ತುಗಂಟೆಯಿಂದ ಹನ್ನೊಂದರ ವರೆಗೆ ಓದಿನಲ್ಲಿ ಮಗ್ನರಾಗುತ್ತಿದ್ದರು. ಓದಿನೊಂದಿಗೆ ಪ್ರಾರಂಬವಾದ ದಿನಚರಿ ಓದಿನೊಂದಿಗೆ ಮುಕ್ತಾಯವಾಗುತ್ತಿತ್ತು. ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಕರೆಯುವ ಭಕ್ತರ ಮನೆಗಳಿಗೂ ಬೇಟಿ ನೀಡುತ್ತಿದ್ದರು. ಪ್ರಸಾದ ವಿತರಣೆಯ ಸಂದರ್ಭದಲ್ಲಿ ಬಿಸಿ ನೀರನ್ನು ಸೇವಿಸುತ್ತಿದ್ದರು. ಶ್ರೀಗಳ 8 ದಶಕದ ಜೀವನ ಇದೇ ರೀತಿಯಾಗಿ ಸಾಗಿ ಬಂದಿತ್ತು.

ಇದನ್ನೂ ಓದಿರಿ : ನಡೆದಾಡುವ ದೇವರು ಈ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು..!

ಶ್ರೀಗಳಿಗೆ ದೊರೆತ ಪ್ರಶಸ್ತಿಗಳು

ಶ್ರೀ ಶಿವಕುಮಾರ ಸ್ವಾಮಿಗಳ । did-you-know-the-daily-diary-of-the-sri-shivakumar-swamiji
  • ಜಾತ್ಯಾತೀತ ಮತ್ತು ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ ಡಾಕ್ಟರೇಟ್ ಗೌರವವನ್ನು ಸಲ್ಲಿಸಿದೆ.
  • ಪರಮಪೂಜ್ಯ ಸ್ವಾಮೀಜಿಗಳ  100 ವರ್ಷದ ಸಂದರ್ಭದಲ್ಲಿ ಶ್ರೀಗಳ ಸಮಾಜಸೇವೆಯನ್ನು ಪರಿಗಣಿಸಿ ಕರ್ನಾಟಕ ಸರಕಾರ “ಕರ್ನಾಟಕ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
  • 2015 ರಲ್ಲಿ ಭಾರತ ಸರಕಾರ “ಪದ್ಮ ಭೂಷಣ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇದನ್ನೂ ಓದಿರಿ: ತುಳಸಿ ವಿವಾಹ ಮಹತ್ವ, ಆಚರಣೆಯ ವಿಧಾನ ಮತ್ತು ಶುಭಾಶಯ ಸಂದೇಶಗಳು

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here