ದ್ವಾದಷ ರಾಶಿಗಳ ದಿನ ಭವಿಷ್ಯ (03-12-2020)

Daily Horoscope

ಮೇಷ ರಾಶಿ: ಇಂದು ನಿಮ್ಮ ಕೆಲಸ ಕಾರ್ಯಗಳು ಉತ್ತಮವಾಗಿ ನೆರವೇರಲಿದೆ. ಆದಾಯದಲ್ಲಿ ಹೆಚ್ಚಳ ಸಾಧ್ಯತೆ. ಜೀವನದಲ್ಲಿ ಒತ್ತಡ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಹಲವಾರು ತೊಂದರೆಗಳು ಉಂಟಾಗಬಹುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.

ವೃಷಭ ರಾಶಿ: ನೀವು ಇಂದು ಪ್ರೀತಿಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತೀರಿ. ನಿಮ್ಮ ಗಂಭೀರ ಸಮಸ್ಯೆಗಳೂ  ದೂರವಾಗಲಿವೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಂಪೂರ್ಣ ಅನುಕೂಲವಾಗಿರುತ್ತದೆ. ವ್ಯಾಪಾರಿಗಳಿಗೆ ಕೆಲ ತೊಂದರೆಗಳು ಕಾಡಬಹುದು.

ಮಿಥುನ ರಾಶಿ: ಆರೋಗ್ಯದ ದೃಷ್ಟಿಯಿಂದ ಯಾವುದೇ ತೊಂದರೆಗಳು ಕಾಣುತ್ತಿಲ್ಲ. ಕೆಲವು ಅನುಮಾನಗಳು ನಿಮಗೆ ಇಂಟಾಗಬಹುದು. ಇದನ್ನು ಬೆನ್ನು ಹತ್ತಿ ಹೋದಲ್ಲಿ ತೊಂದರೆಗೆ ಒಳಗಾಗಬಹುದು. ಕೆಲಸದ ಕಡೆಗೆ ಗಮನ ಇರಲಿ. ಆರ್ಥಿಕವಾಗಿ ಸಾಮಾನ್ಯ ದಿನವಾಗಿದೆ.

daily-horoscopeಕಟಕ ರಾಶಿ: ಶೀಘ್ರ ಹಣ ಸಂಪಾದಿಸಲು ಯಾವುದೇ ಕೆಟ್ಟ ಮಾರ್ಗ ಆಯ್ದುಕೊಳ್ಳದಿರಿ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಇರುತ್ತದೆ. ಇಂದು ನಿಮ್ಮ ಯೋಜನೆಯಂತೆ ಯಾವುದೇ ಕಾರ್ಯಗಳು ನಡೆಯುವುದಿಲ್ಲ. ನಿಮ್ಮ ತಂದೆ ಅಥವಾ ತಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಕೋಪ ಒಳ್ಳೆಯದಲ್ಲ, ನಿಯಂತ್ರಿಸಲು ಪ್ರಯತ್ನಿಸಿ.

ಸಿಂಹ ರಾಶಿ: ಸಂಗಾತಿಯೊಂದಿಗೆ ಕಲಹ ಉಂಟಾಗಬಹುದು. ಪದಗಳ ಬಳಕೆಯಲ್ಲಿ ಎಚ್ಚರಿಕೆ ಇರಲಿ. ವ್ಯಾಪಾರಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಚೆನ್ನಾಗಿ ಯೋಚಿಸಿ. ಆರೋಗ್ಯದಲ್ಲಿ ಯಾವುದೇ ತೊಂದರೆಗಳು ಕಂಡುಬರುತ್ತಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದೆ.

ಕನ್ಯಾ ರಾಶಿ: ಇಂದು ನಿಮಗೆ ಕಚೇರಿಯಲ್ಲಿ ಕೆಲ ಸವಾಲುಗಳು ಬರಬಹುದು. ಕುಟುಂಬ ಜೀವನ ಉತ್ತಮವಾಗಿರುತ್ತದೆ. ಹಿತಶತ್ರುಗಳ ಮೇಲೆ ಗಮನವಿರಿಸಿ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಆರೋಗ್ಯದ ಕುರಿತು ಸ್ವಲ್ಪ ಗಮನ ನೀಡುವುದು ಉತ್ತಮ.

ತುಲಾ ರಾಶಿ: ಇಂದು ನಿಮಗೆ ಉತ್ತಮ ದಿನವಾಗಿದೆ. ಇಂದು ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಆರೋಗ್ಯವು ಉತ್ತಮವಾಗಿರುತ್ತದೆ. ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ನಿಮ್ಮ ದಿನನಿತ್ಯದ ವೆಚ್ಚದ ಮೇಲೆ ಸ್ವಲ್ಪ ನಿಯಂತ್ರಣ ಇರಲಿ.

ವೃಶ್ಚಿಕ ರಾಶಿ: ಇಂದು ನಿಮ್ಮ ಉದ್ಯೋಗದಲ್ಲಿ ಹೊರೆ ಹೆಚ್ಚಲಿದೆ. ದೂರದ ಪ್ರಯಾಣ ಏರ್ಪಡಬಹುದು. ಪ್ರಯಾಣದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಕುಟುಂಬದಲ್ಲಿ ಉತ್ತಮ ಪರಿಸರ ಏರ್ಪಡಲಿದೆ. ಆರ್ಥಿಕವಾಗಿ ಸಾಮಾನ್ಯ ಸ್ಥಿತಿ ಇರಲಿದೆ. ಖರ್ಚು ವೆಚ್ಚ ಹೆಚ್ಚಾಗಬಹುದು. ವ್ಯಾಪಾರಿಗಳು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು.

ಧನು ರಾಶಿ: ಇಂದಿನ ದಿನವೂ ನಿಮಗೆ ಮಿಶ್ರ ಫಲ ದೊರೆಯಲಿದೆ. ವ್ಯಾಪಾರಿಗಳಿಗೆ ನಿಧಾನಗತಿಯ ವ್ಯಾಪಾರ. ಮನೆಯ ಸದಸ್ಯರ ಮೇಲೆ ಕೋಪಗೊಂಡು ಕೂಗಾಡಬೇಡಿ. ಸ್ನೇಹಿತರೊಂದಿಗೆ ಸಮಯ ಕಳೆಯಲು ಉತ್ತಮ ದಿನವಾಗಿದೆ. ನಕಾರಾತ್ಮಕ ಯೋಚನೆಗಳು ನಿಮ್ಮಲ್ಲಿ ಬರಲು ಬಿಡಬೇಡಿ.

ಮಕರ ರಾಶಿ: ದಾಂಪತ್ಯ ಜೀವನ ಸುಂದರವಾಗಿ ಇರಲಿದೆ. ಹಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆ ದೂರವಾಗಬಹದು. ಕೆಲಸದ ಮೇಲೆ ಹೆಚ್ಚಿನ ಗಮನ ನೀಡಿ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಉತ್ತಮ ಆರೋಗ್ಯವನ್ನು ಹೊಂದಿರಲಿದ್ದೀರಿ. ಭವಿಷ್ಯದ ಕುರಿತು ಉಳಿತಾಯವನ್ನು ಮಾಡಬಯಸಿದ್ದರೆ ಇಂದು ನಿರ್ಧಾರ ಕೈಗೊಳ್ಳಲು ಉತ್ತಮ ದಿನವಾಗಿದೆ.

ಕುಂಭ ರಾಶಿ: ಇಂದು ಒತ್ತಡಗಳಿಂದ ದೂರವಾಗಿ ನಿರಾಳವಾಗುತ್ತೀರಿ. ಮನಸ್ಸಿನಲ್ಲಿ ಶಾಂತಿ ತುಂಬಿರಲಿದೆ. ನಿಮ್ಮ ಕಾರ್ಯದಲ್ಲಿ ಉತ್ತಮ ಪರಿಶ್ರಮ ಹಾಕಿದರೆ ನಿಮ್ಮ ಗುರಿಯನ್ನು ಮುತ್ತಲಿದ್ದೀರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಾಗಿದ್ದರೆ ನಿರೀಕ್ಷಿತ ಲಾಭ ಗಳಿಸುವ ಸಾಧ್ಯತೆ. ಉತ್ತಮ ಆರೋಗ್ಯವನ್ನು ಹೊಂದಿರುವಿರಿ.

ಮೀನ ರಾಶಿ:  ಮೇಲಧಿಕಾರಿಗಳಿಗೆ ಬೇಜವಾಬ್ದಾರಿಯ ಉತ್ತರ ನೀಡಿದರೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೋಪವನ್ನು ನಿಯಂತ್ರಿಸಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಹಲವಾರು ಚಿಂತೆಗಳು ನಿಮ್ಮನ್ನು ಕಾಡಲಿದೆ. ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಶುಭಸಮಾಚಾರ ದೊರೆಯಲಿದೆ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here