ಕಾಡಾನೆ ದಾಳಿಗೆ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದ ಗೋಪಾಲಸ್ವಾಮಿ ಆನೆ ಸಾವು

ಗೋಪಾಲಸ್ವಾಮಿ ಆನೆ । dasara-elephant-died-while-fighting

ಮೈಸೂರು: ದಸರಾ ಉತ್ಸವದಲ್ಲಿ (Mysuru Dasara) 14 ಬಾರಿ ಪಾಲ್ಗೊಂಡಿದ್ದ ಗೋಪಾಲಸ್ವಾಮಿ ಎಂಬ ಆನೆ, ಕಾಡಾನೆ ದಾಳಿಯಿಂದ ಸಾವನ್ನಪ್ಪಿದೆ.

ಇತ್ತೀಚಿಗೆ ಮೈಸೂರು ದಸರಾ ಉತ್ಸವದಲ್ಲಿ ಭಾಗಿಯಾಗಿದ್ದ ಗೋಪಾಲಸ್ವಾಮಿ ಎಂಬ ಆನೆ ಹುಣಸೂರು ತಾಲ್ಲೂಕಿನ ಮತ್ತಿಗೋಡು ಆನೆ ಶಿಭಿರದಲ್ಲಿ ವಾಸವಾಗಿತ್ತು. ಆಹಾರ ಸೇವನೆಗೆಂದು ಕಾಡಿಗೆ ಬಿಟ್ಟ ಸಮಯದಲ್ಲಿ, ಹನಗೋಡು ಸಮೀಪದಲ್ಲಿ ಇತ್ತೀಚೆಗೆ ಸೆರೆ ಹಿಡಿಯಲಾಗಿದ್ದ ಅಯ್ಯಪ್ಪ ಎಂಬ ಆನೆ ಜೊತೆ ಕಾದಾಟ ನಡೆಸಿ ಗೋಪಾಲಸ್ವಾಮಿ ಆನೆ ಮೃತಪಟ್ಟಿದೆ ಎಂದು ಮಾಹಿತಿ ಬಂದಿದೆ.

ಇದನ್ನೂ ಓದಿರಿ: ವರಾಹರೂಪಂ ವಿವಾದ ಹೊಂಬಾಳೆ ಫಿಲಮ್ಸ್ ಗೆ ಹಿನ್ನಡೆ; ಮೇಲ್ಮನವಿ ವಜಾಗೊಳಿಸಿದ ಕೇರಳ ಹೈಕೋರ್ಟ್‌

ಈಚೆಗಷ್ಟೇ ನಡೆದ ಮೈಸೂರು ದಸರಾ ಮಹೋತ್ಸವದಲ್ಲಿ ಗೋಪಾಲಸ್ವಾಮಿ ಆನೆ ಪಾಲ್ಗೊಂಡಿತ್ತು. ತನ್ನ ಶಾಂತ ಸ್ವಭಾವಕ್ಕೆ ಈ ಆನೆ ಜನರ ಪ್ರೀತಿ ಗಳಿಸಿತ್ತು. ಈ ಬಾರಿ ದಸರಾದಲ್ಲಿ ಮರದ ಅಂಬಾರಿ ಹೊತ್ತು ಗಮನ ಸೆಳೆದಿತ್ತು. 14 ಬಾರಿ ದಸರಾ ಉತ್ಸವದಲ್ಲಿ ಪಾಲ್ಗೊಂಡ ಅನುಭವ ಹೊಂದಿತ್ತು.

ಇದನ್ನೂ ಓದಿರಿ: ಷೇರು ಮಾರುಕಟ್ಟೆಯಲ್ಲಿ ಉಪಯೋಗಕ್ಕೆ ಬರುವ ಸಪ್ತ ಸೂತ್ರಗಳು!

LEAVE A REPLY

Please enter your comment!
Please enter your name here