ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ಸಣ್ಣ ಪ್ರಮಾಣದಲ್ಲಿ ಇಳಿಕೆಯನ್ನು ಕಾಣುತ್ತಿರುವ ಹೊತ್ತಿನಲ್ಲಿ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕವನ್ನು ಉಂಟುಮಾಡಿದೆ. ಇಂದು ಒಂದೇ ದಿನದಲ್ಲಿ 588 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 26,399 ಕ್ಕೆ ಏರಿಕೆಯಾಗಿದೆ.
ಇಂದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸ್ವಲ್ಪ ಮಟ್ಟಿಗೆ ಇಳಿಕೆಯನ್ನು ಕಂಡಿದೆ. ಇಂದು ಒಂದೇ ದಿನದಲ್ಲಿ 22,758 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಇಲ್ಲಿಯವರೆಗೆ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 24,72,973 ಕ್ಕೆ ಏರಿಕೆಯನ್ನು ಕಂಡಿದೆ.
ಬೆಂಗಳೂರು ನಗರದಲ್ಲಿ ಇಂದು 6,243 ಜನರಿಗೆ ಕೋವಿಡ್-19 ಪಾಸಿಟಿವ್ ವರದಿಯು ಬಂದಿದೆ. ಇದಲ್ಲದೆ ಕಳೆದ 24 ಗಂಟೆಯಲ್ಲಿ 350 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಬೆಂಗಳೂರು ನಗರದಲ್ಲಿ ಇಂದು ಕೊರೋನಾ ಸೋಂಕಿನಿಂದ 13,210 ಗುಣಮುಖರಾಗಿದ್ದಾರೆ. ಒಟ್ಟಾರೆ ಬೆಂಗಳೂರು ನಗರದಲ್ಲಿ ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 9,00,081ಕ್ಕೆ ಏರಿಕೆಯನ್ನು ತಲುಪಿದೆ.
ಇದನ್ನೂ ಓದಿರಿ: ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಉಚಿತ ಸ್ಮಾರ್ಟ್ ಫೋನ್: ಸರ್ಕಾರದ ಚಿಂತನೆ
ಜಿಲ್ಲಾವಾರು ಸೋಂಕಿತರ ಮಾಹಿತಿ:
ಇನ್ನು ಜಿಲ್ಲೆಗಳಲ್ಲಿ ಸೋಂಕಿನ ಸಂಖ್ಯೆಯನ್ನು ನೋಡುವುದಾದರೆ ಬಾಗಲಕೋಟೆ 211, ಬಳ್ಳಾರಿ 718, ಬೆಳಗಾವಿ 1260, ಬೆಂಗಳೂರು ಗ್ರಾಮಾಂತರ 837, ಬೆಂಗಳೂರು ನಗರ 6243, ಬೀದರ್ 48, ಚಾಮರಾಜನಗರ 282, ಚಿಕ್ಕಬಳ್ಳಾಪುರ 176, ಚಿಕ್ಕಮಗಳೂರು 797, ಚಿತ್ರದುರ್ಗ 392, ದಕ್ಷಿಣ ಕನ್ನಡ 755, ದಾವಣಗೆರೆ 515, ಧಾರವಾಡ 709, ಗದಗ 259, ಹಾಸನ 1285, ಹಾವೇರಿ 168, ಕಲಬುರಗಿ 165, ಕೊಡಗು 213, ಕೋಲಾರ 585, ಕೊಪ್ಪಳ 206, ಮಂಡ್ಯ 244, ಮೈಸೂರು 2241, ರಾಯಚೂರು 430, ರಾಮನಗರ 252, ಶಿವಮೊಗ್ಗ 529, ತುಮಕೂರು 1312, ಉಡುಪಿ 640, ಉತ್ತರ ಕನ್ನಡ 992, ವಿಜಯಪುರ 141, ಯಾದಗಿರಿ 153 ಪ್ರಕರಣಗಳು ದಾಖಲಾಗಿದೆ.
ಇಂದಿನ 25/05/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/PWdSdOqao7 @CMofKarnataka @BSYBJP @mla_sudhakar @drashwathcn @RAshokaBJP @BSBommai @CPBlr @PIBBengaluru @KarnatakaVarthe @PIBBengaluru @BBMPCOMM @BlrCityPolice @blrcitytraffic pic.twitter.com/rhWKhvZFsM
— K’taka Health Dept (@DHFWKA) May 25, 2021