ಬೆಂಗಳೂರು (ಜೂನ್ 06): ರಾಜ್ಯದಲ್ಲಿಂದು ಹೊಸದಾಗಿ 378 ಕೋವಿಡ್-19 ಪಾಸಿಟಿವ್ ಪ್ರಖರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 5213 ಕ್ಕೆ ತಲುಪಿದೆ.
ಹೊರರಾಜ್ಯದಿಂದ ಕರ್ನಾಟಕಕ್ಕೆ ಬಂದ 333 ಮತ್ತು ವಿದೇಶಗಳಿಂದ ಬಂದ 8 ಜನರಲ್ಲಿ ಇಂದು ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಇಂದು ವಿಜಯಪುರದ 82 ವರ್ಷದ ಮಹಿಳೆ ಮತ್ತು ಬೀದರಿಂದ 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿನಿಂದಾಗಿ 59 ಜನರು ಮೃತಪಟ್ಟಂತಾಗಿದೆ.
ಇಂದು ಸೋಂಕಿಗೆ ಒಳಗಾದವರ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ಉಡುಪಿ 121, ಯಾದಗಿರಿ 103, ಕಲಬುರಗಿ 69, ದಕ್ಷಿಣ ಕನ್ನಡ 24, ಬೆಂಗಳೂರು ನಗರ 18, ವಿಜಯಪುರ 6, ದಾವಣಗೆರೆ 6, ಬೆಳಗಾವಿ 5, ಗದಗ 4, ಮಂಡ್ಯ 3, ಹಾಸನ 3, ಧಾರವಾಡ 3, ಹಾವೇರಿ 3, ಉತ್ತರ ಕನ್ನಡ 2, ಚಿಕ್ಕಬಳ್ಳಾಪುರ 2, ರಾಯಚೂರು 2, ಬೀದರ್ 1, ತುಮಕೂರು 1, ಕೋಲಾರ 1, ಕೊಪ್ಪಳ 1, ಪ್ರಕರಣಗಳು ದಾಖಲಾಗಿವೆ.
ಕೋವಿಡ್19 ಮಾಹಿತಿ: 6ನೇ ಜೂನ್ 2020
ಒಟ್ಟು ಪ್ರಕರಣಗಳು: 5213
ಮೃತಪಟ್ಟವರು: 59
ಗುಣಮುಖರಾದವರು: 1968
ಹೊಸ ಪ್ರಕರಣಗಳು: 378ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.
ಹೆಚ್ಚಿನ ಮಾಹಿತಿಗಾಗಿ: https://t.co/HIw4qtFHNH pic.twitter.com/O4t18SmPwT
— CM of Karnataka (@CMofKarnataka) June 6, 2020