ಕೊರೊನಾ ಸೋಂಕು ಹರಡುವ ಬೀತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು. ಆದರೆ ಸದ್ಯ ಸ್ವಲ್ಪ ನಿಯಂತ್ರಕ್ಕೆ ಬಂದಿರು ಹಾಗೂ ಆರ್ಥಿಕ ವ್ಯವಸ್ಥೆ ಸುದಾರಣೆಯ ದೃಷ್ಟಿಯಿಂದ ದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಜಿಲ್ಲಾ ವಾರು ಸೋಂಕಿತರ ಪ್ರಮಾಣವನ್ನು ಲೆಕ್ಕಕ್ಕೆ ತೆಗೆದುಕೊಂಡು ನಾಲ್ಕು ಝೋನ್ ಗಳಾಗಿ ಸರಕಾರ ವಿಂಗಡಿಸಿ ಆದೇಶವನ್ನು ಹೊರಡಿಸಿದೆ.
ಕೇಂದ್ರ ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ರಾಜ್ಯದಲ್ಲಿ 15 ಕ್ಕಿಂತ ಹೆಚ್ಚಿನ ಸಕ್ರೀಯ ಸೊಂಕಿತರನ್ನು ಹೊಂದಿರುವ 7 ಜಿಲ್ಲೆಗಳನ್ನು ಮತ್ತು 14 ತಾಲೂಕುಗಳನ್ನು ರೆಡ್ ಝೋನ್ ವ್ಯಾಪ್ತಿಗೆ ಸೇರಿಸಲಾಗಿದೆ. ಇದಲ್ಲದೆ ರೆಡ್, ಆರೆಂಜ್, ಯೆಲ್ಲೋ ಮತ್ತು ಗ್ರೀನ್ ಎಂದು 4 ಝೋನ್ ಗಳಾಗಿ ಜಿಲ್ಲೆಗಳನ್ನು ವಿಂಗಡಿಸಿದೆ. ಸೋಂಕಿತರ ಸಂಖೆಗಳ ಪ್ರಕಾರ ರೆಡ್ ಝೋನ್ ನಲ್ಲಿ 6, ಆರೆಂಜ್ ಝೋನ್ ನಲ್ಲಿ 5, ಯೆಲ್ಲೋ ಝೋನ್ ನಲ್ಲಿ 5 ಮತ್ತು ಗ್ರೀನ್ ಝೋನ್ ನಲ್ಲಿ 14 ಜಿಲ್ಲೆಗಳು ಬರುತ್ತವೆ.
ಇದನ್ನೂ ಓದಿರಿ: ಕೆಮ್ಮು, ಜ್ವರ ಅಷ್ಟೇ ಅಲ್ಲ ಈ ಲಕ್ಷಣಗಳು ಕೂಡಾ ಕೊವಿಡ್-19 ಪರಿಣಾಮವಾಗಿರಬಹುದು
ಸೋಂಕಿತರ ಸಂಖ್ಯೆಯ ಅನುಸಾರವಾಗಿ ವಿಂಗಡಿಸಲಾದ ಝೋನ್ ಗಳ ಪಟ್ಟಿ ಈ ಕೆಳಗಿನಂತಿದೆ:
ರೆಡ್ ಝೋನ್ :
ಬೆಂಗಳೂರು ನಗರ
ಮೈಸೂರು
ಬೆಳಗಾವಿ
ವಿಜಯಪುರ
ಬಾಗಲಕೋಟೆ
ಕಲಬುರಗಿ
ಆರೆಂಜ್ ಝೋನ್:
ಬೀದರ್
ಬಳ್ಳಾರಿ
ದಕ್ಷಿಣ ಕನ್ನಡ
ಮಂಡ್ಯ
ಧಾರವಾಡ
ಯೆಲ್ಲೋ ಝೋನ್:
ಬೆಂಗಳೂರು ಗ್ರಾಮಾಂತರ
ತುಮಕೂರು
ಗದಗ
ಉತ್ತರ ಕನ್ನಡ
ಚಿಕ್ಕಬಳ್ಳಾಪುರ
ಗ್ರೀನ್ ಝೋನ್:
ಶಿವಮೊಗ್ಗ
ರಾಮನಗರ
ಕೋಲಾರ
ಹಾಸನ
ಚಿಕ್ಕಮಂಗಳೂರು
ಯಾದಗಿರಿ
ಹಾವೇರಿ
ಕೊಪ್ಪಳ
ರಾಯಚೂರು
ಚಾಮರಾಜನಗರ
ಉಡುಪಿ
ಕೊಡಗು
ದಾವಣಗೆರೆ
ಚಿತ್ರದುರ್ಗಾ