defense-minister-rajnath-singh-who-boarded-the-tejas-war-plane
Image Credit: google.com

ಬೆಂಗಳೂರು: ಇಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ಧಾನದಿಂದ ದೇಶಿಯ ನಿರ್ಮಿತ ತೇಜಸ್ ಯುದ್ಧ ವಿಮಾನದಲ್ಲಿ ಕೆಲ ಕಾಲ ಹಾರಾಟ ನಡೆಸಿದರು. ಏರ್ ವೈಸ್ ಮಾರ್ಷಲ್ ಏನ್.ತಿವಾರಿಯವರ ಜೊತೆಯಲ್ಲಿ ಸಹ ಪೈಲೆಟ್ ಆಗಿ ವಿಮಾನದಲ್ಲಿ ಕುಳಿತ ಅವರು ಮಾರ್ಕ್-1 ವೇಗದಲ್ಲಿ ಹಾರಾಟ ನಡೆಸಿದರು.

ರಕ್ಷಣಾ ಸಚಿವ ರಾಜನಾಥ ಸಿಂಗ್ ತೇಜಸ್ ಯುದ್ಧ ವಿಮಾನದಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿ ಮಾತನಾಡುತ್ತ,  ಅತ್ಯಂತ ಸಾಮರ್ಥ್ಯವನ್ನು ಹೊಂದಿರುವ ಯುದ್ಧ ವಿಮಾನ ಇದಾಗಿದೆ. ಇದರಲ್ಲಿನ ಪ್ರಯಾಣ ತುಂಬಾ ಖುಷಿ ನೀಡಿದೆ ಅಲ್ಲದೇ ಈ ಪೈಟರ್ ಜೆಟ್ ಮೂಲಕ ನಮ್ಮ ರಕ್ಷಣಾ ವ್ಯವಸ್ತೆಯ ಸಾಮರ್ಥ್ಯ ಇನ್ನೂ ಹೆಚ್ಚಲಿದೆ ಎಂದರು.

ಇದನ್ನೂ ಓದಿರಿ: ಪ್ರಧಾನಿ ಮೋದಿಯವರಿಗೆ ಸಿಕ್ಕ ಗಿಪ್ಟ್ ಗಳನ್ನು ನೀವು ಪಡೆದುಕೊಳ್ಳಬಹುದು..!

defense-minister-rajnath-singh-who-boarded-the-tejas-war-plane
Image Credit: google.com

ತೇಜಸ್ ದೇಶೀಯ ನಿರ್ಮಿತ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅತ್ಯಂತ ಕಾರ್ಯ ಕ್ಷಮತೆಯನ್ನು ಹೊಂದಿದ ಯುದ್ಧ ವಿಮಾನವಾಗಿದೆ. ಈ ಯುದ್ಧ ವಿಮಾನವನ್ನು ಸಂಪೂರ್ಣವಾಗಿ ದೇಶಿಯ ಸಂಸ್ಥೆ  ಎಚ್ ಎ ಎಲ್  ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಓ) ಸೇರಿ ನಿರ್ಮಿಸಿದೆ. ಇದು ಸಂಪೂರ್ಣ ಕಂಪ್ಯೂಟರಿಕೃತ ನಿಯಂತ್ರಣ ವ್ಯವಸ್ತೆಯನ್ನು ಹೊಂದಿದ್ದು, ಯುದ್ಧದ ಸಮಯದಲ್ಲಿ ತನಗೆ ನೀಡಿದ ಕಾರ್ಯವನ್ನು ನಿಖರವಾಗಿ ನಿರ್ವಹಿಸಲು ಸಹಾಯವಾಗಲಿದೆ.

ಇದನ್ನೂ ಓದಿರಿ: ಭಾರತದೊಂದಿಗೆ ಯುದ್ಧವಾದರೆ ಪಾಕಿಸ್ತಾನ ಸೋಲುವುದು ಖಚಿತ ಎಂದ ಇಮ್ರಾನ್ ಖಾನ್..!

LEAVE A REPLY

Please enter your comment!
Please enter your name here