ಉತ್ತರ ಕೋರಿಯಾ: ಔತಣ ಕೂಟವೊಂದರಲ್ಲಿ ದೇಶದ ಆರ್ಥಿಕ ಮತ್ತು ಆಡಳಿತ ನೀತಿಯನ್ನು ಟೀಕಿಸಿದ ಐವರು ಅಧಿಕಾರಿಗಳಿಗೆ ಮರಣದಂಡನೆಯ ಶಿಕ್ಷೆಯನ್ನು ಕಿಮ್ ಜೊಂಗ್ ಉನ್ ನೀಡಿದ ಘಟನೆಯು ಉತ್ತರ ಕೋರಿಯಾದಲ್ಲಿ ನಡೆದಿದೆ. ಸರಕಾರದ ನೀತಿಯನ್ನು ಪ್ರಶ್ನಿಸಿದ ಕಾರಣಕ್ಕಾಗಿ ಶೂಟ್ ಮಾಡಿ ಐವರು ಅಧಿಕಾರಿಗಳನ್ನು ಕೊಲ್ಲಲಾಯಿತು.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ತನ್ನ ಅಧಿಕಾರಿಗಳ ಔತಣಕೂಟವನ್ನು ಏರ್ಪಡಿಸಿದ್ದನು. ಇಲ್ಲಿ ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು ಎನ್ನಲಾಗಿದೆ. ಇದೆ ಸಮಯದಲ್ಲಿ ಸರಕಾರದ ಅಧಿಕಾರಿಗಳಾದ ಐವರು ಕಿಮ್ ಆಡಳಿತ ನೀತಿಗಳ ಕುರಿತಾಗಿ ಟೀಕೆಯನ್ನು ಮಾಡಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿ ದೇಶದಲ್ಲಿನ ಕೈಗಾರಿಕಾ ನೀತಿಯ ಸುಧಾರಣೆಯ ಅಗತ್ಯತೆ ಕುರಿತಂತೆ ತಿಳಿಸಿದ್ದರು. ಕೊರೊನಾ ಸಂಕಷ್ಟದಿಂದಾಗಿ ಘೋಷಿಸಿದ್ದ ನಿರ್ಬಂಧಗಳ ತೆರವಿಗೆ ವಿದೇಶಿ ಸಹಾಯವನ್ನು ಪಡೆಯಬೇಕು ಎಂದು ಒತ್ತಾಯಿಸಿದರು.
ಐವರಿಗೆ ಮರಣದಂಡನೆ ಶಿಕ್ಷೆ
ಐವರು ಅಧಿಕಾರಿಗಳನ್ನು ಕರೆಸಿ, ಉತ್ತರ ಕೊರಿಯಾದ ಆಡಳಿತವನ್ನು ದುರ್ಭಲಗೊಳಿಸಲು ಪಿತೂರಿ ನಡೆಸಿದ್ದೇವೆ ಎಂದು ತಪ್ಪೋಪ್ಪಿಕೊಳ್ಳುವಂತೆ ಒತ್ತಾಯ ಮಾಡಲಾಯಿತು. ನಂತರ ಐವರು ಅಧಿಕಾರಿಗಳನ್ನು ಗುಂಡಿಟ್ಟು ಕೊಲ್ಲುವಂತೆ ತನ್ನ ಅಧಿಕಾರಿಗಳಿಗೆ ಕಿಮ್ ಜೊಂಗ್ ಉನ್ ಆದೇಶವನ್ನು ನೀಡಿದ ಎನ್ನಲಾಗಿದೆ. ಈ ದೇಶದಲ್ಲಿ ಸರ್ವಾಧಿಕಾರಿಯ ವಿರುದ್ಧ ಮಾತನಾಡುವ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯ ಮರಣದಂಡನೆ ಶಿಕ್ಷೆಯು ದೊರೆಯುತ್ತದೆ.
ಕೊರೊನಾ ನಿಯಂತ್ರಣಕ್ಕಾಗಿ ಗುಂಡಿಟ್ಟು ಕೊಲ್ಲುವಂತೆ ಆದೇಶ
ಉತ್ತರ ಕೊರಿಯಾದಲ್ಲಿ ಯಾವುದೇ ಕೊರೊನಾ ಸಾಂಕ್ರಾಮಿಕ ಪ್ರಕರಣಗಳು ಕಂಡುಬಂದಿಲ್ಲ ಎಂದು ಹೇಳಿರುವ ಕಿಮ್ ತನ್ನ ದೇಶದಲ್ಲಿ ಸೊಂಕಿತರಿಗೆ ಗುಂಡಿಟ್ಟು ಕೊಲ್ಲುವ ಶಿಕ್ಷೆಯನ್ನು ವಿದಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಸೋಂಕು ದೇಶವನ್ನು ಪ್ರವೇಶಿಸಬಾರದು ಎನ್ನುವ ಕಾರಣಕ್ಕಾಗಿ ಚೀನಾದಿಂದ ದೇಶಕ್ಕೆ ಬರುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿಸಿದ್ದಾನೆ. ಅಲ್ಲದೇ ಬಂದಿರುವವರನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಚೀನಾದಿಂದ ಬಂದರೆ ಗುಂಡಿಟ್ಟು ಕೊಳ್ಳಲಾಗುವುದು ಎಂದು ಆದೇಶ ಹೊರಡಿಸಿದ್ದಾನೆ.
ಕ್ರೂರವಾಗಿ ತನ್ನ ಪರಿವಾರದವರನ್ನೇ ಕೊಲ್ಲಿಸಿದ್ದ ಕಿಮ್ ಜೊಂಗ್ ಉನ್
ಕ್ರೂರಿ ಕಿಮ್ ಅಧಿಕಾರವನ್ನು ಹೀಡಿಯಲು ತನ್ನ ಚಿಕ್ಕಪ್ಪ ಕಿಮ್ ಜೊಂಗ್ ಥೆಕ್ ನನ್ನು ಬಂಧಿಸಿ, ಹಸಿದ 120 ನಾಯಿಗಳಿರುವ ಬೋನಿಗೆ ನೂಕಿದ್ದ. ಅಲ್ಲದೇ ಈ ಕ್ರೂರತೆಯನ್ನು 300 ಅಧಿಕಾರಿಗಳ ಜೊತೆಯಲ್ಲಿ ಕುಳಿತು ವಿಕ್ಷಣೆಯನ್ನು ಮಾಡಿದ್ದ ಎನ್ನಲಾಗಿದೆ. 67 ವರ್ಷ ವಯಸ್ಸಿನ ಕಿಮ್ ಜೊಂಗ್ ಥೆಕ್ ನನ್ನು ನಾಯಿಗಳು ಕಚ್ಚಿ ಕಚ್ಚಿ ತಿಂದು ಸಾಯಿಸಿದ್ದವು. ಇದನ್ನು ಪ್ರಶ್ನಿಸಿದ ಕಿಮ್ ಜೊಂಗ್ ಥೆಕ್ ಪತ್ನಿಯನ್ನು ವಿಷ ಉಣಿಸಿ ಕೊಲ್ಲಲಾಯಿತು. ಆದರೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಕಟಿಸಲಾಯಿತು.
ಕಿಮ್ ಜೊಂಗ್ ಉನ್ ಎಷ್ಟು ಕ್ರೂರಿ ಎಂದರೆ ಮಲೇಷ್ಯಾದಲ್ಲಿ ವಾಸವಿದ್ದ ತನ್ನ ಅಣ್ಣ ಮತ್ತು ಮಲ ಸೋದರ ನನ್ನು ವಿಷದ ಸೂಜಿಗಳನ್ನು ಚುಚ್ಚಿ ಕೊಲ್ಲಲಾಯಿತು. ಅಲ್ಲದೇ ಉತ್ತರ ಕೊರಿಯಾದ ವಿರುದ್ಧ ಬೇಹುಗಾರಿಕೆ ಮಾಡಿದ ಆರೋಪವನ್ನು ಹೊರಿಸಲಾಯಿತು. ಹೀಗೆ ಯಾವುದೇ ಅನುಕಂಪ ತೋರದೇ ತನ್ನ ಸೋದರಿಯೋಬ್ಬರನ್ನು ಬಿಟ್ಟು ತನ್ನ ಪರಿವಾರದ ಎಲ್ಲರನ್ನೂ ಕೊಲ್ಲಿಸಿದ್ದಾನೆ.
ಈ ದೇಶದಲ್ಲಿ ಸರಕಾರ ಮತ್ತು ಆಡಳಿತದ ವಿರುದ್ಧ ಯಾವುದೇ ರೀತಿಯಲ್ಲಿ ಧ್ವನಿ ಏರಿಸಿದರೆ ಯಾರನ್ನೂ ಸಹ ಬಿಡದೆ ಕೊಲ್ಲಲಾಗುತ್ತದೆ. ಅಲ್ಲದೇ ಇಲ್ಲಿನ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮವು ಸರಕಾರ ಹೇಳಿದ್ದನ್ನು ಮಾತ್ರ ಪ್ರಕಟಿಸುತ್ತವೆ. ಅಲ್ಲಿನ ಜನರು ಕಟ್ಟುಪಾಡುಗಳಿಗೆ ಬದ್ಧರಾಗಿ ಹೊರಜಗತ್ತಿನ ಯಾವುದೇ ಅರಿವಿಲ್ಲದೆ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.