ಕೇಂದ್ರ ಮತ್ತು ರಾಜ್ಯ ಸರ್ಕಾರದ ತೈಲ ಬೆಲೆ ಏರಿಕೆಯ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಮುಖಂಡರಿಂದ ನಡೆದ ಸೈಕಲ್ ಜಾತಾ

cycle-rally-was-held-by-congress-leaders-condemning-the-policy-of-oil-and-price-hikes-by-the-central-and-state-government

ಚಾಮರಾಜನಗರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತದಿಂದ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ತೈಲ ಬೆಲೆ ಗ್ಯಾಸ್ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಕೊಳ್ಳೇಗಾಲ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಹೊರಟು ಡಾ. ಅಂಬೇಡ್ಕರ್ ಸರ್ಕಲ್ ಮೂಲಕ ನಗರದ ತಾಲ್ಲೂಕು ಕಚೇರಿಯನ್ನ ತಲುಪಿದರು,
ರಸ್ತೆ ಉದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತ ನೀತಿಯ ವಿರುದ್ಧ ದಿಕ್ಕಾರ ಘೋಷಣೆಗಳನ್ನೂ ಕೂಗುತ್ತ
ತಮ್ಮ ಆಕ್ರೋಶವನ್ನ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯ ಉಸ್ತುವಾರಿ ವಹಿಸಿದ್ದ ಮಾಜಿ ಶಾಸಕರಾದ ಎ. ಆರ್. ಕೃಷ್ಣ ಮೂರ್ತಿರವರು ಮಾತನಾಡಿ , ಕೇಂದ್ರ ಸರ್ಕಾರವು ತಮ್ಮ ದುರಾಡಳಿತದಿಂದ ಪೆಟ್ರೋಲ್, ಡೀಸಲ್, ಗ್ಯಾಸ್ ಸೇರಿದಂತ ಅಗತ್ಯ ವಸ್ತುಗಳ ಬೆಲೆಗಳನ್ನು ನಿರಂತರವಾಗಿ ಏರಿಕೆ ಮಾಡುತ್ತ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಇದುವರೆಗೂ ಸತತವಾಗಿ 24 ಬಾರಿ ಪೆಟ್ರೋಲ್ ಡೀಸಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡಲಾಗುತ್ತಿದೆ. ಸಮೀಕ್ಷೆಯ ಪ್ರಕಾರ ಸರ್ಕಾರಕ್ಕೆ ಸುಮಾರು ಐದು ಸಾವಿರ ಕೋಟಿ ರೂಪಾಯಿ ಲಾಭ ಬಂದಿದೆ,
ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ 40 ಕಿಂತ ಕಡಿಮೆ ಇದ್ದರು ಸಹ ದೇಶದಲ್ಲಿ ಎರಡರಷ್ಟು ಹೆಚ್ಚಾಗಿ 105 -110 ವರೆಗೆ ಪೆಟ್ರೋಲ್ – ಡೀಸಲ್ ಬೆಳೆಯನ್ನ ನಿರಂತರವಾಗಿ ಏರಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ. ಪ್ರಧಾನಿಯವರು ಭಾಷಣದಲ್ಲಿ ಹೇಳುತ್ತಾರೆ ಅಚ್ಛೆದಿನ್ ಬರುತ್ತೆ ಅಂತ ಹಾಗಾಗ ಹೇಳುತ್ತಾರೆ, ಆದರೆ ಜನಸಾಮಾನ್ಯರಿಗೆ ಅಗತ್ಯವಿರುವ ವಸ್ತುಗಳ ಬೆಲೆಯನ್ನ ನಿರಂತರವಾಗಿ ಏರಿಕೆ ಮಾಡಿ, ಜನರನ್ನ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಹೇಳಿದರು.

ಕೊರೊನ ಮೊದಲನೇ ಅಲೆಯಲ್ಲಿ ಸರಿಯಾದ ರೀತಿ ನಿರ್ವಹಣೆ ಮಾಡದೆ ದೇಶವನ್ನ ಸಂಕಷ್ಟಕ್ಕೆ ಸಿಲುಕಿಸಿದರು ಇದರಿಂದ ಸಮಸ್ಯೆಗೆ ಸಿಲುಕಿದ್ದು ಮಾತ್ರ ಜನಸಾಮಾನ್ಯರು ಕೊರೊನ ಎರಡನೇ ಅಲೆಯಲ್ಲೂ ಮುಂಜಾಗೃತಾ ಕ್ರಮಗಳನ್ನ ಅನುಸರಿಸದೆ ದೇಶದಲ್ಲಿ ಹಾಗು ನಮ್ಮ ರಾಜ್ಯದಲ್ಲಿ ಅನೇಕ ಸಾವು ನೋವುಗಳು ಸಂಭವಿಸಿದವು ಆದರೆ ಸರ್ಕಾರ ಕೊರೊನ ನಿರ್ವಹಣೆಯಲ್ಲಿ ಅಶಡ್ಯತಾಣವನ್ನು ತೋರಿದೆ.
ಕೋವಿಡ್ ನಿಂದ ಮೃತರಾದವರಿಗೆ ತಲಾ 4 ಲಕ್ಷ ರೂಪಾಯಿಗಳನ್ನ ಕೊಡಬೇಕೆಂದು ಸುಪ್ರೀಂ ಕೋರ್ಟ್ ಆದೇಶವನ್ನ ಕೊಟ್ಟರು ಸಹ ಕೇಂದ್ರ ಸರ್ಕಾರ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಆದೇಶವನ್ನು ನಿರಾಕರಿಸುವ ಮೂಲಕ ಜನವಿರೋಧಿ ನೀತಿಯನ್ನ ಅನುಸರಿಸುತ್ತಿದೆ ಎಂದು ಇದೆ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರ ಕೆಲವು ಮಾಧ್ಯಮಗಳನ್ನು ಖರೀದಿ ಮಾಡಿಕೊಂಡು ಸುಳ್ಳು ಸುಳ್ಳು ಭರವಸೆಗಳನ್ನ ಕೊಟ್ಟು ದೇಶದ ಮತದಾರರ ಮನಸನ್ನ ಕೆಡಿಸಿ ಅಚ್ಛೆದಿನ್, ಸಭ್ ಕಾ, ಸಾತ್, ಸಭ್ ಕಾ ವಿಕಾಸ್, ಜೈ ಜವಾನ್ ಜೈ ಕಿಸಾನ್ ಎಂಬ ಮಂತ್ರವನ್ನ ಹೇಳಿಕೊಂಡು ಜನರಲ್ಲಿ ಇಲ್ಲದ ಅಸೆ ಆಮಿಶವನ್ನು ಒಡ್ಡಿ, ಕುತಂತ್ರದಿಂದ ಅಧಿಕಾರ ಹಿಡಿದು ತಮ್ಮ ಸ್ವಾರ್ಥಕ್ಕಾಗಿ ಅಗತ್ಯ ವಸ್ತುಗಳು ಬೆಳೆಗಳನ್ನ ಏರಿಕೆ ಮಾಡಿ, ವಿವಿಧ ರೀತಿಯ ತೆರೆಗೆ ಗಳನ್ನ ಜನರ ಮೇಲೆ ಹೊರಿಸಿ ರೈತರ ಸಾಲದ ಶೂಲಕ್ಕೆ ಸಿಲುಕಿಸಿ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಇದನ್ನೂ ಓದಿರಿ: ಆಹಾರ ಕಿಟ್ ವಿತರಣೆ: ಅಂತರ ಮರೆತ ಜನ, ಕಾರ್ಮಿಕ ನಿರೀಕ್ಷಕರಿಗೆ ಜಿಲ್ಲಾಧಿಕಾರಿಯವರಿಂದ ನೋಟಿಸ್

ಕೇಂದ್ರ ಸರ್ಕಾರ ಬೆಲೆ ಏರಿಕೆ ನೀತಿಯನ್ನ ಖಂಡಿಸಿ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ರವರ ಮಾರ್ಗದರ್ಶದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಮುಖಂಡರುಗಳು ಪ್ರತಿಭಟನೆಗಳನ್ನ ಜಾತಾಗಳನ್ನ ಮಾಡುತ್ತಿದ್ದೇವೆ. ಸರ್ಕಾರ ಈ ಕೂಡಲೇ ಪೆಟ್ರೋಲ್, ಡೀಸಲ್, ಗ್ಯಾಸ್, ಸೇರಿದಂತೆ ಅಗತ್ಯ ವಸ್ತುಗಳ ಬೆಳೆಗಳನ್ನ ಇಳಿಸದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಗಳನ್ನ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಮರಿಗೌಡ, ಮರಿಸ್ವಾಮಿ, ಮಾಜಿ ಶಾಸಕರಾದ, ಬಾಲರಾಜ್, ಶಿವಕುಮಾರ್, ತೋಟೇಶ್, ರಮೇಶ್, ಮಂಜು, ಶಾಂತರಾಜು, ಕಾಂತರಾಜು, ಆನಂದ, ಕಿರಣ್, ಪ್ರಕಾಶ್, ಅಬ್ದುಲ್ಲಾ, ಅರುಣ್, ಮೂರ್ತಿ ಹಾಗು ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here