ಬಿಗ್ ಬಾಸ್ ಸೀಸನ್ 8 ರಲ್ಲಿ ಫೈನಲಿಸ್ಟ್ ಆಗಿ ಗಮನ ಸೆಳೆದಿದ್ದ ಸ್ಪರ್ಧಿ ದೀಪಿಕಾ ದಾಸ್ (Deepika Das), ಬಿಗ್ ಬಾಸ್ ಸೀಸನ್ 9ಕ್ಕೂ (Bigg Boss Kannada) ಕಾಲಿಟ್ಟಿದ್ದರು. ಪ್ರವೀಣರ ಸಾಲಿನಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ ದೀಪಿಕಾ ಹೊರಬಂದಿದ್ದಾರೆ.
ಕಿರುತೆರೆಯಲ್ಲಿ ‘ನಾಗಿಣಿ’ ಧಾರಾವಾಹಿಯಲ್ಲಿ ಮೋಡಿ ಮಾಡಿದ್ದ ದೀಪಿಕಾ ದಾಸ್, ಟಿವಿ ಬಿಗ್ ಬಾಸ್ ಮೂಲಕ ಅಪಾರ ಜನಪ್ರಿಯತೆಯನ್ನ ಪಡೆದುಕೊಂಡಿದ್ದಾರೆ. ಈಗ ಸಾನ್ಯ ಎಲಿಮಿನೇಷನ್ ನಂತರ ಈ ವಾರ ದೀಪಿಕಾ ಔಟ್ ಆಗಿದ್ದಾರೆ.
ಇದನ್ನೂ ಓದಿರಿ: ಕ್ಯಾನ್ಸರ್ ಗೆದ್ದಿದ್ದ ಬೆಂಗಾಲಿ ನಟಿ ಐಂದ್ರಿಲಾ ಶರ್ಮಾ ಬ್ರೈನ್ ಸ್ಟ್ರೋಕ್‌ನಿಂದ ಸಾವು
ಬಿಗ್ ಬಾಸ್ ಮನೆಯಲ್ಲೂ ಟಾಸ್ಕ್ ಗಳನ್ನು ಚೆನ್ನಾಗಿ ಆಡ್ತಾ ಇದ್ದರು. ಬಿಗ್ ಬಾಸ್ ಸೀಸನ್ 8 ರಲ್ಲಿ ಸಖತ್ ಹೈಲೈಟ್ ಆಗಿದ್ದ ಇವರು ಬಿಗ್ ಬಾಸ್ ಸೀಸನ್ 09ಕ್ಕೆ ಎಂಟ್ರಿ ಕೊಟ್ಟಿದ್ದು . ಟಾಸ್ಕ್, ಅಡುಗೆ, ಮನರಂಜನೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ದೀಪಿಕಾ ಜರ್ನಿ ಮುಕ್ತಾಯವಾಗಿದೆ. ಈ ಎಲಿಮಿನೇಷನ್ ಮನೆ ಮಂದಿಗೆ ಶಾಕ್ ಕೊಟ್ಟಿದ್ದು. ಈ ಬಾರಿ ದೀಪಿಕಾ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ.
ಇದನ್ನೂ ಓದಿರಿ: ಅವಳಿ ಮಕ್ಕಳಿಗೆ ಅಮ್ಮನಾದ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ