corona-virus-karnataka-registers-highest-single-day

ಬೆಂಗಳೂರು (31 ಮೇ): ರಾಜ್ಯದಲ್ಲಿ ಇಂದು ಕೋವಿಡ್-19 ದಾಳಿಗೆ 299 ಜನರು ಒಳಗಾಗಿದ್ದು, ಅಕ್ಷರಶಃ ಕರ್ನಾಟಕ ಕಂಗಾಲಾಗಿದೆ. 24 ಗಂಟೆಯ ಅವಧಿಯಲ್ಲಿ ಇಷ್ಟೊಂದು ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 253 ಜನರು ಮಹಾರಾಷ್ಟ್ರದಿಂದ ಕರ್ನಾಟಕಕ್ಕೇ ಬಂದವರಾಗಿದ್ದಾರೆ.

ಕರ್ನಾಟಕದಲ್ಲಿ ಕಡಿಮೆ ಪ್ರಮಾಣದಲ್ಲಿ ಇರುತ್ತಿದ್ದ ಕೇಸುಗಳು ಇಂದು 299 ಸಂಖ್ಯೆಯಲ್ಲಿ ಬರುವ ಮೂಲಕ ಒಂದೇ ದಿನದಲ್ಲಿ ದಾಖಲಾದ ಇಲ್ಲಿಯವರೆಗಿನ ಎಲ್ಲಾ ಸೋಂಕುಗಳ ಸಂಖ್ಯೆಯನ್ನು ಹಿಂದಕ್ಕೆ ಹಾಕಿದೆ. ನಿನ್ನೆ 5 ಗಂಟೆಯಿಂದ ಇಂದಿನ 5 ಗಂಟೆಯವರೆಗೆ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದು, ಇವರಲ್ಲಿ 253 ಜನರು ಮಹಾರಾಷ್ಟ್ರದಿಂದ ಕರ್ನಾಟಕಕ್ಕೇ ಬಂದವರಾಗಿದ್ದಾರೆ.

ಇನ್ನು ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುವುದಾದರೆ ರಾಯಚೂರು 83, ಯಾದಗಿರಿ 44, ಬೀದರ್ 33, ಕಲಬುರಗಿ 28, ವಿಜಯಪುರ 26, ಬೆಂಗಳೂರು ನಗರ 21, ದಕ್ಷಿಣಕನ್ನಡ 14, ಮಂಡ್ಯ 13, ಬೆಳಗಾವಿ 13, ಉಡುಪಿ 10, ದಾವಣಗೆರೆ 6, ಉತ್ತರ ಕನ್ನಡ 5, ಬಳ್ಳಾರಿ 1, ಶಿವಮೊಗ್ಗ 1, ಕೋಲಾರ 1 ಪ್ರಕರಣಗಳು ದಾಖಲಾಗಿವೆ. 

 

LEAVE A REPLY

Please enter your comment!
Please enter your name here