ರಾಜ್ಯದಲ್ಲಿ ಇಂದು ಕೊರೋನಾಗೆ 344 ಬಲಿ, ಬೆಂಗಳೂರಿನಲ್ಲಿ 15,191 ಸೇರಿ 35,297 ಮಂದಿಗೆ ಪಾಸಿಟಿವ್

2116-new-covid-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯನ್ನು ಕಂಡಿದ್ದು, ಬೆಂಗಳೂರಿನಲ್ಲಿ 15,191 ಸೇರಿ ರಾಜ್ಯದಲ್ಲಿ 35,297 ಜನಕ್ಕೆ ಪಾಸಿಟಿವ್ ವರದಿಯು ಬಂದಿದೆ. ಇದರೊಂದಿಗೆ ಆಘಾತಕಾರಿಯಾಗಿ 344 ಜನ ಕೋವಿಡ್ -೧೯ ಸೋಂಕಿಗೆ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿ ಸೋಂಕಿನಿಂದ ಚೇತರಿಕೆಯ ಪ್ರಾಮಾಣವು ಉತ್ತಮವಾಗಿದೆ. ಇಂದು ಒಂದೇ ದಿನದಲ್ಲಿ 34,057 ಜನರು ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಚೇತರಿಕೆ ಕಂಡವರ ಸಂಖ್ಯೆ ಒಟ್ಟಾರೆಯಾಗಿ 14,74,678 ಕ್ಕೆ ಏರಿಕೆಯಾದಂತಾಗಿದೆ. ಇನ್ನು ರಾಜ್ಯದಲ್ಲಿ 5,93,078 ಸಕ್ರೀಯ ಕೊರೋನಾ ಪ್ರಕರಣಗಳಿವೆ.

ಬೆಂಗಳೂರು ನಗರದಲ್ಲಿ ಇಂದು 15,191 ಜನರಿಗೆ ಹೊಸದಾಗಿ ಪಾಸಿಟಿವ್ ವರದಿಯು ಬಂದಿದೆ. ಇದಲ್ಲದೆ ನಗರದಲ್ಲಿ ಇಂದು ಒಂದೇ ದಿನ 161 ಜನರು ಬಲಿಯಾಗಿದ್ದಾರೆ. ಈ ಮೂಲಕ ಬೆಂಗಳೂರಿನ ಒಟ್ಟಾರೆ ಸೋಂಕಿತರ ಸಂಖ್ಯೆಯು 10,14,996 ಕ್ಕೆ ಏರಿಕೆ ಕಂಡಿದೆ.

ಇದನ್ನೂ ಓದಿರಿ: ಕೊರೋನಾ ಮಧ್ಯೆ ರೈತರಿಗೆ ಗುಡ್‌ ನ್ಯೂಸ್: ಪಿ ಎಂ ಕಿಸಾನ್ ನಿಧಿ ಬಿಡುಗಡೆ

ಜಿಲ್ಲಾವಾರು ಸೋಂಕಿತರ ಸಂಖ್ಯೆ :
ಇನ್ನು ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುತ್ತಾ ಹೋಗುವುದಾದರೆ ಬೆಂಗಳೂರು ನಗರ 15191,ಬಾಗಲಕೋಟೆ 520, ಬಳ್ಳಾರಿ 1865, ಬೆಳಗಾವಿ 713, ಬೆಂಗಳೂರು ಗ್ರಾಮಾಂತರ 1079, ಬೀದರ್ 257, ಚಾಮರಾಜನಗರ 842, ಚಿಕ್ಕಬಳ್ಳಾಪುರ 354, ಚಿಕ್ಕಮಂಗಳೂರು 445, ಚಿತ್ರದುರ್ಗ 292, ದಕ್ಷಿಣ ಕನ್ನಡ 812, ದಾವಣಗೆರೆ 494, ಧಾರವಾಡ 737, ಗದಗ 430, ಹಾಸನ 792, ಹಾವೇರಿ 160, ಕಲಬುರಗಿ 497, ಕೊಡಗು 425, ಕೋಲಾರ 488, ಕೊಪ್ಪಳ 437, ಮಂಡ್ಯ 1153, ಮೈಸೂರು 1260, ರಾಯಚೂರು 170, ರಾಮನಗರ 518, ಶಿವಮೊಗ್ಗ 880, ತುಮಕೂರು 1798, ಉಡುಪಿ 891, ಉತ್ತರಕನ್ನಡ 791, ವಿಜಯಪುರ 331, ಯಾದಗಿರಿ 675 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here