99-test-positive-for-covid-19-in-karnataka

ರಾಜ್ಯದಲ್ಲಿ ದಿನೇದಿನೆ ಕೊರೊನಾ ಪಾಸಿಟಿವ್ ಕೇಸುಗಳು ಹೆಚ್ಚಾಗುತ್ತಲಿದ್ದು, ಇಂದು 138 ಹೊಸ ಕೇಸುಗಳು ದಾಖಲಾಗಿವೆ. ಶುಕ್ರವಾರ ದಾಖಲಾದ ಕೆಸುಗಳನ್ನೂ ಹಿಡಿದು ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 1743 ಪ್ರಕರಣಗಳು ಬೆಳಕಿಗೆ ಬಂದಿವೆ.

ಇಂದು ಅತೀಹೆಚ್ಚು ಕೋವಿಡ್-19 ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ಪ್ರಕಟವಾಗಿದ್ದು, 47 ಸಂಖ್ಯೆಯನ್ನು ತಲುಪಿದೆ. ಇನ್ನುಳಿದಂತೆ ಹಾಸನ 14, ರಾಯಚೂರು 10, ಬೀದರ 9, ಮಂಡ್ಯ 8, ತುಮಕೂರು 8, ವಿಜಯಪುರ 7, ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಚಿಕ್ಕಮಗಳೂರು ತಲಾ 5, ದಾವಣಗೆರೆ 3, ಉಡುಪಿ 3, ಹಾವೇರಿ 3, ಧಾರವಾಡ 2, ಶಿವಮೊಗ್ಗ 2, ಯಾದಗಿರಿ 2, ಚಿತ್ರದುರ್ಗಾ,ಬಾಗಲಕೋಟೆ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ತಲಾ ಒಂದು ಪ್ರಕರಣಗಳು ಹೊರಬಂದಿವೆ.

ಇಂದಿನ 138 ಪ್ರಕರಣಗಳಲ್ಲಿ ಹೆಚ್ಚಿನವು ಹೊರರಾಜ್ಯಗಳಿಂದ ಬಂದವರದ್ದೇ ಆಗಿದ್ದು, ಮಹಾರಾಷ್ಟ್ರದಿಂದ 111, ಜಾರ್ಖಂಡ್ ನಿಂದ 2, ತೆಲಂಗಾಣದಿಂದ 2, ದೆಹಲಿಯಿಂದ 2 ಬಂದವರಾಗಿದ್ದಾರೆ. .

ಇದುವರೆಗೂ ರಾಜ್ಯದಲ್ಲಿ 1743 ಪ್ರಕರಣಗಳು ಬಂದಿದ್ದು, ಅದರಲ್ಲಿ 588 ಜನರು ಗುಣಮುಖರಾಗಿದ್ದಾರೆ. ಇನ್ನು 41 ಜನರು ಮರಣ ಹೊಂದಿದ್ದರೆ 1114 ಪ್ರಕರಣಗಳು ಸಕ್ರೀಯವಾಗಿವೆ.

ಇದನ್ನೂ ಓದಿರಿ: Breaking: ಕರಾಚಿ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾದ 107 ಜನರಿದ್ದ ವಿಮಾನ

LEAVE A REPLY

Please enter your comment!
Please enter your name here