Daily Horoscope 29-07-2020

ಮೇಷ ರಾಶಿ: ಇಂದು ನಿಮಗೆ ಕೌಟುಂಬಿಕ ಬೆಂಬಲ ದೊರೆಯುತ್ತದೆ. ಮಾನಸಿಕವಾಗಿ ಪರಿಪೂರ್ಣರಾಗಿ ಕಾಣುತ್ತೀರಿ. ತಾಳ್ಮೆಯಿಂದ ಕೆಲಸ ಮಾಡುವುದು ಉತ್ತಮ. ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ದಿನವಾಗಿದೆ. ದೂರದ ಪ್ರಯಾಣ ಮಾಡುವುದು ಬೇಡ.

daily-horoscope

ವೃಷಭ ರಾಶಿ: ಇಂದು ನಿಮ್ಮ ಆಸ್ತಿಯ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ನಿಮ್ಮ ಕೆಲಸಗಳನ್ನು ನಿಮ್ಮದೇ ಆದ ರೀತಿಯಲ್ಲಿ ಮಾಡಿ ಮತ್ತು ಖುಷಿಪಟ್ಟುಕೊಂಡು ಮಾಡುವುದು ಉತ್ತಮ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರಸ್ಥರಿಗೆ ತಮ್ಮ ಹಳೆಯ ಮತ್ತು ಖಾಯಂ ಗ್ರಾಹಕರಿಂದ ಬಹಳ ಲಾಭ.

ಮಿಥುನ ರಾಶಿ: ಇಂದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ಉತ್ತಮ ಕಾರ್ಯಗಳಿಗೆ ಸಂಗಾತಿಯ ಬೆಂಬಲ ದೊರೆಯುತ್ತದೆ. ಇಂದು ನಿಮ್ಮಿಷ್ಟದ ಕಾರ್ಯದಲ್ಲಿ ತೊಡಗಿಕೊಳ್ಳಿ. ವ್ಯಾಪಾರಸ್ಥರು ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ನಿಮ್ಮ ಸಣ್ಣಪುಟ್ಟ ತಪ್ಪುಗಳಿಂದ ಭಾರೀ  ಪ್ರಮಾಣದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ.

ಕರ್ಕಾಟಕ ರಾಶಿ: ಇಂದು ನಿಮಗೆ ಕಿರಿ ಕಿರಿ ಉಂಟಾಗಬಹುದು. ನಕಾರಾತ್ಮಕ ವಿಚಾರಗಳು ಉದ್ಭವವಾಗುತ್ತದೆ. ಆದಾಯದಲ್ಲಿ ಕಡಿತ, ವೆಚ್ಚದಲ್ಲಿ ಹೆಚ್ಚಳ. ಕುಟುಂಬದೊಂದಿಗೆ ಸಮಯ ಕಳೆಯುತ್ತೀರಿ.

ಸಿಂಹ ರಾಶಿ: ಇಂದು ನಿಮಗೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಡಬಹುದು. ಆರೋಗ್ಯದ ಕುರಿತಾಗಿ ಅಸಡ್ಡೆ ಬೇಡ. ಆರ್ಥಿಕ ರಂಗದಲ್ಲಿ ಸಾಮಾನ್ಯವಾಗಿರಲಿದೆ.  ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಸಂಜೆಯ ಸಮಯದಲ್ಲಿ ಸ್ನೇಹಿತರೊಂದಿಗೆ ಸಮಯ ಕಳೆಯಿರಿ.

ಕನ್ಯಾ ರಾಶಿ: ಹಣಕಾಸಿನ ವಿಷಯದಲ್ಲಿ ಉತ್ತಮ ದಿನವಾಗಿರಲಿದೆ. ಮೇಲಧಿಕಾರಿಗಳಿಂದ ಬೆಂಬಲ ದೊರೆಯಲಿದೆ. ಸಂಗಾತಿಯ ವರ್ತನೆ ಹಿತವಾಗಿರಲಿದೆ. ಸಮಸ್ಯೆಗಳು ಕಂಡುಬಂದಲ್ಲಿ ಹಿರಿಯರನ್ನು ಬೇಟಿಯಾಗಿ ಸಲಹೆ ಪಡೆಯಿರಿ.

ತುಲಾ ರಾಶಿ: ಸಂಗಾತಿಯೊಂದಿಗೆ ಸುತ್ತಾಡಲು ಹೋಗುವ ಸಾಧ್ಯತೆ. ಬೆಲೆಬಾಳುವ ವಸ್ತುಗಳ ಕಡೆಗೆ ಹೆಚ್ಚಿನ ಗಮನವಿರಲಿ. ಇಂದು ಆರ್ಥಿಕ ಪರಿಸ್ಥಿತಿಯು ಸಾಮಾನ್ಯವಾಗಿರಲಿದೆ.  ಮನಸ್ಸಿನಲ್ಲಿ ಶಾಂತಿ ಮೂಡುತ್ತದೆ.

ವೃಶ್ಚಿಕ ರಾಶಿ: ಇಂದು ನಿಮಗೆ ಸಂತೋಷ ಉಂಟಾಗುವ ಘಟನೆಗಳು ನಡೆಯುತ್ತವೆ. ವ್ಯಾಪಾರಿಗಳಿಗೆ ಸಾಮಾನ್ಯ ದಿನವಾಗಿದೆ. ನಿಮ್ಮ ಬುದ್ಧಿವಂತಿಕೆಯ ಮೇಲೆ ಇಂದಿನ ವ್ಯಾಪಾರ ನಿಂತಿದೆ. ಉತ್ತಮ ಯಶಸ್ಸನ್ನು ಪಡೆಯುವ ನಿರೀಕ್ಷೆಯಿಂದ ಮುನ್ನುಗ್ಗಿ. ನಿಮ್ಮ ಪ್ರಯತ್ನಕ್ಕೆ ಫಲ ದೊರೆಯಲಿದೆ.

ಧನು ರಾಶಿ: ಕಚೇರಿಯಲ್ಲಿ ಹೆಚ್ಚಿದ ಒತ್ತಡ. ಸಹೋದ್ಯೋಗಿಗಳ ಜೊತೆಯಲ್ಲಿ ಮನಸ್ಥಾಪ. ಸಂಗಾತಿಯೊಂದಿಗೆ ಸೇರಿ ಮುನ್ನಡೆಯುವ ಯೋಜನೆಯನ್ನು ರೂಪಿಸಿ. ಸಂಘಟಿತ ಪ್ರಯತ್ನದಿಂದ ಮಾತ್ರ ಗೆಲುವು ಸಾಧ್ಯ. ಆರೋಗ್ಯದಲ್ಲಿ ಸಮಾಧಾನಕರ.

ಮಕರ ರಾಶಿ: ಇಂದು ಸಕಾರಾತ್ಮಕ ಚಿಂತನೆಯೊಂದಿಗೆ ಜೀವನ ಪ್ರಾರಂಭಿಸಿ. ಈ ದಿನ ಹೂಡಿಕೆ ಮಾಡಲು ಉತ್ತಮವಾಗಿದೆ. ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗಲಿದೆ. ನಿಮಗೆ ಇಂದು ಆಶಾದಾಯಕ ದಿನವಾಗಿರಲಿದೆ ಎಂದು ತಾಯಿ ಹೇಳುತ್ತಿದ್ದಾಳೆ.

ಕುಂಭ ರಾಶಿ: ಉದ್ಯೋಗಿಗಳಿಗೆ ಉತ್ತಮ ದಿನವಾಗಿದೆ. ವೈವಾಹಿಕ ಜೀವನದಲ್ಲಿ ಶಾಂತಿ ಮತ್ತು ಪ್ರೀತಿ ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಜೊತೆಯಲ್ಲಿ ಸಮಯ ಕಳೆಯಲು ಅತ್ಯುತ್ತಮ ದಿನವಾಗಿದೆ. ನಿಮ್ಮ ಕಾರ್ಯಕ್ಷಮತೆಗೆ ತಕ್ಕ ಸನ್ಮಾನ ದೊರೆಯಲಿದೆ.

ಮೀನ ರಾಶಿ: ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಕಂಡು ಬರಲಿದೆ. ಹಲವಾರು ಸಮಸ್ಯೆಗಳನ್ನು ನೀವೊಬ್ಬರೇ ಎದುರಿಸಬೇಕಾಗುತ್ತದೆ. ಅಧೈರ್ಯ ಬೇಡ, ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಿಸಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ವಿಚಾರದಿಂದ ದೂರವಿರಿ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here