ಕಲೋಲ್: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರ ‘ರಾವಣ’ ಹೇಳಿಕೆಗೆ ಪ್ರಧಾನಿ ಮೋದಿ ಟಾಂಗ್ ಕೊಟ್ಟಿದ್ದು, ಮೋದಿಯನ್ನು ಯಾರು ಹೆಚ್ಚು ನಿಂದಿಸಬಹುದು ಎಂಬ ಕುರಿತು ಕಾಂಗ್ರೆಸ್ ನಲ್ಲಿ ಸ್ಪರ್ಧೆಯಿದೆ. ಅವರಿಗೆ ಪಾಠಕಲಿಸಲು 5 ನೇಯ ತಾರೀಕಿನಂದು ಬಿಜೆಪಿಗೆ ಮತ ನೀಡಿ ಎಂದು ನರೇಂದ್ರ ಮೋದಿಯವರು ಹೇಳಿದ್ದಾರೆ.
ಗುಜರಾತಿನ ಕಲೋಲ್ ನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಮಾತನಾಡುತ್ತಾ, ಮೋದಿಯನ್ನ ಯಾರು ಹೆಚ್ಚು ನಿಂದಿಸುತ್ತಾರೆ ಎಂಬುದಕ್ಕೆ ಕಾಂಗ್ರೆಸ್ನಲ್ಲಿ ಸ್ಪರ್ಧೆ ಇದೆ, ಕಾಂಗ್ರೆಸ್ ನಾಯಕರು ಈ ರೀತಿ ಕೆಟ್ಟ ಮಾತುಗಳನ್ನು ಆಡುತ್ತಿರುವುದರಲ್ಲಿ ನನಗೆ ಆಶ್ಚರ್ಯವಿಲ್ಲ. ಇಂತಹ ಕೆಟ್ಟ ಮಾತುಗಳನ್ನು ಆಡಿದ ನಂತರವೂ ಕಾಂಗ್ರೆಸ್ ಪಕ್ಷವಾಗಲಿ ಅಥವಾ ನಾಯಕರಾಗಲಿ ಇಂದಿಗೂ ಪಶ್ಚಾತ್ತಾಪ ಪಡುವುದಿಲ್ಲ ಎಂಬ ಕುರಿತು ನನಗೆ ಆಶ್ಚರ್ಯವಾಗುತ್ತದೆ ಎಂದು ಹೇಳಿದರು.
ಈ ದೇಶದ ಪ್ರಧಾನಿಯನ್ನು ಕೆಟ್ಟದಾಗಿ ನಿಂದಿಸುವುದು ಅವರ ಹಕ್ಕು ಎಂದು ತಿಳಿದಿದ್ದಾರೆ. ಖರ್ಗೆಯವರು ಏನು ಹೇಳಬೇಕು ಎಂದುಕೊಂಡಿದ್ದರೋ ಅದನ್ನು ಹೇಳಿದ್ದಾರೆ. ನಾನು ಅವರನ್ನು ಗೌರವಿಸುತ್ತೇನೆ. ಗುಜರಾತ್ ಇದು ರಾಮಭಕ್ತರ ನಾಡು ಎಂಬುದು ಕಾಂಗ್ರೆಸ್ ಗೇ ಗೋತ್ತಿದ್ದಂತೆ ಇಲ್ಲ. ರಾಮಭಕ್ತರ ನಾಡಿನಲ್ಲಿ 100 ತಲೆಯ ರಾವಣನಿಗೆ ಹೋಲಿಸಿದವರಿಗೆ ಸರಿಯಾಗಿ ಪಾಠ ಕಲಿಸಬೇಕಿದೆ ಎಂದು ಮೋದಿಯವರು ಹೇಳಿದ್ದಾರೆ.
ಮಂಗಳವಾರ ಗುಜರಾತ್ ನಲ್ಲಿ ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಪ್ರಧಾನಿ ಮೋದಿ ತಮ್ಮ ಕೆಲಸವನ್ನು ಮರೆತು, ಕಾರ್ಪೊರೇಷನ್ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲೂ ಪ್ರಚಾರ ಮಾಡುತ್ತಾರೆ ಮತ್ತು ತಮ್ಮ ಮುಖ ನೋಡಿ ಮತ ಹಾಕಿ ಎಂದು ಹೇಳುತ್ತೀರಾ. ಆದರೆ ನಾವು ನಿಮ್ಮ ಮುಖವನ್ನು ಎಷ್ಟು ಬಾರಿ ನೋಡಬೇಕು? ನಿಮಗೆ ಎಷ್ಟು ರೂಪಗಳಿವೆ? ನಿಮಗೆ ರಾವಣನಂತೆ 100 ತಲೆಗಳಿವೆಯೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು.
ಇದನ್ನೂ ಓದಿ: 86 ನೇ ಕನ್ನಡ ಸಾಹಿತ್ಯ ಸಮ್ಮೇಳನ: ಪುಸ್ತಕ/ವಾಣಿಜ್ಯ ಮಳಿಗೆ ತೆರೆಯಲು ಇಲ್ಲಿದೆ ಮಾಹಿತಿ