defence-minister-rajnath-singh-wishes-to-the-air-warriors-on-the-88th-iaf-day

ನವದೆಹಲಿ: ಭಾರತದ ರಕ್ಷಣಾ ಪಡೆಗಳಲ್ಲಿ ಒಂದಾದ ವಾಯುಪಡೆಯು 88 ನೇ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಭಾಶಯ ಕೋರಿದ್ದಾರೆ.

ಭಾರತೀಯ ವಾಯುಪಡೆಯು ಪ್ರಥಮವಾಗಿ 1932 ಅಕ್ಟೋಬರ್ 8 ರಂದು ವಾಯುಪಡೆ ದಿನಾಚರಣೆಯನ್ನು ಮಾಡಲು ಪ್ರಾರಂಭಿಸಿತು. ಅಂದಿನಿಂದ ಇಂದಿಗೆ 87 ವರ್ಷಗಳು ಕಳೆದಿದ್ದು, 88 ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರು ಶುಭಕೋರಿ, ಭಾರತೀಯ ವಾಯುಪಡೆಯು ದೇಶದ ಆಗಸವನ್ನು ಸದಾ ಕಾಲ ರಕ್ಷಣೆಯನ್ನು ಮಾಡುತ್ತದೆ. ಇಂತಹ ಸಂಕಷ್ಟದಲ್ಲಿಯೂ ರಕ್ಷಣೆಗೆ ಸಿದ್ಧವಾಗಿರುವ ವಾಯುಪಡೆಗೆ ಶುಭಕೋರುತ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here