ನವದೆಹಲಿ: ಕೊರೋನಾ ಸೋಂಕಿನ 2ನೇಯ ಅಲೆಯನ್ನು ಪರಿಗಣನೆಗೆ ತೆಗೆದುಕೊಂಡು, ನಾಗರೀಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ವಿಧಿಸಿದ್ದ ನಿರ್ಬಂಧವನ್ನು ಮೇ 31ರ ವರೆಗೂ ವಿಸ್ತರಿಸಿ ಆದೇಶ ಹೊರಡಿಸಿದೆ.
ಕೊರೋನಾ ಕಾರಣದಿಂದಾಗಿ ಭಾರತದಲ್ಲಿ ಕಳೆದ ಮಾರ್ಚ್ 23 ರಿಂದ ಅಂತರಾಷ್ಟ್ರೀಯ ವಿಮಾನಯಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ವಿಶೇಷ ವಿಶೇಷ ಅಂತರಾಷ್ಟ್ರಿಯ ವಿಮಾನಗಳು ಮೇ ತಿಂಗಳಿನಿಂದ ಏರ್ ಬಬಲ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಸೌಲಭ್ಯ ಈಗಲೂ ಮುಂದುವರೆಯಲಿದೆ ಎಂದು ಡಿಜಿಸಿಎ ತಿಳಿಸಿದೆ.
ಅಲ್ಲದೇ ಈ ಆದೇಶವು ವಿಶೇಷ ಕಾರ್ಗೋ ವಿಮಾನ ಕಾರ್ಯಾಚರಣೆ ಮತ್ತು ಡಿಜಿಸಿಎ ಅನುಮೋದಿಸಿದ ವಿಮಾನ ಸೇವೆಗಳಿಗೆ ಅನ್ವಯವಾಗುವುದಿಲ್ಲ ಎಂದು ಸುತ್ತೋಲೆಯು ತಿಳಿಸಿದೆ.