daily Horoscope 16-09-2020

ಮೇಷ ರಾಶಿ: ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಾಗ ಹಲವು ಬಾರಿ ಚೆನ್ನಾಗಿ ಯೋಚನೆ ಮಾಡಿ ತೆಗೆದುಕೊಳ್ಳಿ. ನೀವು ನಿಗದಿಪಡಿಸಿದ ಗುರಿಗಳನ್ನು ಸುಲಭವಾಗಿ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ತಾಯಿಯ ಕೃಪೆಯಿಂದ ನಿಮಗೆ ಇಂದು ಹಣವು ಹರಿದು ಆಗುತ್ತದೆ.

daily-horoscope

ವೃಷಭ ರಾಶಿ: ಇಂದು ಹಣಕಾಸಿನ ವೆಚ್ಚದ ಮೇಲೆ ನಿಯಂತ್ರಣ ಹೇರುವುದು ಉತ್ತಮ. ನಿಮ್ಮ ವೈವಾಹಿಕ ಜೀವನದ ಕುರಿತಾಗಿ ಆಸಕ್ತಿಯನ್ನು ಹೊಂದುವುದು ಅವಶ್ಯವಾಗಿದೆ. ವ್ಯಾಪಾರಸ್ತರಿಗೆ ಒಳ್ಳೆಯ ದಿನವಾಗಿದೆ. ಕಾರ್ಯ ಸಾಧನೆಗಾಗಿ ತಿರುಗಾಟದ ಸಂಭವ.

ಮಿಥುನ ರಾಶಿ: ಹಣಕಾಸಿನ ವಿಚಾರಕ್ಕೆ ಯಾವುದೇ ಚಿಂತೆ ಅಗತ್ಯವಿಲ್ಲ, ಇಂದು ನಿಮಗೆ ಕೆಲಸ ಕಾರ್ಯಗಳು ಯಶಸ್ವಿಯಾಗಿ ಮುಕ್ತಾಯವಾಗುವುದು. ಕೆಲಸದಲ್ಲಿ ಜಾಗರೂಕರಾಗಿರುವುದು ಅವಶ್ಯವಾಗಿದೆ. ಇದರಿಂದ ನೀವು ಸಂತೋಷಗೊಳ್ಳುವಿರಿ.

ಕಟಕ ರಾಶಿ: ಆರ್ಥಿಕ ವಿಚಾರವಾಗಿ ನಿಮಗೆ ಮಿಶ್ರ ಫಲವು ಲಭಿಸಲಿದೆ. ಕೆಲಸದ ವಿಚಾರದಲ್ಲಿ ಪರಿಸ್ಥಿತಿಗಳು ಅನುಕೂಲವಾಗಿರುತ್ತವೆ. ಆರೋಗ್ಯದಲ್ಲಿ ತೊಂದರೆಯಾಗುವ ಸಂಭವವಿದೆ. ಹಿರಿಯರಿಂದ ಅನುಭವವನ್ನು ಮತ್ತು ಅವರ ಬೆಂಬಲದ ಅವಶ್ಯಕತೆಯೂ ನಿಮಗಿದೆ, ಅವಶ್ಯವಾಗಿ ಪಡೆಯಿರಿ.

ಸಿಂಹ ರಾಶಿ: ಆರೋಗ್ಯ ಸಮಸ್ಯೆ ಕಂಡುಬರಬಹುದು. ಆರ್ಥಿಕವಾಗಿ ಲಾಭ ಪಡೆಯುವ ಸಂಭವವಿದೆ. ಗುರೂಜಿಯವರ ಆಶೀರ್ವಾದ ಪಡೆಯಿರಿ. ಚಾಮುಂಡೇಶ್ವರಿಯನ್ನು ಭಕ್ತಿಯಿಂದ ಪೂಜಿಸಿ. ವ್ಯಾಪಾರಸ್ಥರು ಜಾಗರೂಕರಾಗಿರುವುದು ಅವಶ್ಯವಾಗಿದೆ.

ಕನ್ಯಾ ರಾಶಿ: ಉತ್ಸಾಹ ಮತ್ತು ತೀವ್ರ ಕೋಪದಿಂದಾಗಿ ದೊಡ್ಡ ನಷ್ಟ ಉಂಟಾಗಬಹುದು. ನಿಮ್ಮ ಜೀವನದಲ್ಲಿ ಹಲವಾರು ಬದಲಾವಣೆಗಳು ಉಂಟಾಗಲಿವೆ. ಮಕ್ಕಳ ಕಡೆಯಿಂದ ಶುಭ ಸಮಾಚಾರ ಬರುವ ಸಾಧ್ಯತೆ. ಕುಟುಂಬವು ಸಂತೋಷದಿಂದ ಇರುತ್ತದೆ.

ಧನು ರಾಶಿ: ಇಂದು ನೀವು ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಇಂದು ಹಠಾತ್ ಹಣದ ಹರಿವು ಉಂಟಾಗಲಿದೆ. ಕುಟುಂಬ ಸದಸ್ಯರ ಜೊತೆಯಲ್ಲಿ ಉತ್ತಮ ದಿನವಾಗಿದೆ. ಬಹಳ ದಿನಗಳ ನಂತರ ಮನಸ್ಸು ತುಂಬಾ ಸಂತೋಷದಿಂದ ಕೂಡಿರುತ್ತದೆ.

ವೃಶ್ಚಿಕ ರಾಶಿ: ಇಂದು ಪ್ರೇಮಿಯೊಂದಿಗೆ ನಿಮ್ಮಿಷ್ಟದ ಸ್ಥಳಕ್ಕೆ ಹೋಗಿ ಬರುವಿರಿ. ತಾಯಿಯ ಆರೋಗ್ಯ ಸುಧಾರಣೆ ಕಾಣುತ್ತದೆ. ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಭವಿಷ್ಯದ ಏಳಿಗೆಗಾಗಿ ಯೋಚಿಸಿ ಹಣ ತೊಡಗಿಸಿ. ಆರೋಗ್ಯ ಸಾಮಾನ್ಯವಾಗಿರುತ್ತದೆ.

ಧನು ರಾಶಿ: ತಂದೆಯ ಆರೋಗ್ಯದಲ್ಲಿ ಬದಲಾವಣೆಉಂಟಾಗಬಹುದು. ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಅತಿಯಾದ ಮಾತು ನಿಮ್ಮ ಯಶಸ್ಸನ್ನು ಕಡಿತಗೊಳಿಸಲಿದೆ. ಆರೋಗ್ಯ ಸಾಮಾನ್ಯವಾಗಿರಲಿದೆ.

ಮಕರ ರಾಶಿ: ಇಂದು ಕಡಿಮೆ ಶ್ರಮದಿಂದ ಉತ್ತಮ ಫಲಿತಾಂಶ ಪಡೆಯುವಿರಿ. ಇಂದು ನಿಮಗೆ ಲಾಭವಾಗುವ ಸಾಧ್ಯತೆಗಳಿವೆ. ನಿಮ್ಮ ಹಿರಿಯರ ಕಡೆಗೆ ಗಮನಹರಿಸುವುದು ಬಹಳ ಅವಶ್ಯವಾಗಿದೆ.  ಕುಟುಂಬದಿಂದ ಸಂಪೂರ್ಣ ಸಂಪೂರ್ಣ ಪ್ರೀತಿ ಸಿಗುತ್ತದೆ.

ಕುಂಭ ರಾಶಿ: ಇಂದು ನೀವು ಆರ್ಥಿಕವಾಗಿ ಲಾಭ ಪಡೆಯುತ್ತೀರಿ. ಆರೋಗ್ಯವು ಇಂದು ಸಾಮಾನ್ಯವಾಗಿರುತ್ತದೆ. ಸಂಗಾತಿಯಿಂದ ಪೂರ್ಣ ಪ್ರೀತಿ ಮತ್ತು ಬೆಂಬಲ ಪಡೆಯುವಿರಿ. ನೀವು ನಿರೀಕ್ಷಿಸಿದ ಕೆಲಸದಲ್ಲಿ ಜಾಗರುಕರಾಗಿರಿ. ಸಂಗಾತಿಯೊಂದಿಗೆ ವಿಶೇಷ ದಿನವಾಗಿರಲಿದೆ.

ಮೀನ ರಾಶಿ: ಕೆಲಸದಲ್ಲಿ ಉತ್ತಮ ದಿನವಾಗಿದೆ. ಅನಗತ್ಯ ವಿಚಾರಗಳ ಬಗ್ಗೆ ಸಮಯ ವ್ಯರ್ಥ ಮಾಡದಿರಿ. ನಿಮ್ಮ ಕೆಲಸಗಳತ್ತ ಗಮನ ಹರಿಸುವುದು ಬಹಳ ಅವಶ್ಯವಾಗಿದೆ. ವೆಚ್ಚವನ್ನು ನಿಯಂತ್ರಿಸಿ, ಇಲ್ಲದಿದ್ದರೆ ಮುಂದೆ ಬಹಳ ದೊಡ್ಡ ಸಮಸ್ಯೆಗೆ ಗುರಿಯಾಗುವಿರಿ. ಕುಟುಂಬದತ್ತ ಹೆಚ್ಚಿನ ಗಮನ ಅವಶ್ಯ.

LEAVE A REPLY

Please enter your comment!
Please enter your name here