ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡ ಕಾಂಗ್ರೆಸ್ ಸೋಶಿಯಲ್ ಮೀಡಿಯಾ : ನೆಟ್ಟಿಗರಿಂದ ಪಂಚ..!

ಲೋಕಸಭಾ ಚುನಾವಣೆ ಹತ್ತಿರದಲ್ಲಿಯೇ ಇರುವುದರಿಂದ ಒಬ್ಬರ ಮೇಲೆ ಒಬ್ಬರು ಆರೋಪಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅಂತೆಯೇ ಕಾಂಗ್ರೆಸ್ ಸಹ ತನ್ನ ಟ್ವಿಟ್ಟರ್ ಖಾತೆಯಲ್ಲಿ ನರೇಂದ್ರ ಮೋದಿಯವರ ಕಾಲೆಳೆಯಲು ಪ್ರಯತ್ನಿಸಿದೆ. ಆದರೆ ಕಾಲೆಳೆಯುವ ಬರದಲ್ಲಿ ವಿಡಿಯೋ ಎಡಿಟ್ ಮಾಡಿ ಅಪ್ಲೋಡ್ ಮಾಡಿದ್ದು, ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಪ್ರಸ್ತುತ ವಿಶ್ವಸಂಸ್ಥೆಯಲ್ಲಿ ಮಸೂದ್ ಅಜರ್ ನನ್ನು ಅಂತರರಾಷ್ಟ್ರೀಯ ಉಗ್ರ ಎಂದು ಘೋಷಣೆ ಮಾಡುವಲ್ಲಿ ತೊಡಕಾಗಿರುವ ಚೈನಾದ ಕ್ಷಿ –ಜಿಂಗ್-ಪಿಂಗ್ ಅವರಲ್ಲಿ ನರೇಂದ್ರ ಮೋದಿ ಸಹಕರಿಸಲು ಕೇಳಿಕೊಳ್ಳುತ್ತಿರುವಂತೆ ಎಡಿಟ್ ಮಾಡಿದ್ದು, ಕಾಲೆಳೆಯುವ ಬರದಲ್ಲಿ ಸ್ವಲ್ಪ ಎಡವಟ್ಟು ಮಾಡಿಕೊಂಡಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಕ್ಕ ಪ್ರತ್ಯುತ್ತರ ನೀಡಿದ್ದು, ಕಾಂಗ್ರೆಸ್ ಮುಜುಗರಕ್ಕೆ ಈಡಾಗಿದೆ.

 

SPONSORED CONTENT

LEAVE A REPLY

Please enter your comment!
Please enter your name here