ಬುಧವಾರದ ದಿನ ಭವಿಷ್ಯ ( 21-10-2020 )

Daily Horoscope

ಮೇಷ ರಾಶಿ: ಮೇಷ ರಾಶಿ: ಇಂದು ನಿಮಗೆ ಮಿಶ್ರಫಲ ದೊರೆಯಲಿದೆ. ವ್ಯಾಪಾರಸ್ಥರಿಗೆ ಉತ್ತಮ ದಿನವಾಗಿದೆ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಕುಟುಂಬ ಜೀವನವು ಉತ್ತಮವಾಗಿರಲಿದೆ.

daily-horoscope

ವೃಷಭ ರಾಶಿ: ಇಂದು ನಿಮಗೆ ಹೆಚ್ಚುವರಿ ಜವಾಬ್ದಾರಿಗಳು ಬರಬಹುದು. ವ್ಯಾಪಾರಸ್ಥರಿಗೆ ಲಾಭ, ನವ ವಿವಾಹಿತರಿಗೆ ಉತ್ತಮ ದಿನವಾಗಿದೆ. ಪ್ರಮುಖ ವ್ಯಕ್ತಿಯನ್ನು ಬೇಟಿಯಾಗಲಿದ್ದೀರಿ.

ಮಿಥುನ ರಾಶಿ: ರಿಯಲ್ ಎಸ್ಟೇಟ್ ಉದ್ಯಮದವರಿಗೆ ಉತ್ತಮ ದಿನವಾಗಿದೆ. ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ನೀವು ಕಷ್ಟ ಪಟ್ಟು ಕೆಲಸ ಮಾಡಿದರೆ ಯಶಸ್ಸು ಕಾಣುವಿರಿ. ಮನಃಶಾಂತಿ ಕಲಕುವ ಕೆಲವು ಘಟನೆಗಳು ನಿಮ್ಮ ಮುಂದೆ ನಡೆಯಬಹುದು.

ಕಟಕ ರಾಶಿ: ಇಂದು ನಿಮಗೆ ಉತ್ತಮ ದಿನವಾಗಿದೆ. ಕಚೇರಿಯ ಕೆಲಸದಲ್ಲಿ ಇರುವವರಿಗೆ ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ದೊರೆಯಲಿದೆ. ಮನೆಯಲ್ಲಿ ನಿಮ್ಮ ಯೋಜನೆಗಳಿಗೆ ಸಂಗಾತಿಯಿಂದ ಬೆಂಬಲ ದೊರೆಯಲಿದೆ.

ಸಿಂಹ ರಾಶಿ: ಆರ್ಥಿಕವಾಗಿ ಉತ್ತಮ ದಿನವಾಗಿದೆ. ನೀವು ಕೆಲಸದಲ್ಲಿ ಶ್ರಮವನ್ನು ವಹಿಸಿ ಕಾರ್ಯನಿರ್ವಹಿಸಿ. ಹಿರಿಯರ ಆಶಿರ್ವಾದ ಪಡೆದುಕೊಳ್ಳಿ. ಕಚೇರಿಗಳಲ್ಲಿ ನಿಮ್ಮ ಕೆಲಸದ ಮೇಲೆ ಮಾತ್ರ ಗಮನವಿರಲಿ.

ಕನ್ಯಾ ರಾಶಿ: ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಭಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಿ. ಇಲ್ಲದಿದ್ದರೆ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು. ಕುಟುಂಬದಲ್ಲಿ ಉತ್ತಮ ವಾತಾವರಣ ಇರಲಿದೆ.

ತುಲಾ ರಾಶಿ: ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ದೇವಾಲಯಗಳ ಭೇಟಿ ಅಥವಾ ಪೂಜೆಗಳಲ್ಲಿ ಭಾಗವಹಿಸಿ. ಮನೆಯಲ್ಲಿ ಮನಸ್ತಾಪಗಳು ಉಂಟಾದಲ್ಲಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ. ಉದ್ಯಮಿಗಳಿಗೆ ಸಾಮಾನ್ಯ ದಿನವಾಗಿದೆ.

ವೃಶ್ಚಿಕ ರಾಶಿ: ದಂಪತಿಗಳಿಗೆ ಇಂದು ನೀರಸ ದಿನವಾಗಲಿದೆ. ತಂದೆ ತಾಯಿಯರ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ. ಕೋಪವನ್ನು ನಿಯಂತ್ರದಲ್ಲಿ ಇಡುವುದು ಉತ್ತಮ, ಇಲ್ಲದಿದ್ದಲ್ಲಿ ಹಲವು ಸಮಸ್ಯೆಗಳು ಉದ್ಭವಿಸಬಹುದು.

ಧನು ರಾಶಿ: ಹಿರಿಯರನ್ನು ಉತ್ತಮವಾಗಿ ನೋಡಿಕೊಳ್ಳಿ. ಇಂದು ವ್ಯಾಪಾರಸ್ಥರಿಗೆ ಉತ್ತಮವಾದ ದಿನವಾಗಿದೆ. ಮದ್ಯಾಹ್ನದ ನಂತರ ಹಲವು ತೊಂದರೆಗಳು ಕಾಣಿಸಿಕೊಳ್ಳಬಹುದು. ಆರ್ಥಿಕವಾಗಿ ಉತ್ತಮ ದಿನವಾಗಿದೆ. ವ್ಯಾಪಾರಿಗಳು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.

ಮಕರ ರಾಶಿ: ಹೊಸದಾದ ಉದ್ಯೋಗವನ್ನು ಪ್ರಾರಂಭಿಸಲು ಇದು ಉತ್ತಮವಾದ ಸಮಯವಲ್ಲ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಹಣಕಾಸಿನ ವಿಷಯದಲ್ಲಿ ಉತ್ತಮವಾಗಿರುತ್ತದೆ.

ಕುಂಭ ರಾಶಿ: ಇಂದು ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ ಎಚ್ಚರಿಕೆಯನ್ನು ವಹಿಸಿ. ಕೆಲಸದ ಒತ್ತಡ ಸ್ವಲ್ಪ ಕಡಿಮೆಯಾಗಲಿದೆ. ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ಆಹಾರ ಸೇವನೆಯ ವಿಚಾರದಲ್ಲಿ ಆರೋಗ್ಯದ ಕಡೆಗೆ ಗಮನವಹಿಸಿ.

ಮೀನ ರಾಶಿ: ಇಂದು ಕೆಲಸದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು. ವ್ಯಾಪರಸ್ಥರಿಗೆ ಹಲವು ಸಮಸ್ಯೆಗಳು ಉಂಟಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಸಂಗಾತಿಯ ಬದಲಾವಣೆಯು ನಿಮ್ಮನ್ನು ಸಂತೋಷಗೊಳಿಸಲಿದೆ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here