ಭಾನುವಾರದ ದ್ವಾದಷ ರಾಶಿಗಳ ದಿನಭವಿಷ್ಯ

Daily Horoscope

ಮೇಷ ರಾಶಿ : ನಿಮ್ಮ ನಡವಳಿಕೆಯ ಮೇಲೆ ಹಿಡಿತ ಇಟ್ಟುಕೊಳ್ಳಿ. ಇಂದು ನಿಮಗೆ ಸಾಮಾನ್ಯ ದಿನವಾಗಿರಲಿದೆ. ದೂರದ ಪ್ರಯಾಣ ಉತ್ತಮವಲ್ಲ‌. ನಿಮ್ಮ ನಾಲಿಗೆಯೆ ನಿಮ್ಮ ಶತ್ರುವಾಗಲಿದೆ. ಇಂದಿನ ನಿಮ್ಮ ಮಾತು ಮುಂದೆ ನಿಮ್ಮನ್ನು ಕಾಡಲಿದೆ. ಇಂದು ನಿಮಗೆ ಮಿಶ್ರ ಫಲ ದೊರೆಯಲಿದೆ. ಪ್ರಣಯ ಜೀವನ ಸಾಮಾನ್ಯವಾಗಿರಲಿದೆ.

ವೃಷಭ ರಾಶಿ : ಇಂದು ನೀವು ವಿಶೇಷವಾದ ಸಾಧನೆಯನ್ನು ಮಾಡಲಿದ್ದೀರಿ. ಪ್ರಯಾಣವನ್ನು ಮಾಡುತ್ತಿದ್ದರೆ ನಿಮ್ಮ ಅಮೂಲ್ಯ ವಸ್ತುಗಳ ಮೇಲೆ ಗಮನವಿರಲಿ. ಹಣಕಾಸಿ ವ್ಯವಹಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ. ಆರೋಗ್ಯ ಸ್ಥಿತಿಯು ಸ್ಥಿರವಾಗಿ ಇರಲಿದೆ.

daily-horoscope

ಮಿಥುನ ರಾಶಿ : ಇಂದು ನೀವು ನಿರೀಕ್ಷಿಸಿದಂತೆ ಲಾಭವಾಗುವುದಿಲ್ಲ. ಕುಟುಂಬದೊಂದಿಗೆ ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ. ಉಧ್ಯಮಿಗಳಿಗೆ ಹೆಚ್ಚಿನ‌ ಪ್ರಯೋಜನಕಾರಿಯಾದ ದಿನವಲ್ಲ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಸಾಮಾನ್ಯವಾದ ದಿನವಾಗಿದೆ. ಖರ್ಚು ಹೆಚ್ಚುವ ಸಂಭವ ಎದ್ದು ಕಾಣುತ್ತಿದೆ. ಆರೋಗ್ಯ ಸಮಸ್ಯೆಯು ನಿಮ್ಮನ್ನು ಕಾಡಬಹುದು.

ಕರ್ಕಾಟಕ ರಾಶಿ: ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಒಳ್ಳೆಯದಲ್ಲ. ನಿಮ್ಮ ಮನಸ್ಸನ್ನು‌ ಶಾಂತವಾಗಿರಿಸಿಕೊಳ್ಳಿ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ನೀಡುವುದು ಉತ್ತಮ. ವಿವಾಹಿತರಿಗೆ ಉತ್ತಮ ದಿನವಾಗಿದೆ. ಭವಿಷ್ಯದ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸಿ. ಇಂದು ನೀವು ನಿಮ್ಮ ಹಳೆಯ ಸ್ನೇಹಿತನನ್ನು ಭೇಟಿಯಾಗಬಹುದು.

ಸಿಂಹರಾಶಿ : ಇಂದು ನೀವು ದೈನಂದಿನ ಒತ್ತಡದಿಂದ ಹೊರಬಂದು ಚಿಕ್ಕ ಪ್ರಯಾಣವನ್ನು ಮಾಡಬಹುದು. ಇದರಿಂದಾಗಿ ಮನಃಶಾಂತಿ ದೊರೆಯುತ್ತದೆ. ಹಣದ ವಿಷಯದಲ್ಲಿ ಉತ್ತಮ ದಿನವಾಗಿದೆ. ನಿಮ್ಮ ಆರೋಗ್ಯಕ್ಕೆ ಆಹಾರವು ಕೆಡುಕನ್ನು ತರಬಹುದು, ಎಚ್ಚರಿಕೆ ಅಗತ್ಯ. ವೇಗದ ವಾಹನ ಚಲಾವಣೆ ತೊಂದರೆಯನ್ನು ಉಂಟು ಮಾಡಬಹುದು.

ಕನ್ಯಾ ರಾಶಿ : ನಿಮ್ಮ ಕೆಲಸಗಳು ಇಂದು ಸುಲಭವಾಗಿ ಕೈಗೂಡುತ್ತದೆ. ಬಹಳ ದಿನಗಳಿಂದ ಒಂದೆಡೆ ನಿಂತ ಕೆಲಸಗಳು ಪ್ರಾರಂಭವಾಗುತ್ತದೆ. ಆಲಸ್ಯವು ನಿಮ್ಮ ಎಲ್ಲ ಪ್ರಯತ್ನವನ್ನು ಹಾಳುಗೆಡವುತ್ತದೆ. ಇಂದು ನಿಮ್ಮ ಮನೆಯಲ್ಲಿ ಸಂತೋಷದ ಘಟನೆ ನಡಯುತ್ತದೆ. ಕುಟುಂಬ ಸದಸ್ಯರ ಜೊತೆಯಲ್ಲಿ ಹಬ್ಬದ ಭೋಜನ ಸವಿಯುತ್ತೀರಿ.

ತುಲಾರಾಶಿ : ಆರೋಗ್ಯದಲ್ಲಿ ಕೆಲವು ತೊಂದರೆಗಳು ಕಂಡುಬರಲಿವೆ. ಇದರಿಂದ ಮನೆಯಲ್ಲಿ ಭಯ, ನೋವು ಕಂಡುಬರಲಿವೆ. ಹಣಕಾಸಿನ ವ್ಯರ್ಥ ಖರ್ಚು ಉಂಟಾಗಬಹುದು. ಹಲವರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಶತ್ರುಗಳು ನಿಮ್ಮನ್ನು ಹಣಿಯಲು ಹಾತೊರೆಯುತ್ತಿದ್ದಾರೆ. ಹೆಚ್ಚಿನ ಜವಾಬ್ದಾರಿಗಳು ನಿಮ್ಮ ಬೆನ್ನೇರುತ್ತವೆ.

ವೃಶ್ಚಿಕ ರಾಶಿ : ಆಧ್ಯಾತ್ಮಿಕ ಆಸಕ್ತಿಗಳನ್ನು ಪೂರೈಸಿಕೊಳ್ಳಲು ಉತ್ತಮ ದಿನವಾಗಿದೆ. ಪ್ರಣಯ ಜೀವನವು ಉತ್ತಮವಾಗಿರಲಿದೆ, ಆದರೆ ನಿಮ್ಮಿಬ್ಬರ ನಡುವೆ ಪಾರದರ್ಶಕತೆ ಇರಲಿ. ಕೆಲಸದ ಸ್ಥಳದಲ್ಲಿ ಹೊಂದಾಣಿಕೆ ಕಂಡುಬರಲಿದೆ. ಸಣ್ಣ ಪ್ರಮಾಣದ ಅನಾರೋಗ್ಯ ಕಾಡಬಹುದು. ದೇಹದ ಕಡೆಗೆ ಗಮನ ಹರಿಸುವುದು ಅಗತ್ಯವಾಗಿದೆ.

ಧನು ರಾಶಿ : ಇಂದು ನಿಮಗೆ ಹೆಚ್ಚಿನ ಒತ್ತಡ ಇರಲಿದೆ. ಬಹಳ ದಿನಗಳ ಹಿಂದೆ ನೀಡಿರುವ ಹಣ ಹಿಂದಿರುಗುವ ಸಾಧ್ಯತೆ. ಕೆಲಸದಲ್ಲಿ ನೀವು ನಿರೀಕ್ಷಿಸಿದ ಪ್ರಗತಿ ದೊರೆಯಲಿದೆ. ಇಂದಿನ ದಿನ ಸಂತೋಷದಿಂದ ಕಳೆಯುವಿರಿ. ಅಧ್ಯಯನದ ಅವಶ್ಯಕತೆ ಇದೆ. ಸಂಗಾತಿಯ ಬೇಡಿಕೆಯನ್ನು ಈಡೇರಿಸಿ. ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಹೂಡಿಕೆ ಮಾಡಲು ಉತ್ತಮ ದಿನವಾಗಿದೆ.

ಮಕರ ರಾಶಿ : ಇಂದು ನಿಮ್ಮ ಅಮೂಲ್ಯ ಸಮಯವನ್ನು ಸಾಧ್ಯವಾದಷ್ಟು ಮಕ್ಕಳ ಜೊತೆಯಲ್ಲಿ ಕಳೆಯಿರಿ. ನಿಮ್ಮ ಏಳಿಗೆಯನ್ನು ಸಹಿಸದವರು ನಿಮ್ಮನ್ನು ಕಾಡುತ್ತಾರೆ. ಹಣಕಾಸಿನ ಹರಿವು ಸಾಮಾನ್ಯವಾಗಿದೆ. ಇಂದು ಯಾವುದೇ ತರಹದ ದೂರದ ಪ್ರಯಾಣ ಒಳ್ಳೆಯದಲ್ಲ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ.

ಕುಂಭ ರಾಶಿ : ಇಂದು ನೀವು‌ ಸುಖಮಯ ಜೀವನ ಅನುಭವಿಸುವಿರಿ. ಬೇರೆಯವರ ಮಾತನ್ನು ಕೇಳಿ ಹೂಡಿಕೆ ಮಾಡಿದಲ್ಲಿ ನಷ್ಟವನ್ನು ಅನುಭವಿಸುತ್ತೀರಿ. ಯಾವುದೋ ಒಂದು ಅಹಿತಕರ ಘಟನೆಯ ನೆನಪು ನಿಮ್ಮನ್ನು ಚಿಂತೆಗೀಡು ಮಾಡಬಹುದು. ಸಂಬಂಧಿಗಳಿಂದ ಒಳ್ಳೆಯ ಸುದ್ದಿಯು ಬರಲಿದೆ.

ಮೀನ ರಾಶಿ : ಇಂದಿನ ದಿನದ ಆರಂಭ ನಿಮಗೆ ಕಿರಿಕಿರಿ ಉಂಟು ಮಾಡಬಹುದು. ಬೇರೆಯವರ ಭಾವನೆಗಳಿಗೆ ಗೌರವ ನೀಡಿ. ಹಣಕಾಸಿನ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ.
ದೀರ್ಘಕಾಲದಿಂದ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದವರಿಗೆ ಇಂದು ಎಲ್ಲಿಂದಲೋ ಹಣ ಬರಬಹುದು. ಸಂಗಾತಿಯೊಂದಿಗೆ ಸಂತೋಷದ ಸಮಯ ಕಳೆಯುವಿರಿ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here