ಪ್ರಪಂಚವೇ ಕೊರೊನಾ ವೈರಸ್ ನಿಂದ ಸಂಕಷ್ಟವನ್ನು ಎದುರಿಸುತ್ತಿದ್ದು, ಇದಕ್ಕೆ ವ್ಯಾಕ್ಸಿನ್ ಕಂಡುಹಿಡಿಯಲು ಹೆಣಗಾಡುತ್ತದೆ. ಈ ನಡುವೆ ಚೀನಾ ಮತ್ತು ಅಮೇರಿಕದ ಕಂಪನಿಗಳು ವ್ಯಾಕ್ಸಿನ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿವೆ. ಇವುಗಳು ಈಗಾಗಲೇ ತಮ್ಮ ವ್ಯಾಕ್ಸಿನ್ ಪ್ರಯೋಗವನ್ನು ಮೂರನೇ ಹಂತದಲ್ಲಿ ಪರೀಕ್ಷಿಸಿದ್ದು, ಯಶಸ್ಸನ್ನು ಕಂಡಿವೆ ಎಂದು ಹೇಳಲಾಗುತ್ತಿವೆ. ಈ ಎಲ್ಲ ಘಟನೆಗಳನ್ನು ನೋಡಿದಾಗ ಇಡೀ ಜಗತ್ತು ಕೊರೊನಾ ಲಸಿಕೆಯ ಹಿಂದೆ ಬಿದ್ದಿರುವುದಂತೂ ಸುಳ್ಳಲ್ಲ.
ಈ ನಡುವೆ ರಷ್ಯದ ತಜ್ಞರ ತಂಡ ವೈರಸ್ ನಾಶಮಾಡಬಲ್ಲ ಸುಲಭ ವಿಧಾನವೊಂದನ್ನು ಕಂಡುಹಿಡಿದಿದ್ದು, ಈ ಮೂಲಕ ಶೇ. 99.9 ರಷ್ಟು ನಾಶಮಾಡಬಹುದು ಎಂದು ಕಂಡುಕೊಂಡಿವೆ. ಅವರ ಈ ಅಧ್ಯಯನದಲ್ಲಿ ವೈರಸ್ ಗಳು ಕೇವಲ 72 ಗಂಟೆಗಳಲ್ಲಿ ನಾಶವಾಗಿರುವುದನ್ನು ಕಂಡುಕೊಂಡರು. ಆದ್ದರಿಂದ ಈ ವಿಧಾನವು ವೈರಸ್ ತಡೆಗಟ್ಟಲು ಸಹಕಾರಿಯಾಗಬಲ್ಲದು ಎಂದು ತಜ್ಞರ ತಂಡ ಹೇಳಿಕೊಂಡಿದೆ.
ರಷ್ಯಾದ ವೆಕ್ಟರ್ ಸ್ಟೇಟ್ ರಿಸರ್ಚ್ ಸೆಂಟರ್ ಆಫ್ ವೈರೋಲಜಿ ಹಾಗೂ ಬಯೋಟೆಕ್ನಾಲಜಿ ಸಂಸ್ಥೆಯು ನಡೆಸಿದ ಅಧ್ಯಯನದ ಪ್ರಕಾರ ಶುದ್ದವಾದ ಹಾಗೂ ಉಗುರು ಬೆಚ್ಚಗಿನ ನೀರು ವೈರಸ್ ಕೊಲ್ಲುವುದನ್ನು ಕಂಡುಕೊಂಡಿದೆ. ಶುದ್ಧ ಹಾಗೂ ಬೆಚ್ಚಗಿನ ನೀರನ್ನು ಸೇವನೆ ಮಾಡಿದ 25 ಗಂಟೆಗಳಲ್ಲಿ ಶೇಕಡಾ 90 ರಷ್ಟು ಮತ್ತು 72 ಗಂಟೆಗಳಲ್ಲಿ ಶೇಕಡಾ 99.9 ರಷ್ಟು ವೈರಸ್ ಗಳು ನಾಶವಾದವು. ಅಧ್ಯಯನ ನಡೆಸಿದ ಈ ತಂಡ ಬಿಸಿ ನೀರಿನಲ್ಲಿ ಕ್ಷಣಾರ್ಧದಲ್ಲಿಯೇ ಸಾಯುತ್ತಿದೆ ಎಂದು ತಿಳಿಸಿದೆ.
ವರದಿಯು ಬಹಿರಂಗ ಪಡಿಸಿದ ಅಂಶಗಳ ಪ್ರಕಾರ ಬಿಸಿ ಬಿಸಿಯಾದ ನೀರನ್ನು ಕುಡಿಯುತ್ತ ಇರುವುದರಿಂದ ಸೋಂಕಿನ ಪ್ರಭಾವ ಕಡಿಮೆಯಾಗಿ, ಅನಾಹುತಗಳು ತಪ್ಪುತ್ತವೆ ಎಂದು ತಿಳಿಸಿದೆ.