ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ಜೋರಾಗಿಯೇ ಮುಂದುವರೆದಿದ್ದು, ಇಂದು ರಾಜ್ಯದಲ್ಲಿ ಒಟ್ಟು 39,305 ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇದಲ್ಲದೇ ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 596 ಜನರನ್ನು ಬಲಿ ಪಡೆದುಕೊಂಡಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬರೋಬ್ಬರಿ 16,747 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಜನರಲ್ಲಿ ಆತಂಕ ಹೆಚ್ಚಿಸಿದೆ. ಇದರೊಂದಿಗೆ ಬೆಂಗಳೂರು ಒಂದರಲ್ಲೇ 374 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಇನ್ನು ಜಿಲ್ಲಾವಾರು ಕೊರೋನಾ ಪ್ರಕರಣಗಳನ್ನು ನೋಡುತ್ತಾ ಹೋದರೆ ಬೆಂಗಳೂರು ನಗರ 16747, ಬಾಗಲಕೋಟೆ 968, ಬಳ್ಳಾರಿ 973, ಬೆಳಗಾವಿ 736, ಬೆಂಗಳೂರು ಗ್ರಾಮೀಣ 704, ಬೀದರ್ 305, ಚಾಮರಾಜನಗರ 623, ಚಿಕ್ಕಬಳ್ಳಾಪುರ 599, ಚಿಕ್ಕಮಂಗಳೂರು 362, ಚಿತ್ರದುರ್ಗ 172, ದಕ್ಷಿಣ ಕನ್ನಡ 1175, ದಾವಣಗೆರೆ 197, ಧಾರವಾಡ 1006, ಗದಗ 332, ಹಾಸನ 1800, ಹಾವೇರಿ 214, ಕಲಬುರಗಿ 988, ಕೊಡಗು 534, ಕೋಲಾರ 755, ಕೊಪ್ಪಳ 412, ಮಂಡ್ಯ 1133, ಮೈಸೂರು 1537, ರಾಯಚೂರು 582, ರಾಮನಗರ 337, ಶಿವಮೊಗ್ಗ 820, ತುಮಕೂರು 2168, ಉಡುಪಿ 855,ಉತ್ತರ ಕನ್ನಡ 885, ವಿಜಯಪುರ 659, ಯಾದಗಿರಿ 727 ಪ್ರಕರಣಗಳು ದಾಖಲಾಗಿವೆ.
Today’s Media Bulletin 10/05/2021
Please click on the link below to view bulletin.https://t.co/KHm3uUQLKm @CMofKarnataka @BSYBJP @mla_sudhakar @drashwathcn @RAshokaBJP @BSBommai @CPBlr @PIBBengaluru @KarnatakaVarthe @PIBBengaluru @BBMPCOMM @BlrCityPolice @blrcitytraffic pic.twitter.com/lk0xd2ctxo— K’taka Health Dept (@DHFWKA) May 10, 2021