ಹಲವು ದಿನಗಳಿಂದ ಕಾಯುತ್ತಿದ್ದ ಡಿ ಬಾಸ್ ಅಭಿಮಾನಿಗಳಿಗೆ ಹಬ್ಬ ಬಂದಂತಾಗಿದೆ. ಇಂದು ಡಿ ಬಾಸ್ ಅಭಿನಯದ ‘ಕ್ರಾಂತಿ’ (Kranti Trailer) ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಯೂಟ್ಯೂಬ್ ನಲ್ಲಿ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಬಾರಿ ಪ್ರಮಾಣದಲ್ಲಿ ವೀಕ್ಷಕರು ಆಗಮಿಸಿದ್ದಾರೆ.
ಹೌದು… ದರ್ಶನ ಅಭಿಮಾನಿಗಳು ಹಲವು ದಿನಗಳಿಂದ ಕ್ರಾಂತಿ ಚಿತ್ರದ ಟ್ರೈಲರ್ ಬಿಡುಗಡೆಗೆ ಕಾತುರತೆಯಿಂದ ಇದ್ದರು. ಇದೀಗ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾವಿರಾರು ಜನರಿಂದ ವೀಕ್ಷಣೆಯಾಗಿದೆ. ಈ ಮೂಲಕ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಇದನ್ನೂ ಓದಿರಿ: ಜನವರಿಯಲ್ಲೇ ಹಸೆಮಣೆ ಏರಲಿದ್ದಾರೆ ವಸಿಷ್ಠ ಸಿಂಹ, ಹರಿಪ್ರಿಯಾ
ಕ್ರಾಂತಿ ಚಿತ್ರದ ಟ್ರೈಲರ್ ನಲ್ಲಿ… ದುಷ್ಟನ ಕೈಯಿಂದ ಶಾಲೆಯನ್ನು ರಕ್ಷಿಸುವ ಶ್ರೀಮಂತನೊಬ್ಬ ತನ್ನೆಲ್ಲ ಕೆಲಸಗಳನ್ನು ಬಿಟ್ಟು, ಶತ್ರುಗಳೊಂದಿಗೆ ಹೊರಡುವ ಮಾಸ್ ಕಥಾ ಹಂದರವನ್ನು ಹೊಂದಿದೆ. ದರ್ಶನಗೆ ಎದುರಾಗಿ ರವಿಶಂಕರ್ ಖಡಕ್ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ.
ಈ ಟ್ರೈಲರ್ ಹಲವು ರಹಸ್ಯವನ್ನು ಇಟ್ಟುಕೊಂಡಿದ್ದು, ಸಿನಿಮಾ ವೀಕ್ಷಣೆಗಾಗಿ ಅಭಿಮಾನಿಗಳನ್ನು ಸೆಳೆಯುವಂತಿದೆ. ಇದರಲ್ಲಿ ರವಿಚಂದ್ರನ್, ಸುಮಲತಾ ಅಂಬರೀಷ್ ಹಾಗೂ ದಾರ್ಶನಿಗೂ ಏನು ಸಂಬಂಧ ಎಂದು ತಿಳಿಯುತ್ತಿಲ್ಲ. ಅಲ್ಲದೇ ಶ್ರೀಮಂತನೊಬ್ಬ ಶಾಲೆಯ ರಕ್ಷಣೆಗೆ ಇಳಿಯಲು ಕಾರಣಗಳೇನು ಎನ್ನುವ ಕೆಲವೊಂದಿಷ್ಟು ರಹಸ್ಯಗಳನ್ನು ಇದು ಕಾಯ್ದುಕೊಂಡಿದೆ.
ಇದನ್ನೂ ಓದಿರಿ: ಹುಟ್ಟು ಹಬ್ಬದ ಸಂಭ್ರಮದಲ್ಲಿ ಕನ್ನಡತಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ