coronavirus-pandemic-karnataka-siddaramaiah-bsy-govt-attempt-state-in-covid

ಬೆಂಗಳೂರು: ನರೇಂದ್ರ ಮೋದಿ ದೇಶವನ್ನು ಕೊರೋನಾ ಸೋಂಕಿನಲ್ಲಿ ವಿಶ್ವದ ನಂ 1 ದೇಶವನ್ನಾಗಿ ಮಾಡಲು ಹೊರಟರೆ, ರಾಜ್ಯದಲ್ಲಿ ಯಡಿಯೂರಪ್ಪ ಸೋಂಕಿನಲ್ಲಿ ನಂ 1 ಮಾಡಲು ಹೊರಟಿದ್ದಾರೆ. ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಕೊರೋನಾಕ್ಕಿಂತಲೂ ಅಪಾಯಕಾರಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಪ್ರತಿದಿನ ಸರಾಸರಿ 10,000 ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಸರಾಸರಿ 100 ಜನರು ಕರೋನಾ ಸೋಂಕಿನಿಂದ ಸಾವಿಗೀಡಾಗುತ್ತಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ 6.79 ಲಕ್ಷ ಜನರಿಗೆ ಸೋಂಕು ತಗುಲಿದೆ ಎಂದು ಹೇಳಿದ್ದಾರೆ.

ರಾಜ್ಯಸರ್ಕಾರ ಸಂಪೂರ್ಣವಾಗಿ ಆಡಳಿತ ವೈಫಲ್ಯವನ್ನು ಕಂಡಿದೆ. ಖಜಾನೆ ತುಂಬಿಸಲು ಮದ್ಯದಂಗಡಿ, ಮಾಲ್ ಗಳನ್ನು ತೆರೆದಿದೆ. ದೇವಾಲಯಗಳನ್ನು ತೆರೆದಿರುವ ರಾಜ್ಯಸರ್ಕಾರ ಸೋಂಕು ಹರಡಲು ಅನುವುಮಾಡಿಕೊಟ್ಟಿದೆ. ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಜನರ ನಿರ್ಲಕ್ಷ್ಯದಿಂದ ಸೋಂಕಿನ ಪ್ರಕರಣ ಉಲ್ಬಣವಾಗಿದೆ ಎಂದು ಹೇಳುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯಸರ್ಕಾರ ಕೊರೋನಾ ಸೋಂಕಿನ ಸಮಯದಲ್ಲಿ ಜನರ ಸೇವೆಯನ್ನು ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿದೆ. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದ ಸದಸ್ಯರು ಹಣಮಾಡುವ ದಂಡೆಯಲ್ಲಿ ತೊಡಗಿದ್ದಾರೆ. ಕರೋನಾ ನಿಯಂತ್ರಣಕ್ಕಾಗಿ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಸತ್ಯನಿಷ್ಠರಾಗಿ ಜನರ ಮುಂದೆ ತಿಳಿಸುವ ಧೈರ್ಯ ಮುಖ್ಯಮಂತ್ರಿಗೆ ಇದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here