ನವದೆಹಲಿ: ಭಾರತೀಯ ಸೇನೆಯ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕಾಗಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷೆ ಮತ್ತು ಎಐಎಸ್‌ಎ ಸದಸ್ಯೆ ಶೆಹ್ಲಾ ರಶೀದ್ ವಿರುದ್ಧ ಕಾನೂನು ಕ್ರಮಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಮಂಗಳವಾರ ಅನುಮತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರ ಜನರಿಗೆ ಭಾರತೀಯ ಸೇನೆಯು ಚಿತ್ರಹಿಂಸೆ ನೀಡಿದ್ದಾರೆ ಎಂದು ಶೆಹ್ಲಾ ರಶೀದ್ ಆರೋಪಿಸಿದ್ದರು. ಶೋಪಿಯಾನ್‌ನಲ್ಲಿ 4 ಜನರನ್ನು ಸೇನಾ ಶಿಬಿರಕ್ಕೆ ಕರೆಸಲಾಯಿತು ಮತ್ತು ಚಿತ್ರಹಿಂಸೆ ಚಿತ್ರಹಿಂಸೆಗೆ ಒಳಪಡಿಸಲಾಯಿತು. ಅವರ ಕಿರುಚಾಟ ಇಡೀ ಕಾಶ್ಮೀರದ ಪ್ರದೇಶಕ್ಕೆ ಕೇಳುವಂತೆ ಅವರ ಹತ್ತಿರ ಮೈಕ್ ಅನ್ನು ಇರಿಸಲಾಗಿತ್ತು. ಇದು ಇಡೀ ಪ್ರದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿರಿ: ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ನಿಧನ
ಈ ಹೇಳಿಕೆಯನ್ನು ಭಾರತೀಯ ಸೇನೆಯು ತಿರಸ್ಕರಿಸಿತ್ತು. ಈ ರೀತಿ ದೇಶದಲ್ಲಿ ಸುಳ್ಳುಸುದ್ದಿಯನ್ನು ಹರಡುವುದು ಮತ್ತು ಅಸತ್ಯದ ಆಧಾರದಮೇಲೆ ಜನರನ್ನು ಎತ್ತಿಕಟ್ಟುವ ಇಂತಹ ದೇಶದ್ರೋಹದ ವಿರುದ್ಧ ಕಠಿಣ ಕ್ರಮಕ್ಕೆ ಜನಾಭಿಪ್ರಾಯ ವ್ಯಕ್ತವಾಗಿತ್ತು.
ಇದನ್ನೂ ಓದಿರಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ: ಅಫ್ತಾಬ್‌ಗೆ 14 ದಿನ ನ್ಯಾಯಾಂಗ ಬಂಧನ ವಿಸ್ತರಿಸಿದ ದೆಹಲಿ ನ್ಯಾಯಾಲಯ