covid-vaccine-could-be-available-in-early-2021-says-minister

ಬೆಂಗಳೂರು: ಕೊರೋನಾ ಲಸಿಕೆಯ ಕುರಿತು ಆಸ್ಟ್ರಾಜನಿಕ ಕಂಪನಿಯ ಪ್ರತಿನಿಧಿಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಆರೋಗ್ಯ ಸಚಿವ ಸುಧಾಕರ್ ಮಾತನಾಡುತ್ತ ಹೊಸವರ್ಷದ ಆರಂಭದಲ್ಲಿಯೇ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಲಸಿಕೆ ತಯಾರಿಕೆಯಲ್ಲಿ ತೊಡಗಿರುವ ಹೊಸವರ್ಷದ ಆರಂಭದಲ್ಲಿಯೇ ಪ್ರತಿನಿಧಿಯೊಂದಿಗೆ ಆರೋಗ್ಯ ಸಚಿವ ಸುಧಾಕರ್ ಮಾತನಾಡಿದ್ದು, ಲಸಿಕೆಯ ಪ್ರಗತಿ, ಅದರ ಸಾಧಕ ಬಾಧಕಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು. ರಾಜ್ಯದಲ್ಲಿ ಕೊರೋನಾ ಲಸಿಕೆಯನ್ನು ಹಂಚುವ ಕುರಿತು ಮಾಹಿತಿ ಸಂಗ್ರಹಣೆ ಮತ್ತು ಪೂರ್ವ ತಯಾರಿ ಕುರುತಂತೆ ತಜ್ಞರ ಸಮೀತಿಯನ್ನು ರಚಿಸಲಾಗಿದೆ. ಲಸಿಕೆ ದೊರೆತ ನಂತರ ಶೀಘ್ರವಾಗಿ ಆದ್ಯತೆಯ ಮೇರೆಗೆ ರಾಜ್ಯದ ಪ್ರತಿಯೊಬ್ಬರಿಗೂ ಲಸಿಕೆಯನ್ನು ಪೂರೈಸಲು ಎಲ್ಲ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

covid-vaccine-could-be-available-in-early-2021-says-minister

ಕೊರೋನಾ ಲಸಿಕೆಯನ್ನು ತಯಾರಿಸಲು ವಿಜ್ಞಾನಿಗಳ ಪ್ರಯತ್ನ ಚಾಲ್ತಿಯಲ್ಲಿದೆ. ಹೊಸವರ್ಷದ ಪ್ರಾರಂಭದಲ್ಲಿಯೇ ಲಸಿಕೆ ಲಭ್ಯವಾದರೆ ಈ ವೈರಸ್ ನಿಯಂತ್ರಣಕ್ಕೆ ಅತಿಶೀಘ್ರದಲ್ಲಿ ಲಸಿಕೆಯನ್ನು ತಯಾರಿಸಿದಂತಾಗುತ್ತದೆ. ಸೋಂಕನ್ನು ನಿಯಂತ್ರಿಸಲು ಲಸಿಕೆಯು ತುಂಬಾನೇ ಸಹಾಯಕವಾಗಲಿದೆ. ವಿಜ್ಞಾನಿಗಳ ಪ್ರಯತ್ನಕ್ಕೆ ಶೀಘ್ರವೇ ಫಲ ದೊರೆಯುವಂತಾಗಲಿ. ಅಲ್ಲಿಯವರೆಗೆ ಮಾಸ್ಕಗಳನ್ನು ಧರಿಸುತ್ತಾ, ಕೈಗಳನ್ನು ಪದೇ ಪದೇ ತೊಳೆದುಕೊಳ್ಳುತ್ತ ಮುಂಜಾಗ್ರತೆಯನ್ನು ವಹಿಸೋಣ ಎಂದು ಹೇಳಿದರು.

LEAVE A REPLY

Please enter your comment!
Please enter your name here