ಶುಕ್ರವಾರದ ದಿನ ಭವಿಷ್ಯ 13-11-2020

Daily Horoscope

ಮೇಷ ರಾಶಿ: ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಾಗ ಹಲವು ಬಾರಿ ಚೆನ್ನಾಗಿ ಯೋಚನೆ ಮಾಡಿ. ವೆಚ್ಚವನ್ನು ನಿಯಂತ್ರಣದಲ್ಲಿ ಇಡಿ. ವ್ಯಾಪಾರಸ್ಥರಿಗೆ ನಿರೀಕ್ಷಿತ ಫಲ ದೊರೆಯುವುದಿಲ್ಲ. ಭವಿಷ್ಯದ ಕುರಿತಾಗಿ ಇಂದೇ ಹಣವನ್ನು ಹೊಂದಿಸಿ ಇಡಿ.

 

daily-horoscopeವೃಷಭ ರಾಶಿ: ಇಂದು ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರಲಿದೆ. ಪ್ರೀತಿ ಪಾತ್ರರಿಂದ ಬೆಂಬಲ ದೊರೆಯುತ್ತದೆ. ಉದ್ಯೋಗಿಗಳಿಗೆ ಶುಭವಾಗಲಿದೆ. ವ್ಯಾಪಾರಸ್ತರಿಗೆ ಒಳ್ಳೆಯ ದಿನವಾಗಿದೆ.

ಮಿಥುನ ರಾಶಿ: ನಿಮ್ಮ ಆಲೋಚನೆಯಿಂದ ಇಂತಹ ಸಮಸ್ಯೆಯನ್ನಾದರೂ ಬಿಡಿಸಬಹುದು. ನಿಧಾನವಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ. ಹಣಕಾಸಿನ ವಿಚಾರಕ್ಕೆ ಯಾವುದೇ ಚಿಂತೆ ಅಗತ್ಯವಿಲ್ಲ, ಇಂದು ನಿಮಗೆ ಕೆಲಸ ಕಾರ್ಯಗಳು ಯಶಸ್ವಿಯಾಗಿ ಮುಕ್ತಾಯವಾಗುವುದು. ಉದ್ಯೋಗಿಗಳಿಗೆ ಉತ್ತಮ ದಿನವಾಗಿದೆ.

ಕಟಕ ರಾಶಿ: ಇಂದು ನಿಮಗೆ ಸಾಮಾನ್ಯವಾದ ದಿನವಾಗಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ವೈವಾಹಿಕ ಜೀವನದಲ್ಲಿ ಪಾರದರ್ಶಕತೆ ಕಾಪಾಡಿ, ಸಂಗಾತಿಯೊಂದಿಗಿನ ಕಲಹವನ್ನು ತೊಲಗಿಸಿ. ಉಳಿತಾಯದ ಕುರಿತಾಗಿ ಹೆಚ್ಚಿನ ಗಮನ ನೀಡುವುದು ಉತ್ತಮ.

ಸಿಂಹ ರಾಶಿ: ವ್ಯಾಪಾರಸ್ಥರಿಗೆ ದೊಡ್ಡ ಲಾಭವಾಗಬಹುದು. ವಿದ್ಯರ್ಥಿಗಳು ವಿಶೇಷ ಸಾಧನೆ ಮಾಡಲು ಉತ್ತಮ ದಿನವಾಗಿದೆ. ಆರೋಗ್ಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಸುಧಾರಿಸಲಿದೆ. ಆರ್ಥಿಕವಾಗಿ ಲಾಭ ಪಡೆಯುವ ಸಂಭವವಿದೆ.

ಕನ್ಯಾ ರಾಶಿ: ಇಂದು ನಿಮಗೆ ಸ್ವಲ್ಪ ದುಃಖದ ದಿನವಾಗಬಹುದು. ಮನಸ್ಸಿನಲ್ಲಿನ ನಕಾರಾತ್ಮಕ ಭಾವನೆಗಳನ್ನು ತೊಡೆದುಹಾಕಲು ಪ್ರಯತ್ನಿಸಿ. ಕೋಪವನ್ನು ನಿಯಂತ್ರಿಸಿ, ಇಲ್ಲದಿದ್ದರೆ ಇಂದಿನ ದಿನ ಮತ್ತಷ್ಟು ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಕೆಲಸದಲ್ಲಿ ನಿಮ್ಮೆಲ್ಲ ಸಾಮರ್ಥ್ಯ ತೋರಿಸಿ.

ತುಲಾ ರಾಶಿ: ಇಂದು ನಿಮಗೆ ಸ್ವಲ್ಪ ಪ್ರಮಾಣದಲ್ಲಿ ನೆಮ್ಮದಿಯ ದಿನವಾಗಿವೆ. ನಿಮ್ಮ ಮಾತುಗಳಲ್ಲಿ ಮೃದುತ್ವ ಮತ್ತು ನಗು ಸೇರಿಸಿಕೊಳ್ಳಿ. ಆರೋಗ್ಯವು ಉತ್ತಮವಾಗಿರುತ್ತದೆ. ಇಂದು ನೀವು ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲಿದ್ದೀರಿ.

ವೃಶ್ಚಿಕ ರಾಶಿ: ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ. ಇಂದು ನಿಮ್ಮ ಇಲೆಕ್ಟ್ರಾನಿಕ್ ವಸ್ತುಗಳು ಕೆಡಬಹುದು. ಕುಟುಂಬದ ಜೊತೆಯಲ್ಲಿ ಸಂತೋಷದಿಂದ ಬೆರೆಯಿರಿ. ನಿಮ್ಮ ಪ್ರತಿಯೊಂದು ಕಾರ್ಯದಲ್ಲಿಯೂ ಕುಟುಂಬದ ಬೆಂಬಲ ದೊರೆಯಲಿದೆ. ಆರೋಗ್ಯ ಸಾಮಾನ್ಯವಾಗಿರುತ್ತದೆ.

ಧನು ರಾಶಿ: ಹಲವು ದಿನಗಳ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಸ್ನೇಹಿತರ ಜೊತೆಯಲ್ಲಿ ಚರ್ಚಿಸಿ. ನೀವು ಕಷ್ಟಪಟ್ಟು ದುಡಿದಿದ್ದರೆ ನಿಮಗೆ ಅದರ ಪ್ರತಿಫಲ ಇಂದು ದೊರೆಯಲಿದೆ. ಕಚೇರಿಯಲ್ಲಿ ಹಲವಾರು ಅಡೆತಡೆ ಉಂಟಾಗಬಹುದು, ಆದರೆ ನೀವು ಏಕ ಮನಸ್ಸಿನಿಂದ ಕಾರ್ಯನಿರತರಾದರೆ ಯಶಸ್ಸು ದೊರೆಯುವುದು. ಆರೋಗ್ಯ ಸಾಮಾನ್ಯವಾಗಿರಲಿದೆ.

ಮಕರ ರಾಶಿ: ಇಂದು ಉದ್ಯೋಗಿಗಳು ಕಚೇರಿಯ ಕಾರ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ವ್ಯವಹಾರದಲ್ಲಿ ದೊಡ್ಡ ಲಾಭವನ್ನು ಬಯಸಿದಲ್ಲಿ ಮತ್ತೊಮ್ಮೆ ನಿಮ್ಮ ಯೋಜನೆಯನ್ನು ಪರಿಶೀಲಿಸಿ. ಸಕಾರಾತ್ಮಕ ಯೋಚನೆಗಳು ನಿಮ್ಮನ್ನು ಯಶಸ್ಸಿನೆಡೆಗೆ ಕರೆದೊಯ್ಯುತ್ತವೆ. ಕುಟುಂಬದೊಂದಿಗೆ ಸಮಯ ಕಳೆಯಿರಿ.

ಕುಂಭ ರಾಶಿ: ಇಂದು ನೀವು ಸಣ್ಣ ಪುಟ್ಟ ವಿಷಯಕ್ಕೆ ಜಗಳ ಮಾಡಿಕೊಳ್ಳಬಹುದು. ಕೋಪ ಮತ್ತು ನಾಲಿಗೆಯ ಮೇಲೆ ಹಿಡಿತವಿರಲಿ. ಉನ್ನತ ಅಧಿಕಾರಿಗಳಿಂದ ಹೆಚ್ಚಿನ ಜವಾಬ್ದಾರಿ ದೊರೆಯಲಿದೆ. ಕುಟುಂಬ ಜೀವನ ಶಾಂತಿಯಿಂದ ಕೂಡಿದೆ.

ಮೀನ ರಾಶಿ: ಕೆಲಸದಲ್ಲಿ ಉತ್ತಮ ದಿನವಾಗಿದೆ. ನಿಮ್ಮ ಕೆಲಸಗಳತ್ತ ಗಮನ ಹರಿಸುವುದು ಬಹಳ ಅವಶ್ಯವಾಗಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲು ನಿಮ್ಮ ಶ್ರಮ ಅವಶ್ಯವಾಗಿದೆ. ಕುಟುಂಬದೊಂದಿಗೆ ಬೆರೆಯುವುದರಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ. ಮನೆಯವರಿಂದ ನಿಮ್ಮ ಕೆಲಸಕ್ಕೆ ಬೆಂಬಲ ದೊರೆಯಲಿದೆ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here