delhi-pm-modi-participated-in-ravan-dahan
Image Credit: google.com

ದೆಹಲಿ: ನವರಾತ್ರಿಯ ಕೊನೆಯದಿನ ವಿಜಯದಶಮಿಯ ನಿಮಿತ್ತ ಇಂದು ದೆಹಲಿಯ ದ್ವಾರಕಾದಲ್ಲಿ ರಾವಣ ದಹನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿಯವರು ರಾವಣನ ಪ್ರತಿಕೃತಿಗೆ ಬಾಣವನ್ನು ಬಿಡುವ ಮೂಲಕ ದಹನ ಮಾಡಿದರು.

ನವರಾತ್ರಿಯ ಇಂದಿನ ದಿನ ದುಷ್ಟ ರಾವಣನನ್ನು ಶ್ರೀರಾಮಚಂದ್ರ ಸಂಹಾರ ಮಾಡಿದ ಪೌರಾಣಿಕ ಹಿನ್ನೆಲೆಯಲ್ಲಿ ಈ ರಾವಣ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ದುಷ್ಟ ಶಕ್ತಿಗೆ ಅಂತ್ಯಹಾಡಿ ಉತ್ತಮ ನಡತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂದೇಶವನ್ನು ಈ ಕಾರ್ಯಕ್ರಮ ಸಾರುತ್ತದೆ.

ಇದನ್ನೂಓದಿರಿ: ವಿಜಯದಶಮಿಯಂದೇ ಭಾರತಕ್ಕೆ ಸಿಕ್ತು ರಫೇಲ್ ಎಂಬ ಬ್ರಹ್ಮಾಸ್ತ್ರ..!

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾವಣ ದಹನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಭು ಶ್ರೀರಾಮಚಂದ್ರನ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲಿ ಮತ್ತು ದಿಷ್ಟ ಶಕ್ತಿಗಳು ತೊಲಗಲಿ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here