one-more-die-of-covid-19-in-karnataka

ಬೆಂಗಳೂರು ( ಜೂನ್ 1): ರಾಜ್ಯದಲ್ಲಿ ಇಂದು ಕೊರೊನಾ ಸೋಂಕು 187 ಮಂದಿಗೆ ಬಂದಿದ್ದು, ಇದರೊಂದಿಗೆ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3408 ಕ್ಕೆ ಏರಿಕೆಯಾಗಿದೆ. ಇಂದು ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಆತಂಕವನ್ನು ಉಂಟುಮಾಡುವಂತಿದೆ.

ಇನ್ನು ಜಿಲ್ಲಾವಾರು ಪತ್ತೆಯಾದ ಸೋಂಕಿತರ ಸಂಖ್ಯೆಯನ್ನು ನೋಡುವುದಾದರೆ, ಅತ್ಯಧಿಕ ಉಡುಪಿ 73, ಬೆಂಗಳೂರು ನಗರ 28, ಕಲಬುರಗಿ 24, ಹಾಸನ 16, ಮಂಡ್ಯ 15, ಶಿವಮೊಗ್ಗ 9, ಚಿಕ್ಕಬಳ್ಳಾಪುರ 5, ದಕ್ಷಿಣ ಕನ್ನಡ 4, ಬಳ್ಳಾರಿ 3, ಬಾಗಲಕೋಟೆ 2, ಬೀದರ್ 2, ಧಾರವಾಡ 2, ಕೋಲಾರ 1, ಹಾವೇರಿ 1, ವಿಜಯಪುರ 1, ರಾಮನಗರ 1 ಪ್ರಕರಣಗಳು ದಾಖಲಾಗಿವೆ.


ಇಂದು ಕೋವಿಡ್ ಸೋಂಕಿನಿಂದ ಒಬ್ಬ ವ್ಯಕ್ತಿ ಮೃತ ಪಟ್ಟಿದ್ದಾರೆ. ಬೆಂಗಳೂರಿನ ನಿವಾಸಿಯಾದ ಇವರಿಗೆ 90 ವರ್ಷ ವಯಸ್ಸಾಗಿತ್ತು. ಇವರು ಕೊರೊನಾ ಮತ್ತು ಬಹುಅಂಗಾಂಗ ವೈಪಲ್ಯದಿಂದಾಗಿ ಇಂದು ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಮೃತರ ಸಂಖ್ಯೆ 52 ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಇಂದು 110 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 1328 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದಂತಾಗಿದೆ. ಇನ್ನು 2026 ಪ್ರಕರಣಗಳು ಸಕ್ರೀಯರಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here