5324-new-cases-found-in-karnataka

ಬೆಂಗಳೂರು(ಜು.29): ರಾಜ್ಯದಲ್ಲಿ ಮಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದು 5503 ಪ್ರಖರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವೆರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 1,12,504 ಕ್ಕೆ ತಲುಪಿದೆ. ಇದರೊಂದಿಗೆ  ಕೋವಿಡ್-19 ರ ಸೋಂಕಿನಿಂದ 92 ಜನರು ಇಂದು ಸಾವನ್ನಪ್ಪಿದ್ದು, ಆತಂಕವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿದೆ.

ರಾಜಧಾನಿಯಲ್ಲಿ ಇಂದು 2270 ಜನರಿಗೆ ಕೊರೊನಾ ಸೋಂಕು ಇರುವುದು ದೃಡ ಪಟ್ಟಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಇಲ್ಲಿಯವರೆಗೆ ದಾಖಲಾದ ಸೋಂಕಿತರ ಸಂಖ್ಯೆ 50 ಸಾವಿರದ ಗಡಿಯನ್ನುದಾಟಿದೆ.

ಈ ನಡುವೆ, ರಾಜ್ಯದಲ್ಲಿ ಇಂದು 2397 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ ರಾಜ್ಯದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 42,901. ಇನ್ನು ಸೋಂಕಿನಿಂದ ಬಳಲುತ್ತಿರುವ 67,448 ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here