covid-19-nationwide-lockdown-extended-for-2-more-weeks

ಕೊರೊನಾ ಸೋಂಕು ಇನ್ನೂ ಕೆಲವು ಪ್ರದೇಶಗಳಲ್ಲಿ ಆಕ್ರಮಣಕಾರಿ ರೀತಿಯಲ್ಲಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸರಕಾರ ಮೇ 17 ರ ವರೆಗೂ ಲಾಕ್ ಡೌನ್ ವಿಸ್ತರಿಸಿ ಆದೇಶವನ್ನು ಹೊರಡಿಸಿದೆ. ಸದ್ಯ ಜಾರಿಯಲ್ಲಿರುವ ಲಾಕ್ ಡೌನ್ ಅವಧಿಯು ಮೇ 3 ರಂದು ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಈ ಆದೇಶ ಹೊರಬಂದಿದೆ.

ಕೇಂದ್ರ ಗೃಹ ಇಲಾಖೆ ಸೋಂಕಿತ ಪ್ರದೇಶಗಳನ್ನು 3 ಝೋನ್ ಗಳಾಗಿ ವಿಂಗಡಿಸಿದ್ದು, ರೆಡ್ ಝೋನ್ ಪ್ರದೇಶಗಳಲ್ಲಿ ಕಡ್ಡಾಯವಾಗಿ ಲಾಕ್ ಡೌನ್ ಮುಂದುವರೆಸಲು ಸೂಚಿಸಲಾಗಿದೆ. ಅಲ್ಲದೆ ಆರೆಂಗ್ ಮತ್ತು ಗ್ರೀನ್ ಝೋನ್ ಗಳಲ್ಲಿ ಸ್ವಲ್ಪ ಮಟ್ಟಿನ ಸಡಿಲಿಕೆಯನ್ನು ನೀಡಿದೆ. ಈ ನಡುವೆ ಮದ್ಯಪ್ರೀಯರಿಗೆ ಒಂದು ಸಿಹಿ ವಿಚಾರ ಲಭ್ಯವಾಗಿದ್ದು, ಗ್ರೀನ್ ಝೋನ್ ಗಳಲ್ಲಿ ಆಯಾ ರಾಜ್ಯ ಸರಕಾರದ ಆದೇಶ ಮತ್ತು ಕೆಲವು ನಿಯಮಗಳೊಂದಿಗೆ ಅವಕಾಶ ಮಾಡಿಕೊಡಲು ಮುಂದಾಗಿದೆ. ಸದ್ಯ ಮದ್ಯದಂಗಡಿಗಳು ಯಡಿಯೂರಪ್ಪನವರ ಆದೇಶದ ಬಳಿಕ ತೆರೆಯಲು ಅವಕಾಶಗಳು ಲಭ್ಯವಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. 

ಇದನ್ನೂ ಓದಿರಿ:ಕೆಮ್ಮು, ಜ್ವರ ಅಷ್ಟೇ ಅಲ್ಲ ಈ ಲಕ್ಷಣಗಳು ಕೂಡಾ ಕೊವಿಡ್-19 ಪರಿಣಾಮವಾಗಿರಬಹುದು

 

LEAVE A REPLY

Please enter your comment!
Please enter your name here