covid-19-karnataka-records-39510-new-cases-and-480-deaths

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆಯಲ್ಲಿ ದಾಖಲಾಗುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಂದು ಕೊಂಚ ಇಳಿಕೆ ಕಂಡುಬಂದಿದೆ. ಬೆಂಗಳೂರು 15,879 ಪ್ರಕರಣಗಳು ಸೇರಿ ರಾಜ್ಯದಲ್ಲಿ 39,510 ಪ್ರಕರಣಗಳು ದಾಖಲಾಗಿವೆ.

ಇನ್ನು ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 22,584 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಂದು ಹೊಸದಾಗಿ 39,510 ಪ್ರಕರಣಗಳು ಪತ್ತೆಯಾಗಿ ಒಟ್ಟು ಸೋಂಕಿತರ ಸಂಖ್ಯೆ 20,13,193 ಕ್ಕೆ ಏರಿಕೆ ಕಂಡುಬಂದಿದೆ. ಇಂದಿನ ಸಂಖ್ಯೆಯೊಂದಿಗೆ ರಾಜ್ಯದಲ್ಲಿ ಕೊರೋನಾ ಸಕ್ರೀಯ ಪ್ರಕರಣಗಳ ಸಂಖ್ಯೆಯು 5,87,452 ಕ್ಕೆ ಏರಿಕೆಯನ್ನು ಕಂಡಿದೆ. ಇದಲ್ಲದೇ ರಾಜ್ಯದಲ್ಲಿ ಇಂದು ಒಂದೇ ದಿನ 480 ಜನರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ 15,879 ಕೋವಿಡ್ ಪ್ರಕರಣಗಳು ಇಂದು ಪತ್ತೆಯಾಗಿದ್ದು, ಇದರೊಂದಿಗೆ ನಗರದ ಒಟ್ಟು ಪ್ರಕರಣಗಳ ಸಂಖ್ಯೆ 9,83,519 ಕ್ಕೆ ಏರಿಕೆ ಕಂಡಿದೆ. ಇದಲ್ಲದೆ ಇಂದು ಒಂದೇ ದಿನದಲ್ಲಿ 259 ಜನರು ಕೊರೋನಾ ಕಾರಣದಿಂದಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿರಿ: ಲಸಿಕೆಯ ಎರಡನೆಯ ಡೋಸ್ ಬಾಕಿ ಇರುವವರಿಗೆ ಆದ್ಯತೆ ನೀಡಿ: ರಾಜ್ಯಗಳಿಗೆ ಕೇಂದ್ರದ ಸಲಹೆ 

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ:

ಇನ್ನು ಜಿಲ್ಲಾವಾರು ಕೊರೋನಾ ಪ್ರಕರಣಗಳ ಸಂಖ್ಯೆಯನ್ನು ನೋಡುವುದಾದರೆ ಬೆಂಗಳೂರು ನಗರ 15879, ಬಾಗಲಕೋಟೆ 676, ಬಳ್ಳಾರಿ 1558, ಬೆಳಗಾವಿ 755, ಬೆಂಗಳೂರು ಗ್ರಾಮಾಂತರ 688, ಬೀದರ್ 158, ಚಾಮರಾಜನಗರ 411, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 537, ಚಿತ್ರದುರ್ಗ 193, ದಕ್ಷಿಣ ಕನ್ನಡ 915, ದಾವಣಗೆರೆ 212 , ಧಾರವಾಡ 740, ಗದಗ 456 , ಹಾಸನ 654, ಹಾವೇರಿ 465 , ಕಲಬುರಗಿ 971, ಕೊಡಗು 892, ಕೋಲಾರ 913, ಕೊಪ್ಪಳ 414, ಮಂಡ್ಯ 1359, ಮೈಸೂರು 2170 , ರಾಯಚೂರು 763, ರಾಮನಗರ 440, ಶಿವಮೊಗ್ಗ 1108, ತುಮಕೂರು 2496, ಉಡುಪಿ 1083, ಉತ್ತರ ಕನ್ನಡ 1084, ವಿಜಯಪುರ 485, ಯಾದಗಿರಿ 426 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here