covid-19 updates

ಬೆಂಗಳೂರು (ಜೂನ್ 04): ರಾಜ್ಯದಲ್ಲಿ ಇಂದು ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ನಾಲ್ವರನ್ನು ಬಲಿಪದೆದುಕೊಂಡಿದೆ. ಇದಲ್ಲದೆ ಹೊಸದಾಗಿ ಇಂದು 257 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಕೋವಿಡ್-19 ರ ಸೋಂಕಿನಿಂದ ಇಲ್ಲಿಯವರೆಗೆ ಒಟ್ಟು 57 ಜನರು ಸಾವನ್ನಪ್ಪಿದ್ದಾರೆ. ಇಂದು ನಾಲ್ವರು ಅಂದರೆ ಬೆಂಗಳೂರಿನ 65 ವರ್ಷದ ಮಹಿಳೆ ಹಾಗೂ 60 ವರ್ಷದ ಮಹಿಳೆ ಹಾಗೆಯೇ ದಾವಣಗೆರೆಯ 83 ವರ್ಷದ ಮಹಿಳೆ ಮತ್ತು ಗದಗದ 44 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಇಂದು ಸೋಂಕಿಗೆ ಒಳಗಾದವರ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ಉಡುಪಿ 92, ರಾಯಚೂರು 88, ಮಂಡ್ಯ 15, ಹಾಸನ 15, ದಾವಣಗೆರೆ 13, ಬೆಳಗಾವಿ 12, ಬೆಂಗಳೂರು ನಗರ 9, ದಕ್ಷಿಣ ಕನ್ನಡ 4, ಗದಗ 2, ಚಿಕ್ಕಬಳ್ಳಾಪುರ 2, ತುಮಕೂರು 1, ಮೈಸೂರು 1, ಹಾವೇರಿ 1, ಬಳ್ಳಾರಿ 1, ವಿಜಯಪುರ 1 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here