ದರ್ಶನ್ ಗೆ ಆಘಾತಕರ ಸುದ್ದಿ, 20 ವರ್ಷಗಳ ಸ್ನೇಹಿತ ಇನ್ನಿಲ್ಲ..!

darshan-visits-his-makeup-man-house-and-expresses-condolences

ಬೆಂಗಳೂರು: ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಪರ್ಮನೆಂಟ್ ಮೇಕಪ್ ಮೆನ್ ಆಗಿದ್ದ ಶ್ರೀನಿವಾಸ್ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸುಮಾರು ಎರಡು ದಶಕಗಳಿಂದ ಮೇಕಪ್ ಮೆನ್ ಆಗಿ ದರ್ಶನ್ ಜೊತೆಯಲ್ಲಿ ಇದ್ದ ಇವರ ಅಗಲಿಕೆ ದರ್ಶನ್ ಅವರಿಗೆ ಆಘಾತವನ್ನು ಉಂಟುಮಾಡಿದೆ.
ದರ್ಶನ್ ಅವರು ನಾಯಕನಾಗಿ ಗುರುತಿಸಿಕೊಂಡ ದಿನದಿಂದಲೂ ಅವರಿಗೆ ಶ್ರೀನಿವಾಸ್ ಮೇಕಪ್ ಮಾಡುತ್ತಿದ್ದರು. ಅವರ ಆಕಸ್ಮಿಕ ಅಗಲಿಕೆ ದರ್ಶನ್ ಸೇರಿದಂತೆ ಹಲವಾರು ಅಭಿಮಾನಿಗಳಿಗೆ ಆಘಾತ ಉಂಟಾಗಿದೆ. ಈ ಕುರಿತು ದರ್ಶನ್ ಟ್ವೀಟ್ ಮಾಡಿದ್ದು, ಎರಡು ದಶಕಗಳಿಂದ ನನ್ನ ಜೊತೆಗಿದ್ದ ಮೇಕಪ್ ಮೆನ್ ಅಗಲಿಕೆ ಹೃದಯಾಘಾತದಿಂದ ಅಗಲಿದ್ದಾರೆ. ಈ ನೋವನ್ನು ಸಹಿಸುವ ಶಕ್ತಿ ಆ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಹೇಳಿದ್ದಾರೆ.


ಮದಗಜ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಮೇಕಪ್ ಮೆನ್ ಆಗಿ ಕೆಲಸ ನಿರ್ವಹಿಸಿದ್ದರು. ಇವರ ಆಪ್ತ ವಲಯದಲ್ಲಿ ಸೀನ ಎಂದೇ ಪರಿಚಿತರು. ಹಲವಾರು ಚಿತ್ರಗಳ ನಾಯಕರಿಗೆ ಮೇಕಪ್ ಮಾಡಿದ್ದ ಇವರು, ಎರಡು ದಶಕಗಳ ಕಾಲ ದರ್ಶನ್ ಅವರ ವಿವಿಧ ಗೆಟಪ್ ಗಳಿಗೆ ಜೀವ ತುಂಬಿದ್ದರು.

ಇಂದು ಮದ್ಯಹ್ನ ಬೆಂಗಳೂರಿನ ಶ್ರೀನಿವಾಸ್ ಅವರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ. ಜೊತೆಗೆ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.

LEAVE A REPLY

Please enter your comment!
Please enter your name here